64 ಶೂರಸೇನಚರಿತ, | ಅಕ ೩ M 20 (ದೇವದತ್ತನ ಸ್ವಲ್ಪ ದೂರ ಹೋಗುವನು. ) ಶೂರಸೇನ-ಅಯ್ಯೋ ! ನಾನು ತಕ್ಕೆ ಮದುವೆಮಾಡಿಕೊಂಡೆ ? ಸತ್ಯವಂತನಾದ ಈ ನನ್ನ ಮಿತ್ರನು ನನಗೆ ಹೇಳಿದ್ದಕ್ಕಿಂತ ಹೆಚ್ಚಾಗಿ ತಿಳದಿರುವನು. ದೇವದತ್ತ-(ಹಿಂತಿರುಗಿ ಬಂದು) ಇನ್ನೊಂದು ಆಲೋಚನೆ ತೋರಿದೆ, ಕೇಳಿ ಸಾವಿ-ವಿಜಯಧ್ವಜನು ಯೋಗ್ಯನಾದರು ಅವನ ಪದವಿಯನ್ನು ಅವನಿಗೆ ಸ್ವಲ್ಪ ಕಾಲದವರೆಗೂ ಕೊಡಬೇಡಿ, ಅದಕ್ಕಾಗಿ ಅವನು ಏನೇನು ಉಪಾಯ ಮಾಡುವನೋ ತಿಳಿಯಿರಿ. ನಿಮ್ಮ ಪತ್ನಿಯು ಅವನ ವಿಷಯವಾಗಿ ಹ್ಯಾಗೆ ಮಾತಾಡುತ್ತಾಳೆ ನೋಡಿ. ಬಹುಶಃ ಅದರಲ್ಲಿ ಹಿಡಿಯಬಹುದು. ಅದುವರೆಗು ಆಕೆಯಮೇಲೆ ಅನುಮಾನ ಪಡಬೇಡಿ. ಶೂರಸೇನ-ನಾನು ಇದನ್ನೆಲ್ಲ ಚನ್ನಾಗಿ ನೋಡಿಕೊಳ್ಳುವೆನು. ದೇವದತ್ತ-ಇನ್ನು ಹೊಗುವೆನು. (ಹೋಗುವನು.) ಶೂರಸೇನ -ಈತನು ಕೇವಲ ಸತ್ಯವಂತನು. ಇವನು ಜ್ಞಾನಿ ಯಾಗಿಯ ಅನುಭವಶಾಲಿಯಾಗಿ ಇರುವದರಿಂದ ಮನುಷ್ಯರ ಗುಣ ದೋಷಗಳನ್ನು ನೋಡಿದ ಮಾತ್ರದಿಂದಲೆ ಹಿಡಿಯಬಲ್ಲನು. ಅವಳು ಜಾರೆಯಾದಪಕ್ಷಕ್ಕೆ ನನಗೆ ಅವಳು ಪ್ರಾಣಪಾಯಳಾದರೂ ತಿರಸ್ಕರಿಸಿ ಬಿಡುವೆನು. ಒಂದುವೇಳೆ ನಾನು ಕಪ್ಪಾದ್ದರಿಂದಲೋ ? ಅಥವಾ ನಾಗರಿಕ ರಂತೆ ನನಗೆ ಮಾಧುರ್ಯವಿಲ್ಲದ್ದರಿಂದಲೋ ? ಅಥವಾ ಯೌವನ ಮೂಾ ರಿದ್ದರಿಂದಲೋ ?-ಅಷ್ಟೇನು ನಿವಾರಿಲ್ಲ. ಅವಳಂತು ಇನ್ನು ನನ್ನ ಭಾಗಕ್ಕೆ ಹೋದಳು. ಅಯ್ಯೋ ! ನಾನು ಮೋಸಹೋದೆನು. ಇನ್ನು ಅವಳಲ್ಲಿರುವ ವ್ಯಾಮೋಹವನ್ನು ಬಿಟ್ಟಿಲ್ಲಗೆ ನನಗೆ ವ್ಯಾಕುಲ ತಪ್ಪದು. ಮದುವೆಗೆ ಬಂದ ಶಾಪವೇನೊ ಇದು. ಮದುವೆಯಾದವಳು ಮಾತ್ರ ನಮ್ಮ ಧೀನಳು ಎನ್ನುವದೊಂದಲ್ಲದೆ ಅವಳ ಮನೋನುರಾಗಮಾತ್ರ ನನ್ನಧೀನವಾದ ದಲ್ಲ. ಛೇ ! ಕಂ|| ಪರಪುರುಷರನುಭ ಕರವಾಗಿಹ ವಸ್ತುವನ್ನು ತನ್ನ ದೆನುತ್ತಂ || ಪಿರಿದನುರಾಗದೆ ಪೋಷಿಸು | ತಿರುವದರಿಂದಕಟ ನರಕವಾಸವೇ ಸೌಖ್ಯಂ | M
ಪುಟ:ಶೂರಸೇನ ಚರಿತ್ರೆ.djvu/೭೫
ಗೋಚರ