72 ಶರಸೇನಚರಿತ { ಅಂಕ ೩. wwwwwwwwwwwwwwww mmmmmmmmm (ವೀರಮಂಡಿಯಲ್ಲಿ ಕುಳಿತು) ಇದಕ್ಕೆ ಸ್ಥಿರವಾದ ಈ ಆಕಾಶವೇ ಈ ಸಂಕ್ಷಿಯಾಗಲಿ. ಈ ಭೂಮಿದೇವಿಯೆ ಸಾಕ್ಷಿಯಾಗಲಿ, ಅವಳನ್ನು ಸಂಹರಿ ಸುವೆನೆಂದು ಮನಃಪೂರ್ವಕವಾಗಿ ಪ್ರಮಾಣಮಾಡಿದ್ದೇನೆ. ದೇವದತ್ತ-ಏಳಬೇಡ, ಹಾಗೆಯೇ ಇರು. (ತಾನು ವೀರಮಂಡಿಯಾ ಗಿ ಕುಳಿತು) ಯಾವಾಗಲೂ ಪ್ರಹ್ಲಿಸುವ ನಕ್ಷತ್ರಗಳಿರಾ ! ನಮ್ಮನ್ನು ಯಾವಾಗಲೂ ಆವರಿಸಿಕೊಂಡಿರುವ ಪಂಚಭೂತಂಗಳಿರಾ ? ನೀವು ಸಾಕ್ಷಿ ಯಾಗಿರಿ. ನನ್ನ ಕೈಯನ್ನು ನನ್ನ ಮನಸ್ಸನ್ನು ನನ್ನ ಬುದ್ಧಿಯನ್ನು ಪರ ರಿಂದ ಮೋಸಗೊಳಿಸಲ್ಪಟ್ಟ ಶೂರಸೇನನ ಕಾರ್ಯಕ್ಕಾಗಿ ಒಪ್ಪಿಸಿದೇನೆ. ಆತನು ಯಾರತಲೆಯನ್ನು ತೆಗೆಯೆಂದರು ಮನಃಪೂರ್ವಕ ಅದನ್ನು ಮಾಡುತ್ತೇನೆ. (ಇಬ್ಬರೂ ಏಳುವರು) ಶೂರಸೇನ-ವಾಲ್ಮಾತ್ರದಿಂದ ನಿನಗೆ ನಾನು ಕೃತಜ್ಞನಾಗಿಲ್ಲ. ಮನಃ ಪೂರ್ವಕವಾಗಿ ಆಗಿರುವೆನು. ನಿನ್ನ ಸತ್ಯಸಂಧತೆಯನ್ನು ಈಗಲೇ ಪರೀಕ್ಷಿ ಸುವೆನು. ಮರು ದಿವಸದೊಳ ಗಾಗಿ ವಿಜಯಧ್ವಜನು ಬದುಕಿಲ್ಲವೆಂದು ನೀನು ಬಂದು ಹೇಳಬೇಕು. ದೇವದತ-ನೀವು ಹಾಗೆ ಹೇಳಿದ ಮೇಲೆ ನನ್ನ ಮಿತ್ರನ ಆಯುಷ್ಯ ಮುಗಿಯಿತು. ಅವಳನ್ನು ಮಾತ್ರ ದೇವರು ರಕ್ಷಿಸಲಿ. ಶೂರಸೇನ-ಜಾರೆಯಾದ ಆ ದುಷ್ಟೆಯು ಈಗಲೆ ನಾಶವಾಗಲಿ, ನೀನು ನನ್ನ ಸಂಗಡ ಬಾ, ಆ ಚಾಂಡಾಲೆಯನ್ನು ಬೇಗ ಕೊಲ್ಲುವದಕ್ಕೆ ಉಪಾಯ ಮಾಡಬೇಕು. ಈಗ ನನಿಗೆ ನೀನೆ ಫೌಜುದಾರನು. ದೇವದತ್ತ-ನಾನು ಯಾವಾಗಲೂ ನಿಮ್ಮವನೆ.
- ರಾಗ - ತೋಡಿ,
ತಾಳ- ಛಾಪು. ಕೊಲ್ಲುವದೆ ನಿಜಖುಲ್ಲೆಯನು ನಾಂ | ಸ | ಸೊಲ್ಲಿಸಲಾಗದಂತ ಕಾರ್ಯವ ಮಾಡಿದ ಖುಲ್ಲೆಯನು ೧ಮೈಮವೆ ತಾರಾ | ಸೊಮವೆ ಸಾಕ್ಷಾ ಹಿಯ ನಿಮ್ಮಸಾಕ್ಷಿಯಾಗುನಾ೦ ೧೨|| ಮಾನಸ ಪೂರ್ವಕ ಮಾಡಿರುವೀಪ ಮ ಣಕೆ ತಪ್ಪದೆ ಖುಲ್ಲೆಯನು ನಾ೦ ||೩|