65 Muru ಪ್ರವೇಶ ೩.] ಶೂರಸೇನಚರಿತ ಇದೆ ನನ್ನ ಮೊಹನೆ ಬರುವಳು. ಇವಳ ಪತಿವ್ರತೆಯಲ್ಲದೆ ಹೋದರೆ ಇನ್ನಾ ರನ್ನು ಪತಿವ್ರತೆಯನ್ನ ಬೇಕು. ಹಸಿ, ದೇವರೆ ! ನೀನೇ ಮೋಸಗಾರನು ; ಏಕೆಂದರೆ ಇಂತ ನಿಷ್ಕಳಂಕವಾದ ಮುಖವನ್ನು ನಿರ್ಮಿಸಿ, ಒಳಗೆ ಕಟ್ಟಿ ಮನಸ್ಸನ್ನು ಇಟ್ಟಮೇಲೆ ಹ್ಯಾಗೆ ನಂಬಬಹುದು. (ಮೋಹನೆ ವಿನೀತೆಯರು ಪ್ರವೇಶಿಸುವರು.) `ಮೋಹನೆ-ಪ್ರಿಯನೆ! ಇದೇನು ಔತಣಕ್ಕಾಗಿ ಹೇಳಿದ ಮಹಾಜನರು ನಿಮ್ಮಾಗಮನವನ್ನೇ ನಿರೀಕ್ಷಿಸುತ್ತಿರುವೆರು. ಶೂರಸೇನ-ನನ್ನಿಂದ ತಪ್ಪಾಯಿತು. ಮೋಹನೆ-ಇದೇನು ಹೀಗೆ ಮೆಲ್ಲನೆ ಮಾತಾಡುವೆ ? ಆರೋಗ್ಯವಿಲ್ಲ ವೇನು ? ಶೂರಸೇನ-ನನಗೆ ಸ್ವಲ್ಪ ತಿರೊವೇದನೆಯುಂಟಾಗಿರುವದು. ಮೋಹನೆ-ಅದು ನಿದ್ರೆಯಿಲ್ಲದ್ದರಿಂದ ಉಂಟಾಗಿರಬಹುದು. ವಸ್ತ್ರ ದಿಂದ ಬಂಧಿಸಿ ಅದನ್ನು ಈಗಲೆ ಹೋಗಲಾಡಿಸುವೆನು. (ಕಟ್ಟುವದಕ್ಕೆ ಹೋಗುವಳು.) ಶೂರಸೇನ-ವಸ್ತ್ರ ) ಸಣ್ಣದು. ಬೇಡ, (ಎಂದು ಕಿತ್ತು ಹಾಕುವನು) ನಡೆ ಹೋಗೋಣ, - ಮೋಹನೆ-ನಿನ್ನ ಅನಾರೋಗ್ಯವು ನನಗೆ ಅತ್ಯಂತ ದುಃಖಕರವಾಗಿ ರುವುದು. (ಶೂರಸೇನನೂ ಮೋಹನೆಯೂ ಹೋಗುವರು.) ವಿನೀತೆ-ಈ ವಸ್ತ್ರವು ದೊರೆತದ್ದು ನನಗೆ ಬಹಳ ಸಂತೋಷ. ನಮ್ಮ ಒಡೆಯನಾದ ಶೂರಸೇನನು ನನ್ನ ಒಡತಿಗೆ ಮದುವೆಗೆ ಮುಂಚಿತ ವಾಗಿ ಕೊಟ್ಟ ಜ್ಞಾಪಕಾರ್ಥವಾದ ವಸ್ತ್ರ ವಿದು. ಛಲವಂತನಾದ ನನ್ನ ಪತಿಯು ಅನೇಕವರ್ತಿ ಕದ್ದುಕೊಂಡು ಬಾ ಎಂದು ಪೀಡಿಸುತ್ತಿದ್ದನು. ಕಂದ | ಇತ್ತಂ ಮದುವೆಗೆ ಮೊದಲೀ 1 ಯುತ್ತಮ ವಸ್ತ್ರವದನನ್ನ ಪತಿ ಮೋಹದೊಳೆ || ನ್ನು ತನ್ನ ಯ ಸಖಿ ನಲವಿಂ | ಮುತ್ತಿಡುವಳಿ' ನಿಮಿಷವಾದೊಡಂ ಬಿಡದಿಪ್ಪ೯೪ || 10
ಪುಟ:ಶೂರಸೇನ ಚರಿತ್ರೆ.djvu/೭೬
ಗೋಚರ