ಪ್ರವೇಶ ೨.] ಶೂರಸೇನಚರಿತ್ರ. 63 WMmmm M MMMMMMMMMMMMMMMMMMMMMMMMMMMM m. ದೇವದತ್ತ-ಓಹೋ ! ನಿಮ್ಮ ಮುಖವನ್ನು ನೋಡಿದರೆ ಇದರಿಂದ ತಮ್ಮ ಮನಸ್ಸಿಗೆ ಏನೋ ಕೇಶವುಂಟಾದಂತೆ ಕಾಣುವುದು. ಶೂರಸೇವ-ಸ್ವಲ್ಪವೂ ಇಲ್ಲ. ಸ್ವಲ್ಪವೂ ಇಲ್ಲ. ದೇವದತ್ತ -ಆಯಿತೇನೋ ಎಂದು ಅಂಜುವೆನು. ನಾನು ಹೇಳಿದ್ದೆಷ್ಟೋ ಅಷ್ಟು ಮಾತ್ರವಲ್ಲದೆ ಅನ್ಯಥಾ ತಾವು ಅನುಮಾನಪಡಕೂಡದು. 'ಶೂರಸೇನ -ಇಲ್ಲ, ದೇವದತ್ತ-ತಾವೇನಾದರು ಅನುಮಾನಪಟ್ಟರೆ ನನ್ನಿಂದ ತಮಗೆ ಬಹಳ ಕೇಡು ಸಂಭವಿಸಿದಂತಾದೀತು. ವಿಜಯಧ್ವಜನು ನನ್ನ ಸ್ನೇಹಿತನು. ಸ್ವಾಮಿ ! ತನ್ನ ಮುಖವನ್ನು ನೋಡಲು ನಿಜವಾಗಿ ತಮಗೆ ವ್ಯಾಕುಲತೆ ಯುಂಟಾಗಿರುವದು. ಶೂರಸೇವ-ಇಲ್ಲ, ವಿಶೇಷವಾಗಿಲ್ಲ. ಆದರೆ ನನ್ನ ಪತ್ನಿಯು ಪತಿ ವತೆಯಲ್ಲ ಅನ್ನುವದಿಲ್ಲ, ದೇವದತ್ತ-ಹಾಗೆ ಪತಿವ್ರತೆಯಾಗಿಯೇ ಆಕೆ ಬಹುಕಾಲ ಬದುಕಲಿ. ನೀವೂ ಕೂಡಾ ಹಾಗೆ ಎಣಿಸುತ್ತ ಬಹುಕಾಲ ಬದುಕಿ, ಶೂರಸೇನ-ಆದರೆ ಅವಳು ಮೊದಲು ತನ್ನ ತಂದೆಯನ್ನು ಅತಿಕ್ರಮಿಸಿ ಬಂದದ್ದು ಮಾತ್ರ ನಿಜ. ದೇವದತ್ತ-ಸಾಮಿ ಅದೇತಾನೆ.-ಇನ್ನು ಧೈರ್ಯವಾಗಿ ಇದ್ದ ಸ್ಥಿತಿ ಯನ್ನು ಹೇಳುವೆನು. ಕೇಳ. ಆಕೆ ಚಪಲಚಿತ್ತಳು ಎಂದು ಅನುಮಾನ ಪಡುವುದಕ್ಕೆ, ನಿ ರೂಪಸಂಪತ್ತುಗಳಲ್ಲಿ ತನಗೆ ತಕ್ಕವರಾದ ಪ್ರದೇಶ ಸ್ಟರು ಎಷ್ಟು ಮಂದಿ ಬಂದು ಪ್ರಾರ್ಥಿಸಿದರೂ, ಅವರನ್ನು ವರಿಸದೆ ಹೋದ ದೊಂದೇ ಸಾಕಾಗಿದೆ. ಸ್ವಾಮಿ ಕ್ಷಮಿಸಿ, ನಾನು ನಿಮ್ಮ ಪತ್ನಿಯನ್ನು ಕುರಿತು ಹೇಳಿದ್ದಲ್ಲ. * ಸ್ಮಭಾವವನ್ನು ಕುರಿತು ಹೇಳಿದೆ. ಆದರು ಒಂದುವೇಳೆ ಆಕೆಯು ತನಗೆ ಸರಿಯಾದ ಬುದ್ದಿಯಿಂದ ಆಲೋಚಿಸಿ ನಿಮ್ಮನ್ನೂ ತನ್ನ ದೇಶದ ಸುಂದರ ಪುರುಷರನ್ನೂ ಹೋಲಿಸುತ್ತ ಪಶ್ಚಾತ್ತಾಪ ಪಡದೆ ಇರಲಾರಳು ಎಂದು ಅಳುಕುವೆನು. * ಶೂರಸೇನ-ನೀನು ಹೋಗು, ಹೋಗು, ಇನ್ನೂ ಹೆಚ್ಚಾಗಿ ನಿನಗೇ ನಾದರು ತೋರಿಬಂದರೆ ನನಗೆ ತಿಳಿಸು. ಇದರ ಪರೀಕ್ಷಾ ವಿಷಯದಲ್ಲಿ ಸ್ವಲ್ಪ ನಿನ್ನ ಪತ್ನಿಯನ್ನು ಪ್ರೇರಿಸು. ಇನ್ನು ಹೋಗು.
ಪುಟ:ಶೂರಸೇನ ಚರಿತ್ರೆ.djvu/೭೪
ಗೋಚರ