ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಶೂರಸೇನಚರಿತ್ರ ( ಅಂಕ ೪ wwwwwwwwwwwwwwwwwwwwwwwwwww ಅ

ಬಹಳ ಸಂತೋಷವಾಯಿತು. ಜಯಸೇನ-ಇದಕ್ಕೆ ನಾನು ಬಹಳ ಕೃತಜ್ಞನಾಗಿರುವೆನು. ನನ್ನ ಫೌಜುದಾರರಾದ ವಿಜಯಧ್ವಜರು ಹ್ಯಾಗಿದಾರೆ? ದೇವದತ್ತ-ಬದುಕಿದಾರೆ ಸ್ವಾಮಿ, ಮೋಹನೆ-ಪೂಜ್ಯರೆ! ಆತನಿಗೂ ನನ್ನ ಪತಿಗೂ ಸ್ವಲ್ಪ ಸ್ನೇಹಭಂಗ ವಾಗಿದೆ. ಅದರೆ ನಿಮ್ಮಿಂದ ಎಲ್ಲಾ ಸರಿಯಾಗುವದು. ಶೂರಸೇವ-( ಕಾಗದ ನೋಡುತ್ತ) ಅದು ನಿನಗೆ ಗೊತ್ತೆ ? ಮೋಹನೆ-ಏನು ಸಾಮಿ ! ಶೂರಸೇನ-'ಇದು ಮಾಡದೆ ಇರಕೂಡದು, ನಿಮಗೆ ಸಮ್ಮತವಾದರೆ' ಜಯಸೇನ-ಆಯುಷ್ಕಂತಳ ! ನಿನ್ನನ್ನು ಏನೂ ಕರೆಯಲಿಲ್ಲ. ಅವರು ಪತ್ರಿಕೆಯನ್ನು ನೋಡುವದರಲ್ಲಿದಾರೆ. ಏನು ! ನಮ್ಮ ದಳ ಪತಿಗೂ ವಿಜ ಯಧ್ವಜನಿಗೂ ಒಡಕು ಹುಟ್ಟಿದಿಯ ? ಮೋಹನೆ-ಹೌದು, ಬಹು ಪಶ್ಚಾತ್ತಾಪಕರವಾದ ಒಡಕು, ಅದನ್ನು ಸರಿಮಾಡುವದಕ್ಕೆ ನಾನು ಏನುಬೇಕಾದರೂ ಮಾಡುವೆನು, ಆ ವಿಜಯದ್ಧ ಜನಲ್ಲಿ ನನಗೆ ತುಂಬಾ ಪ್ರೇಮ. ಶೂರಸೇನ-ಗಂದಕ ಬೆಂಕಿ ಸೇರಿದಹಾಗೆ, (ಎಂದು ಓದುತ್ತಿರುವನು.) ಮೋಹನೆ-ಸ್ವಾಮಿ. ಶೂರಸೇನ-ನಿನಗೆ ಬುದ್ದಿ ಇರುವದೆ? ಮೋಹನೆ-ಕೊಪವೇನೆ ? ಜಯಸೇನ-ಕಾಗದದಿಂದ ಉಂಟಾಗಿರಬಹುದು. ಯಾಕೆಂದರೆ ತನ್ನ ಅಧಿಕಾರವನ್ನು ವಿಜಯಧ್ವಜನಿಗೆ ಕೊಟ್ಟು ತನ್ನನ್ನು ರಾಜಧಾನಿಗೆ ಬರ ಹೇಳಿ ಬರೆದಹಾಗಯಿದೆ. ಮೋಹನೆ-ನಿಜವಾಗಿ ನನಗೆ ಬಹಳ ಸಂತೋಷ. ಶೂರಸೇನ-ಹುಂ, ಹುಂ. ಮೋಹನೆ-ಸಮಿ. ಶೂರಸೇನ-ನಿನ್ನ ಸಂತೋಷ ನನಗೆ ಹುಚ್ಚು ರೇಗಿಸುತ್ತೆ. ಮೋಹನೆ-ಪ್ರಿಯನೆ ಯಾಕೆ ? W