* ೧ 46 ಕೂರಸೇನಚರಿತ' [ ಅಂಕ ೨, ಬಹಳ ಪಶ್ಚಾ ತಾಪವುಂಟಾಗುವದು. ಶೂರಸೇನನು ಈತನನ್ನು ನಂಬುಗೆ ಗಡೆಯಾದ ಪದವಿಯಲ್ಲಿ ಇಟ್ಟಿರುವದು, ಕದಾಚಿತ್ ಈ ದೋಷದಿಂದ ಈ ದೀಪದವರಿಂದ ಏನಾದರೂ ಅನರ್ಥಸಂಭವಿಸೀತೆಂದು ಭಯವಾಗುವದು. ಮಹಾಮತಿ -ಆದರೆ ಇವನು ಯಾವಾಗಲೂ ಹೀಗೆಯೆ ? ದೇವದತ್ತೆ--ಯಾವಾಗಲೂ ಇದು ಇವನ ನಿದ್ರೆಗೆ ಪ್ರಸ್ತಾವನೆಯಾ ಗಿರುವದು. ಪಾನವು ಇವನನ್ನು ತಟ್ಟದಿದ್ದರೆ ನಿದ್ರೆಯೇ ಹತ್ತುವದಿಲ್ಲ. ಮಹಾಮತಿ-ಹಾಗಾದರೆ ಇನ್ನು ನನ್ನ ದಳಪತಿಗೆ ಎಚ್ಚರಿಸತಕ್ಕದು ಯುಕ್ತ, ಅವನಿಗೆ ತಿಳಿಯದೋ ಏನೋ, ಒಂದುವೇಳೆ ದೋಪದೃಷ್ಟಿ ಯಲ್ಲದ್ದರಿಂದ ವಿಜಯಧ್ವಜನ ಗುಣವನ್ನೆ ಎಣಿಸಿ ದೋಷವನ್ನು ಕಾಣದಿ ರಬಹುದಲ್ಲವೆ? ( ರಾಷ್ಟ್ರ ಯನು ಪ್ರವೇಶಿಸುವನು ) ದೇವದತ್ತ-( ಮರೆಯಾಗಿ ರಾಷ್ಟ್ರ ಯನನ್ನು ಕುರಿತು ) ರಾ) ಯನ ! ಇದೇಕೆ ಬಂದೆ ? ವಿಜಯಧ್ವಜನ ಬೆಂಬಿಡಬೇಡ. ಹೊಗು. ( ರಾಷ್ಟಿ ಯನು ಹೋಗುವನು.) ಮಹಾಮತಿ-ಯೋಗ್ಯನಾದ ವಿದೇಶಿಯು ತನ್ನ ಎರಡನೆಯ ಪದವಿ ಯಲ್ಲಿ ಇಂತಾ ನೈಸರ್ಗಿಕದೋಷವುಳ್ಳವನನ್ನು ಸೇರಿಸುವದು ಬಹಳ ಅಪಾ ಯಕರವಾವದ್ದು, ಮತ್ತು ಕೇವಲ ಪಶ್ಚಾತ್ತಾಪಕರವಾದದ್ದು. ಇದನ್ನು ನಮ್ಮ ದಳಪತಿಗೆ ಎಚ್ಚರಿಸುವದು ತಕ್ಕ ಕಾರವಾಗಿ ತೋರುವದು, ದೇವದತ್ತ-ಮನೋಹರವಾದ ಈ ದೀಪವನ್ನು ಕೊಟ್ಟರೂ, ನಾನು ಮಾತ್ರ ಈ ಕೆಲಸವನ್ನು ಮಾಡುವದಿಲ್ಲ. ಈ ವಿಜಯಧ್ವಜನು ನನಗೆ ಪರಮಮಿತ್ರನು. ಅವನ ಈ ದುರ್ಗುಣವನ್ನು ಹೋಗಲಾಡಿಸುವದಕ್ಕಾಗಿ ಏನು ಪ್ರಯತ್ನವನ್ನಾದರೂ ಮಾಡುವೆನು, (ತೆರೆಯಲ್ಲಿ ಮೊರೆಯೊ! ಮೊರೆಯೊ! ಎಂದು ಒಬ್ಬನು ಕೂಗುವನು ) ಕೇಳಿ ಅದೇನು ಕೂಗು! (ರಾಷ್ಟ್ರ ,ಯವನ್ನು ಬೆನ್ನಟ್ಟಿಕೊಂಡು ವಿಜಯಧ್ವಜನು ಪ್ರವೇಶಿಸುವನು.) ವಿಜಯಧ ಜಿ-ಟೀ ! ಛೇ ! ನೀಚನೆ ! M
ಪುಟ:ಶೂರಸೇನ ಚರಿತ್ರೆ.djvu/೫೭
ಗೋಚರ