ಪ್ರವೇಶ ೩.] ಶೂರಸೇನಚರಿತೆ' 69 ದೇವದತ್ತ-ಅಯ್ಯೋ ! ಇಷ್ಟಕ್ಕೆ ಬಂತೇ ? ಶೂರಸೇನ-ಅದನ್ನು ನನಗೆ ಪ್ರತ್ಯಕ್ಷವನ್ನು ಮಾಡು. ಅಥವಾ ಮನಸ್ಸಿನ ಸಂದೇಹವನ್ನು ಹೋಗಲಾಡಿಸುವಂತ ಸಾಕ್ಷಿಯನ್ನು ತೋರಿಸು, ಇಲ್ಲದಿದ್ದಲ್ಲಿ ನಿನ್ನ ಪ್ರಾಣವನ್ನು ತೀರಿಸುವೆನು. ದೇವದತ್ತ-ದೇವರು ನನ್ನನ್ನು ಕಾಪಾಡಲಿ. ಎಲೈ ! ನೀನೊಬ್ಬ ಮನುಷ್ಯನ ? ನಿನಗೆ ಬುದ್ಧಿಯಿರುವದೆ ? ದೇವರು ನಿನ್ನನ್ನು ರಕ್ಷಿಸಲಿ ಇನ್ನು ನನ್ನ ಅಧಿಕಾರವನ್ನು ತೆಗೆದುಕೊ. ಸತ್ಯವೊಂದನ್ನೇ ಹಿಡಿದು ಪರ ರಿಗೆ ಸಂತಾಪವನ್ನುಂಟುಮಾಡುವ ನಾನು ಬಹಳ ಪಾಪಿಯು. ಎಲಾ ಅನ್ಯಾ ಯಪ್ರಪಂಚವೆ ! ಶೂರಸೇನ-ಹಾಗೆಯೆ ನೋಡಿದರೆ ನನ್ನ ಪತ್ನಿಯು ಪತಿವ್ರತೆಯೆಂದು ಕಾಣುವಳು. ನಿನ್ನನ್ನು ನೋಡಿದರೆ ಸತ್ಯವಂತನಾಗ ಕಾಣುವೆ, ಹಾಗೆ ಅಸತ್ಯವಂತನಾಗೂ ಕಾಣುವೆ, ಹಿಂಸೆಗೈದಾದರೂ ಇದನ್ನು ಚನ್ನಾಗಿ ಪರೀಕ್ಷಿಸುವೆನು. ಅರುಂಧತಿಯಂತೆ ನಿಷ್ಕಳಂಕವಾಗಿ ಹೊಳೆಯುತಿದ್ದ ನನ್ನ ಪತ್ನಿಯ ಮುಖವು ನನ್ನಂತೆ ನನ್ನ ಮನಸ್ಸಿಗೆ ಕಪ್ಪಾಗಿ ಕಾಣುವದು. ಹ್ಯಾಗಾದರೂ ಆಗಲಿ, ನನ್ನ ಮನಸ್ಸಿಗೆ ತೃಪ್ತಿಯುಂಟಾದರೆ ಸಾಕು, ದೇವದ-ತೃಪ್ತಿಯುಂಟಾಗುವಬಗೆ ಹ್ಯಾಗೆ ಸ್ವಾಮಿ ? ಅನುಮಾ ನಕ್ಕೆ ತಕ್ಕ ನಿಮಿತ್ತವನ್ನು ಹೇಳುವದರಿಂದಲೂ ಮತ್ತು ಸರಿಯಾದ ದೃಷ್ಟಾಂ ತಗಳನ್ನು ತೋರಿಸುವದರಿಂದಲೂ ತೃಪ್ತಿಯುಂಟಾಗುವದಾಗಿದ್ದರೆ ಅವಶ್ಯ ವಾಗಿ ಆಗಬಹುದು ಶೂರಸೇನ-ನನ್ನ ಪತ್ನಿಯು ಪತಿವ್ರತೆಯಲ್ಲಾ ಎನ್ನುವದಕ್ಕೆ ತಕ್ಕ ಕಾರಣಗಳನ್ನು ಹೇಳು. - ದೇವದತ-ಈ ಕಾರ್ಯಕ್ಕೆ ನಾನು ನಿಂತದ್ದೆ ಸರಿಯಲ್ಲ. ನನ್ನ ಈ ಹಾಳು ಸತ್ಯವಂತತನಕ್ಕೂ ನಿಮ್ಮ ಈ ಮಿತ್ರತ್ವಕ್ಕೂ ಕಟ್ಟು ಬಿದ್ದು ಇಷ್ಟು ದೂರಕ್ಕೆ ಹತ್ತಿದ ಮೇಲೆ ಇನ್ನು ಕೊನೆಗಾಣಿಸಲೇಬೇಕು. ಸ್ವಾಮಿ ಕೇಳಿ, ನಾನು ಒಂದು ದಿವಸ ವಿಜಯಧ್ವಜನೊಡನೆ ಮಲಗಿದ್ದೆನು. 'ನನಗಾ ದರೆ ಹಲ್ಲು ನೋವಿನಿಂದ ನಿದ್ರೆಯೇ ಹತ್ತಲಿಲ್ಲ. ಲೋಕದಲ್ಲಿ ಮನೋದು ಕ ಅ ಟ |
ಪುಟ:ಶೂರಸೇನ ಚರಿತ್ರೆ.djvu/೮೦
ಗೋಚರ