ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರದೇಶ ೨-೩. ] ಶರವೇನಹರಿತ ' M ೨ ನೆಯ ಪ್ರವೇಶ.-( ರಾಜವೀಧಿಯಲ್ಲಿ ಒಬ್ಬ ಡಂಗುರದವನು ಪತ್ರಿಕೆಯನ್ನು ಹಿಡಿದುಕೊಂಡು ಪ್ರವೇಶಿಸುವನು. ಅವನ ಹಿಂದೆ ಬಹು ಜನಗಳು ಬರುವರು.) » ಡಂಗುರದವನು-ಶೂರಾಗ್ರೇಸರನಾದ ನಮ್ಮ ದಳಪತಿ ಶೂರಸೇನನು ಆಜ್ಞಾಪಿಸುವದೇನಂದರೆ:-ಶತ್ರುಗಳಾದ ತುರುಕರ ಸೇನಾಸಾಮಗ್ರಿಯ ಜಹಜುಗಳೆಲ್ಲಾ ಸಮುದ್ರದಲ್ಲಿ ಮುಳುಗಿಹೋದವೆಂಬ ವರ್ತಮಾನ ಬಂದುದಕ್ಕಾಗಿಯ ಮತ್ತೂ ತನ್ನ ವಿವಾಹಮಹೋತ್ಸವದ ಕಾಲಕ್ಕಾ ಗಿಯ, ಪ್ರತಿ ಮನುಷ್ಯರೂ ನೂತನವಸಾದಿಗಳನ್ನು ಧರಿಸಿಕೊಂಡು ತಮಗೆ ಬೇಕಾದ ಉತ್ಸಾಹದಲ್ಲಿ ನಿರತರಾಗಿರಬಹುದು. ಮನೋರಂಜನ ಕರವಾದ ಮಹಲುಗಳ ಮತ್ತು ಉಪವನಗಳ ಬಾಗಿಲುಗಳು ವಿನೋದಕ್ಕಾಗಿ ತೆಗೆಯಲ್ಪಟ್ಟಿರುವವು ಪ್ರತಿ ಮನೆಗಳ ದ್ವಾರಗಳಲ್ಲಿ ದೀಪಮಾಲೆಯನ್ನಿಟ್ಟು, ಬಾಣ ಬಿರಸು ಮುಂತಾದವುಗಳನ್ನೆಲ್ಲಾ ಹಾರಿಸಬಹುದು. ಈ ಸಿಂಹಳ ದ್ವೀಪವನ್ನೂ, ಘನತೆಯುಳ್ಳ ನಮ್ಮ ಶೂರಸೇನ ದಳಪತಿಗಳನ್ನೂ ದೇವರು ರಕ್ಷಿಸಲಿ. (ಎಲ್ಲರೂ ಹೋಗುವರು.) -- - ಆ ದಿ ೩ ನೆಯ ಪ್ರವೇಶ.-- (ಕೋಟೆಯೊಳಗೆ ಒಂದು ಸೌಧದಲ್ಲಿ ಶೂರಸೇನನೂ, ಮೋಹನೆಯ, ವಿಜಯಧ್ವಜ, ಪರಿಜನರೂ ಪ್ರವೇಶಿಸುವರು.)

  • ಶೂರಸೇನ-ಸಖನೆ ! ಈ ರಾತ್ರಿ ಪಹರೆಯವರನ್ನು ಜಾಗರೂಕತೆ ಯಿಂದ ನೀನೇ ನೋಡಿಕೊಳ್ಳಬೇಕು. ಯಾಕೆಂದರೆ, ವಿನೋದಪಡುವದ ರಲ್ಲಿಯೂ ವಿವೇಕದ ಎಲ್ಲೆಯನ್ನು ದಾಟದಿರುವದನ್ನು ನಾವೇ ನಡೆದು ತೋರಿಸತಕ್ಕದ್ದು ಉಚಿತವಲ್ಲವೆ ?

ವಿಜಯಧ್ವಜ-ಕರ್ತವ್ಯವಾದದ್ದನ್ನೆಲ್ಲಾ ದೇವದತ್ತನಿಗೆ ವಿಜ್ಞಾಪಿಸಿರು ವೆನು. ಆದರೂ ನನ್ನ ಕಣ್ಣಾರೆ ನೋಡಿಕೊಳ್ಳುವೆನು. ಶೂರಸೇನ-ದೇವದತ್ತನಂತೂ ಬಹಳ ಸತ್ಯವಂತನು. ಸಖನೆ ! ಹೋಗಿಬರುವೆನು. ನಾಳೆ ಬೆಳಗ್ಗೆ ಕೂಡಿದಮಟ್ಟಿಗೆ ಬೇಗನೆ ನನ್ನನ್ನು ನೋಡು. (ಮೋಹನೆಯನ್ನು ಕುರಿತು) ಪ್ರಿಯಳೆ ! ಇನ್ನು ಹೊಗೋಣ, ಬಾ. (ವಿಜಯಧ್ವಜವನ್ನು ನೋಡಿ) ಹೋಗಿ ಬರುವೆನು. (ವಿಜಯಧ್ವ ಜನ ಹೊರತು ಎಲ್ಲರೂ ಹೋಗುವರು)