52 wmmmmmmmmmmmmmmmmmmmmmmmmmmmmm wom ಶೂರಸೇನರಿತ್ರೆ, [ಅಕ ೨. ಆ ವೀದೇಶಿಯ ಕಿವಿಯಲ್ಲಿ ಈ ವಿಷವನ್ನು ಸುರಿಯುವೆನು, ಇನ್ಯಾವ ವಿಷ ? ನಿನ್ನ ಪತ್ನಿಯು ವಿಜಯಧ್ವಜನ ಮೇಲಣ ಕಾಮಾತುರತೆಯಿಂದ ಅವನ ಪಕ್ಷವಾಗಿ ಮಾತಾಡುವಳು ಎಂಬ ವಿಷ. ಆಮೇಲೆ ಆಕೆಯು ವಿಜಯಧ್ಯ ಜನ ವಿಷಯವನ್ನು ಎಷ್ಟೆಷ್ಟು ಶಿಫಾರಸು ಮಾಡುವಳೋ ಅಷ್ಟಷ್ಟು ಆ ವಿದೇ ಶಿಗೆ ತನ್ನಲ್ಲಿರುವ ನಂಬಿಕೆಯನ್ನು ಹಾಳುಮಾಡಿಕೊಳ್ಳುವಳು. ಆದ್ದರಿಂದ ಅವಳ ಸುಶೀಲತೆಯನ್ನೇ ಈ ಮೃಗಗಳನ್ನು ಹಿಡಿಯತಕ್ಕೆ ದೊಡ್ಡ ಬಲೆ ಯನ್ನಾಗಿ ಮಾಡುವೆನು.' (ರಾಷ್ಟ್ರೀಯನು ಬರುವನು.) ಎಲೈ ಏತಕ್ಕೆ ಬಂದೆ ? ಏನಾಯಿತು ? ರಾಷ್ಟಿ ಯ-ನಾನು ಬೇಟೆಯಲ್ಲಿ ಹಿಂದೆ ಬೊಗುಳುತ್ತಾ ಬರುವ ನಾಯಹಾಗಾದ್ದೇ ಹೊರತು ಬೇಟೆಯಿಂದುಂಟಾಗುವ ಪ್ರಯೋಜನವೇನೂ ಹೊಂದಲಿಲ್ಲ. ಈ ದಿವಸ ರಾತ್ರಿ ಪೂರಾ ಪೆಟ್ಟು ತಿಂದೆ. ಕೊನೆಗೆ ಆದ ಫಲವೇನೆಂದರೆ ಇನ್ನು ಇಂತಾ ಕಾರ್ಯಕ್ಕೆ ಹೋಗಬಾರದೆಂಬ ಬುದ್ದಿ ಚನ್ನಾಗಿ ಬಂತು. ಇದ್ದ ಧನವನ್ನೆಲ್ಲಾ ಕಳೆದುಕೊಂಡದ್ದಕ್ಕೆ ವಿಶೇಷವಾಗಿ ಬುದ್ದಿ ಕಲಿತುಕೊಂಡೆ. ನನ್ನೂರಿಗೆ ನಾನು ಹೋಗುವೆನು.
- ದೇವದತ್ತ-ಎಲೈ ! ಮಿತ್ರನೆ, ಸೈರಿಸು ಸೈರಿಸು, ಲೋಕದಲ್ಲಿ ಸೈರಣೆ ಯಿಲ್ಲ ದವನ ಕಾರ್ಯ ಕೆಡುವದು. ಯಾವದೂ ಕ್ರಮೇಣ ತಾನೆ ನೆರವೇ. ರುವದು. ವಿಜಯಧ್ವಜನು ನಿನ್ನನ್ನು ಹೊಡೆದದ್ದಕ್ಕೆ ತನ್ನ ಅಧಿಕಾರವನ್ನು ಕಳಕೊಂಡನು. ಇದೋ ಬೆಳಗಾಯಿತು. ಇನ್ನು ನಿನ್ನ ಕೆಲಸಕ್ಕೆ ಹೋಗು.
(ರಾಷ್ಟಿ ಯನು ಹೋಗುವನು.) ಈಗ ನಾನು ಮಾಡತಕ್ಕದ್ದು ಎರಡು ಕಾರ್ಯ, ವಿಜಯಧ್ವಜನ ಪಕ್ಷವಾಗಿ ಮೊಹನೆಯೊಡನೆ ವಾತಾಡುವಂತೆ ನನ್ನ ಪತ್ನಿಗೆ ಸೇರಿಸಬೇಕು. ಆ ವಿಜಯಧ್ವಜನು ಮೋಹನೆಯ ಸಂಗಡ ಮಾತಾಡುವ ಸಮಯಕ್ಕೆ ವಿದೇ ತಿಯನ್ನು ಅಲ್ಲಿಗೆ ತಂದು ಬಿಡಬೇಕು. ಆಲಸ್ಯದಿಂದ ಕಾರ್ಯವನ್ನು ಕೆಡಿಸಬಾರದು. ದ್ವಿತೀಯಾಂಕಂ ಸಂಪೂರ್ಣ೦. m (ಹೋಗುವನು.) .