51 MMMMM ಪ್ರವೇಶ ೩.} ಶೂರಸೇನಚರಿತ ವನ್ನು ಇಟ್ಟಿರುವನು. ಆದ್ದರಿಂದ ಈಗ್ಗೆ ಅವಳ ದಳಪತಿಯು, ಆಕೆಗೆ ನಿನ್ನ ಸಂಗತಿಯನ್ನೆಲ್ಲ ತಿಳಿಸಿ ಅವಳ ಸಹಾಯವನ್ನು ಬೇಡಿಕೊ. ಆಕೆ ಯಾದರೆ ಬಹು ದಯಾವಂತೆ. ಆಕೆ ಬೇಡಿಕೊಂಡದ್ದಕ್ಕೆ ಹೆಚ್ಚಾಗಿ ಉಪ ಕಾರಿಸದಿದ್ದರೆ ಅದೇ ತನ್ನ ಗುಣಕ್ಕೆ ಕುಂದೆಂದು ತಿಳವಳು. ಅವಳ ಪತಿಗೂ ನಿನಗೂ ಮುರಿದ ಪ್ರೇಮಬಂಧವನ್ನು ಮೊದಲಿಗಿಂತ ಚನ್ನಾಗಿ ಅವಳು ಸಂದಿ ಸದೇ ಹೋದರೆ ನನ್ನ ಸಕಲೈಕ್ಷರವನ್ನು ಬಿಡುವೆನು. ವಿಜಯಧ್ವಜ-ನೀನು ಹೇಳಿದ್ದು ಸರಿಯೆ. ಬೆಳಗ್ಗೆ ಹೋಗಿ ಆ ಪತಿ ವ್ರತೆಯನ್ನು ಕಂಡು ಪ್ರಾರ್ಥಿಸುವೆನು. ಆಕೆಯಿಂದ ಆಗದೇ ಹೋದರೆ ಇನ್ನು ನಾನು ನಿರಾಶನಾಗುವೆನು. ದೇವದು-ನೀನು ಹೇಳಿದ್ದು ಸರಿ, ಇನ್ನು ಹೋಗು; ಇನ್ನು ನಾನು ಪಹರೆಗೆ ಹೋಗಬೇಕು. ವಿಜಯಧ್ವಜ-ಎಲೈ ಸತ್ಯವಂತನಾದ ದೇವದತ್ತನೆ ! ನಾನು ಹೋಗಿ ಬರುವೆನು. (ಹೋಗುವನು.) ದೇವದತ್ತ-ನನ್ನನ್ನು ಸತ್ಯವಂತನಲ್ಲವೆಂದು ಯಾರುತಾನೆ ಅನ್ನು ವರು. ಈಗ ನಾನು ಹೇಳಿದ ಬುದ್ದಿ ವಾದವನ್ನು ದಯಾಳುವಾದ ಸತ್ಯವಂ ತನಲ್ಲದೆ ಇನ್ಯಾರು ಹೇಳಿಕೊಟ್ಟಾರು. ವಿಜಯಧ್ವಜನು ಆ ವಿದೇಶಿಯ ಮನಸ್ಸನ್ನು ಆಕರ್ಷಿಸುವದಕ್ಕೆ ಇದೇ ಸರಿಯಾದ್ದು, ಮೋಹನೆಯೋ ಮೊದಲೇ ಬಹುದಯಾಪರಳು, ಸದ್ವಿಪಯಕವಾದ ಪ್ರಾರ್ಥನೆಯಿಂದ ಅವಳ ಮನಸ್ಸನ್ನು ಸುಲಭವಾಗಿ ಸೆಳೆಯಬಹುದು. ಆ ವಿದೇಶಿಯು ಆಕೆಯ ಪ್ರೇಮಕ್ಕೆ ಬದ್ಧನಾಗಿರುವನು. ಒಂದುವೇಳೆ ಅವಳಿಗಾಗಿ ಪ್ರಾಣವನ್ನಾ ದರೂ ಬಿಡುವನು. ವಿಜಯಧ್ವಜನಿಗೆ ಇಂಥಾ ರುಜುವಾದ ಮಾರ್ಗವನ್ನು ತೋರಿಸಿದ ನಾನು ಹ್ಯಾಗೆ ದೊಹಿಯಾದೇನು. ರಾಕ್ಷಸರು ಕೂರಹಿಂ ಸೆಯನ್ನು ಮಾಡಬೇಕಾದರೆ ಮುಖದಲ್ಲಿ ತೇಜಸ್ಸನ್ನು ಹ್ಯಾಗೆ ತೋರಿಸುವರೋ ಹಾಗೆ, ಈಗ ನಾನು ಮಾಡಿರುವೆನು. ಇದನ್ನು ಕಾಣದೆ ನನ್ನನ್ನು ಸತ್ಯವಾದಿಯೆಂದು ತಿಳಿದ ಆ ಬುದ್ದಿ ಹೀನನು ಆ ಮೋಹನೆಯನ್ನು ಬಹುದ್ದೆನ್ಯವಾಗಿ ಪೀಡಿಸುವನು. ಆಕೆಯು ವಿಜಯಧ್ವಜನ ವಿಷಯವಾಗಿ ತನ್ನ ಪತಿಯ ಸಂಗಡ ಬಹಳವಾಗಿ ಶಿಫಾರಸ್ಸು ಮಾಡುವಳು. ಆಗ ನಾನು
ಪುಟ:ಶೂರಸೇನ ಚರಿತ್ರೆ.djvu/೬೨
ಗೋಚರ