ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಶೂರಸೇನಚರಿತ್ರೆ, (ಅಂಕ ೪, www Www ವಿಜಯಧ್ವಜ-ಅಯ್ಯೋ ! ಮಿತ್ರನೆ, ದಮ್ಮಯ್ಯ ; ನಿಜವಾಗಿ ಹೇಳು. ದೇವದತ್ತ-ನಿಜವಲ್ಲ ವಿದ್ದರೆ ನನ್ನನ್ನು ದ್ರೋಹಿಯನ್ನಾಗಿ ಭಾವಿಸು. ಶೂರಸೇನನನ್ನನ್ನು ನೀನು ಲೋಕಕ್ಕೆ ಸೇರಿಸಲಿವೊ ? ಆಗಲಿ, ಆಗಲಿ, ವಿಜಯಧ್ವಜ-ಈ ಸಮಾಚಾರವನ್ನು ಆ ಕಪಿಯೆ ಹುಟ್ಟಿಸಿರಬಹುದು. ತನಗೆ ಹ್ಯಾಗೆ ಅನುರಾಗವಿದೆಯೊ ನನಗೂ ಹಾಗೆ ಇರುವದೆಂದು ತಿಳಿದಿರು ವಳು, ನಾನಂತು ನಿಜವಾಗಿ ಹೇಳಲಿಲ್ಲ. (ಆಗ ದೇವದತ್ತನು ಸನ್ನೆ ಮಾಡುವನು ) * ಶೂರಸೇನ-ಇದೋ ದೇವದತ್ತನು ಸನ್ನೆ ಮಾಡುವನು. ಈಗ ಎಲ್ಲಾ ಹೊರಡುವದು, ವಿಜಯಧ್ವಜ- ಈಗತಾನೆ ಇಲ್ಲಿಗೆ ಬಂದು ನನ್ನನ್ನು ಪೀಡಿಸಿ ಹೋದಳು. ಸಮುದ್ರ ತೀರದಲ್ಲಿ ಕೆಲವರು ದೊಡ್ಡ ಮನುಷ್ಯರ ಸಂಗಡ ಮಾತಾಡುತ್ತಿರುವಾಗ ಅಲ್ಲಿಗೆ ಬಂದು ಹೀಗೆ ಕತ್ತು ತಬ್ಬಿಕೊಂಡಳು. (ಎಂದು ದೇವದತ್ತನನ್ನು ತಬ್ಬಿ ಕೊಳ್ಳುವನು.) ಶೂರಸೇನ-ಪ್ರಿಯನಾದ ವಿಜಯಧಜನೆಯೆಂದೇನೊ ? ವಿಜಯಧ್ವಜ-ಹಾಗಾಗೆ ಅಳುವಳು. ಹೀಗೆ ಎಳೆಯುವಳು. (ಎಂದು ದೇವದತ್ತನನ್ನು ಎಳೆದು ಮೂಗು ಕುಣಿಸುವನು. ) . ಶೂರಸೇನ-ಇದೋ ತನ್ನನ್ನು ಶಯ್ಯಾಗೃಹಕ್ಕೆ ಎಳೆದದ್ದನ್ನು ತೋರಿ ಸುವನು. ಆಗಲಿ, ಆಗಲಿ, ಕುಣಿಸು, ಕುಣಿಸು. ಕುಣಿಸುವ ಮಗು ಮಾತ್ರ ಕಾಣಿಸುವದು. ಇದನ್ನು ಕೊಟ್ಟು ಹಾಕಿದಾಗ ಯಾವನಾಯಿ ತಿನ್ನುತ್ತೋ ಅದು ಮಾತ್ರ ಕಾಣಿಸದು. ವಿಜಯಧ್ವಜ-ಹೀಗೆಲ್ಲ ಅವಳು ಹರಟಿದಮೇಲೆ ಇನ್ನು ಅವಳ ಸಹ ವಾಸವನ್ನು ಬಿಡಬೇಕು. ದೇವದತ್ತ-ಇದೆ ನಿನ್ನ ಬಾಲಿಕಾವನೆ ಬರುವಳು. (ಬಾಲಿಕಾಮಣಿ ಪ್ರವೇಶಿಸುವಳು.) ವಿಜಯಧ್ವಜ-ಪಿಶಾಚಿಯಹಾಗೆ ಎಲ್ಲೂ ನನ್ನ ಬಿಡೆಯಲ್ಲಾ. ಬಾಲಿಕಾಮಣಿ-ನಿನ್ನನ್ನು ಪಿಶಾಚಿಯಾದರೂ ಹಿಡಿಂರುಲಿ, ಏನಾದರೂ ಹಿಡಿಯಲಿ. ಈ ವಸ್ತ್ರವನ್ನು ನನಗೇತಕ್ಕೆ ಕೊಟ್ಟೆ ? ಅದನ್ನು ನಾನು