ಪುಟ:ಶೇಷರಾಮಾಯಣಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ. ರಾಮಾಯಣವನ್ನು ಪಾರಾಯಣವಾಡಿದ ಮಾತ್ರದಿಂದ ಇಹಪರ ಸುಖಗಳೆರಡೂ ಲಭಿಸುವುವೆಂಬಲ್ಲಿ ರಾಮಕಥೆಯನ್ನು ಗ್ರಂಥರೂಪವಾಗಿ ರಚಿಸಿದರೆ ಇಷ್ಟಾರ್ಥ ಪ್ರಾಪ್ತಿಯಾಗದಿರಲಾರದೆಂಬ ದೃಢವಾದ ನಂಬಿಕೆ ಯಿಂದ ರಾಮಕಥೆಯನ್ನು ರಚಿಸಬೇಕೆಂಬ ಕುತೂಹಲವು ನನಗುಂಟಾಯು. ಆದರೆ ಪೂರರಾಮಾಯಣದ ಕಥಾಭಾಗವು ಅನೇಕ ಕವಿಗಳಿಂದ ಅನೇಕ ಪ್ರಕಾರವಾಗಿ ರಚಿಸಲ್ಪಟ್ಟಿರುವುದು. ಇದನ್ನು ಲೋಕದಲ್ಲಿ ಅರಿಯದ ವರೇ ಇಲ್ಲ. ಆದಕಾರಣ ಉತ್ತರರಾಮಾಯಣದ ರಾಮಾಶ್ವಮೇಧದ ಕಥಾ ಭಾಗವನ್ನು ಮಾತ್ರ ಪದ್ಮಪುರಾಣೋಕ್ತರೀತಿಯಿಂದ ಕನ್ನಡಿಗರಿಗೆ ಸುಲಭ ವಾಗಿ ತಿಳಿಯುವಂತ ವಾರ್ಧಿಕಪಟ್ನದಿಯಲ್ಲಿ ಯಥಾವತಿಯಾಗಿ ರಚಿಸಿರು ವೆನು, ಗುಣ್ಣೆ ಕಪಕ್ಷಪಾತಿಗಳು ಇದರಲ್ಲೇನಾದರೂ ದೋಷವಿದ್ದರೆ ಅದ ನ್ನು ಗಣನೆಗೆ ತಾರದೆ ಕ್ಷಮಿಸುವರೆಂದು ನಂಬುತ್ತೇನೆ. ಈ ಗ್ರಂಥವು ಸ್ತ್ರೀಯರಿಗೂ ಪಠನದೆ ಗ್ಯವಾಗಿರಬೇಕೆಂಬ ಉದ್ದೇಶದಿಂದ ಕಾವ್ಯಲಕ್ಷ ಶಾನುಸಾರವಾಗಿ ಉಕ್ತವಾಗಿರುವ ಅವ್ಯಾದಶವರ್ಣನೆಗಳ ಶೃಂಗಾರಾದಿ ನವರಸಗಳೂ ಸಂಗತವಾಗಿಯು ಗಂಭೀರವಾಗಿಯೂ ಇರುವುವು. ಇದನ್ನು ಮೈಸೂರು ಗವರ ನಂಟಿ ಕನ್ನಡ ಸ್ಕೂಲೆ ಹೆಡ್ನಾರ್ಸ್ಟ ಮಹಾರಾಜಶ್ರೀ ಬಿ. ಮಲ್ಲಪ್ಪನವರೂ ಆಸ್ಥಾನ ಪಂಡಿತರಾದ ವೇದಮೂರಿ ಚಾಮರಾಜನಗರದ ರಾಮಶಾಸ್ತ್ರಿಗಳೂ ಆಮೂಲಾಗ್ರವಾಗಿ ಶೋಧಿಸಿ ನೋಡಿ ಸಮ್ಮತಿಸಿರುವುದಕ್ಕಾಗಿ ಕೃತಜ್ಞನಾಗಿರುವೆನು. ರ್ಸ ೧೯೦೧ ನೇ ). ರ್ಸ ೧೯೦೧ ನೇ ) ಸೋಸಲೆ, ಅಯ್ಯJ' ಜನವರಿ.