54 ಶೂರಸೇನಚರಿತ' [ ಅಂಕ ೩. ಕ್ಷಮಿಸು. ಆಕೆಯನ್ನು ನಾನು ಪ್ರಾರ್ಥಿಸುವದೇನೆಂದರೆ, ಆ ಗುಣವತಿಯಾದ ಮೋಹನೆಯ ಸಂಗಡ ಸಂಭಾವಿಸತಕ್ಕ ಸಮಯವನ್ನ ತಿಳಿಸಬೇಕೆಂದು, ದೇವದತ್ತ-ಈಗಲೆ ನಾನೇ ಹೋಗಿ ಕಳುಹಿಸಿಕೊಡುವೆನು, ಇದ ಲ್ಲದೆ ನೀನು ಆ ಮೊಹನೆಯ ಸಂಗಡ ಸಂಭಾಷಿಸುವದಕ್ಕೆ ಪ್ರತಿಬಂಧವಿ ಲ್ಲದಂತೆ ಆ ವಿದೇಶಿಯನ್ನು ಉಪಾಯದಿಂದ ಹೊರಕ್ಕೆ ಎಳೆದುಕೊಂಡು ಹೋಗುವೆನು. ವಿಜಯಧ್ವಜ-ಮಿತ್ರನೆ ! ಇದಕ್ಕಾಗಿ ಬಹು ವಿನಯಪೂರ್ವಕ ನಿನಗೆ ನಾನು ಕೃತಜ್ಞನಾಗಿರುವೆನು. ( ದೇವದತ್ತನು ಒಳಕ್ಕೆ ಹೋಗುವನು.) ನಮ್ಮ ದೇಶೀಯರಲ್ಲಿ ಈತನಂತೆ ನನ್ನ ವಿಷಯದಲ್ಲಿ ದಯಾಳುವಾಗಿಯ ಸತ್ಯವಂತನಾಗಿಯೂ ಇರತಕ್ಕವನನ್ನು ಯಾರನ್ನೂ ಕಾಣೆ. ( ವಿನೀತೆ ಪ್ರವೇಶಿಸುವಳು. ) ವಿನೀತೆ-ಅಯ್ಯಾ ? ನೀವು ಬಂದದ್ದು ಬಹುಸಂತೋಷವಾಯಿತು. ನಿಮಗೆ ಸಂಭವಿಸಿದ ಅಪಾಯಕ್ಕಾಗಿ ನಾನು ಬಹಳ ವ್ಯಸನಪಡುವೆನು. ಆದರೆ ನಿಮಗೆ ಒಳ್ಳೇದಾಗುವದರಲ್ಲಿ ಸಂದೇಹವಿಲ್ಲ. ಈಗತಾನೆ ದಳ ಪತಿಯ ಆತನ ಪತ್ನಿಯ ನಿಮ್ಮ ವಿಷಯವನ್ನೇ ಮಾತಾಡುತ್ತಿದ್ದರು. ಮೊಹನೆಯು ನಿಮ್ಮ ಪಕ್ಷವಾಗಿ ತನ್ನ ಪತಿಯೊಡನೆ ಬಹಳವಾಗಿ ಸಂಭಾ ಏಸಿದಳು. ಆದಕ್ಕೆ ದಳಪತಿಯು ಹೀಗೆಂದು ಹೇಳಿದನು. ಏನೆಂದರೆನಿಮ್ಮಿಂದ ಗಾಯಹೊಂದಿದ ಮನುಷ್ಯನು ಪ್ರಸಿದ್ಧ ಪುರುಷನು, ಮತ್ತು ದೊಡ್ಡ ಸಂಬಂಧವುಳ್ಳವನು. ಆದ್ದರಿಂದ ನಿಮ್ಮನ್ನು ತತ್ಕಾಲದಲ್ಲಿ ತಿರಸ್ಕ ರಿಸದೆ ಇರಲು ಆಗುವದಿಲ್ಲವೆಂದು ಹೇಳಿದನು. ನಿಮ್ಮ ವಿಷಯದಲ್ಲಿ ತನಗೆ ಪ್ರೇಮವಿರುವದರಿಂದ ತಕ್ಕ ಸಮಯವೊಂದೇ ಬೇಕಾಗಿದೆಯಲ್ಲದೆ ಇನ್ಯಾರ ಸಹಾಯವೂ ಅವಶ್ಯವಿಲ್ಲವೆಂದು ಹೇಳಿದನು. ವಿಜಯಧ್ವಜ-ಆದರೆ ಗುಣವತಿಯಾದ ಮೋಹನೆಯೊಡನೆ ನಾನು ಮಾತಾಡುವದು ಯುಕ್ತವಾಗಿದ್ದರೆ ತಕ್ಕ ಸಮಯವನ್ನು ನನಗೆ ತಿಳಿಸಬೇ ಕೆಂದು ನಿನ್ನನ್ನು ಪ್ರಾರ್ಥಿಸುವೆನು. ವಿನೀತೆ-ಆಗಲಿ, ಒಳಕ್ಕೆ ಬನ್ನಿ, ತಕ್ಕ ಸಮಯ ದೊರಕುವ ಸ್ಥಳ ದಲ್ಲಿ ನಿಮ್ಮನ್ನು ಕುಳ್ಳಿರಿಸುವೆನು. ೨ ೧
ಪುಟ:ಶೂರಸೇನ ಚರಿತ್ರೆ.djvu/೬೫
ಗೋಚರ