ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50 ಶೂರಸೇನರಂತೆ : [ಅಂಕ ೨. wwwwwwwww ದೇವದತ್ತನೆ ! ಈ ಕೋಲಾಹಲದಿಂದ ಗಾಬರಿಯಾದವರನ್ನೆಲ್ಲಾ ಸಂತೈಸಿಕೊಂಡು ನೀನು ಬಹಳ ಜಾಗರೂಕನಾಗಿರು. ( ದೇವದತ್ತ ವಿಜಯಧ್ವಜರು ಹೊರತಾಗಿ ಎಲ್ಲರು ಹೊಗುವರು. ) - ದೇವದತ್ತ-ಸಾಮಿ! ಫೌಜುದಾರರ ತಮಗೇನಾದರೂ ಗಾಯವಾ ಯಿತೆ ? ವಿಜಯಧ್ವಜ-ಹೌದು ವೈದ್ಯನಿಂದಲೂ ಮಾಯಿಸುವುದಕ್ಕೆ ಅಸಾಧ್ಯ ವಾದ ಗಾಯವಾಯಿತು. - ದೇವದತ್ತ-ಅಯ್ಯೋ ! ದೇವರು ಕಾಪಾಡಲಿ. ವಿಜಯಧ್ವಜ-ಅಯ್ಯೋ ! ಶಾಶ್ವತವಾದ ಕೀರ್ತಿಶರೀರವನ್ನು ಕಳ ಕೊಂಡೆನು. ಅಸ್ಥಿರವಾದ ಈ ಶರೀರವು ನಿಂತಿತು. ದೇವದತ್ತ-ಅಯ್ಯೋ ! ನಾನು ನಿಮ್ಮ ಶರೀರಕ್ಕೇನೋ ಗಾಯವಾ ದಕ್ಕೆ ವ್ಯಸನಪಡುತ್ತೀರಿ ಎಂದು ತಿಳಿದಿದ್ದೆ. ಇಷ್ಟೆಯೆ ; ಕೀರ್ತಿಯೆಂಬುದು ನಿಪ್ಪ ಯೋಜನಪದಾರ್ಥವು, ಯೋಗ್ಯತೆ ಇದ್ದವನಿಗೆ ಬರುವದಿಲ್ಲ; ಇಲ್ಲ ದಿದ್ದವನಿಗೆ ಬರುತ್ತೆ. ಹೋಗಲಿಲ್ಲ ಎಂದು ತಿಳಿದರೆ ಹೋಗಲಿಲ್ಲ. ಸಾಕು ಸಾಕು ! ಇದಕ್ಕೇತಕ್ಕೆ ವ್ಯಸನಪಡುವೆ. ಮತ್ತೆ ದಳಪತಿಯ ಪ್ರೇಮವನ್ನು ಸಂಪಾದಿಸಿಕೊಳ್ಳುವದಕ್ಕೆ ಅನೇಕ ಮಾರ್ಗಗಳಿಲ್ಲವೆ ? ಆತನು ಲೋಕಾಪ ವಾದ ಭಯಕ್ಕಾಗಿ ನಿನ್ನ ಅಧಿಕಾರವನ್ನು ತೆಗೆದನೇ ಹೊರತು ನಿನ್ನ ಮೇಲಣ ದ್ವೇಷಕ್ಕಾಗಿ ಅಲ್ಲ. ಪುನಕ್ಕ ನೀನು ಕೇಳಿಕೊಂಡಲ್ಲಿ ಅನುಗ್ರಹಿ ಸುವನು. ಆಯಿತು, ನೀನು ಅಟ್ಟಿಕೊಂಡು ಬಂದೆಯಲ್ಲಾ ಅವನ್ಯಾರು ? ಅವನು ನಿನಗೇನು ಮಾಡಿದನು ? ವಿಜಯಧ್ವಜ-ಅದೇನೋ ನಾನು ಕಾಣೆ; ನನ್ನ ಮನಸ್ಸಿಗೆ ಏನೇನೋ ಹೊಳೆಯುತ್ತೆ. ಯಾವದೂ ಸ್ಪಷ್ಟವಲ್ಲ. ಅಯ್ಯೋ ! ದೇವರೆ! ನನ್ನ ಬಾಯಿ ನನ್ನ ಹೃದಯಕ್ಕೆ ದ್ರೋಹಿ ಆಯಿತಲ್ಲಾ. ಈ ಹಾಳು ಮದಕರ ಪದಾರ್ಥ ಸೇವನೆಯಿಂದ ನಾವು ಮೃಗಗಳಾದೆವಲ್ಲ. ದೇವದತ್ತ.ಸಾಕು! ಸಾಕು ! ಸುಮ್ಮನಿರು; ಮಿತವಾಗಿ ಸೇವಿಸಿದರೆ ಒಳ್ಳೇದೆಸರಿ. ಅದನ್ನು ನೀನು ದೂಷಿಸಬೇಡ, ಮುಂದೆ ನೀನು ಮಾಡತಕ್ಕದ್ದನ್ನು ಹೇಳುವೆನು ಕೇಳು. ನಮ್ಮ ದಳಪತಿಯು ಮೋಹನೆಯಲ್ಲಿ ತನ್ನ ಜೀವ