ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೩ ಶ್ರೀಕೃಷ್ಣ ಬೋಧಾಮೃತಸಾರವು. ಏಳು ತಲೆ ಹಿಂದಿನಿಂದಲೂ, ನಮ್ಮ ಹಿರಿಯರಿಗೂ ಮಗಧದೇಶದ ಹಿರಿಯರಿ ಗೂ, ಶತ್ರತವುಂಟಾಗಿ ಘೋರ ಯುದ್ಧಗಳು ನಡೆದು, ನಮ್ಮ ಹಿರಿಯರು ಅವರ ದೇಶದಲ್ಲಿಯೂ, ಅವರ ಹಿರಿಯರು ನಮ್ಮ ದೇಶದಲ್ಲಿಯ ನೃತಿಯು «ದಿರುವುದು ನಿಮ್ಮೆಲ್ಲರಿಗೂ ತಿಳಿದೇ ಇರುವುದಕ್ಕೆ ! ನಾವು ಈಗ ಏನು ಮಾಡಬೇಕು ! ಸ್ವಯಂವರವನ್ನು ಪ್ರಕಟಿಸಿದ ರೀತಿಯಾಗಿ ಈ ಪುಣ್ಯ ಪುರುಷನು ದಿವ್ಯಮಾಣಿಕ್ಯವನ್ನು ತಂದಿರುವನು. ಈಗ ನಾವು ಮಾತಿಗೆ ತಸುವುದು ರಾಜಧರವಲ್ಲವು, ಹೇಗಾದರೂ ಆಗಲಿ, ಈ ಮಹಾನು ಭಾವನಿಗೆ ನನ್ನ ಮಗಳನ್ನು ವಿವಾಹವಾಡುವುದು ನಿಜವು. ಆದರೆ ಈಗ ನಾವು ಒಂದು ಉಪಾಯವನ್ನು ಮಾಡಬೇಕು, ಚಗುಪ್ತನು ನಮ್ಮ ಕಾರಾಗೃಹದಲ್ಲಿರುವನೆಂದು ಮಗಧ ರಾಜನಿಗೆ ಬಂದರೆ, ಪುತ್ರವಾತ್ಸಲಂ ದ ಆ ರಾಜನು ನಮ್ಮೊಂದಿಗೆ ಸಮಾಧಾನ ಮಾಡಿಕೊಳ್ಳುವನು. ಅನಂತರ ನಾವು ಈ ವುಸಾತ್ಯನಿಗೆ ನನ್ನ ಪುತ್ರಿಯನ್ನು ಕೊಟ್ಟು ಮದುವೆ ಮಾಡುವೆ ನೆಂದನು. ಈಮಾ ಗೆ ಮಂತ್ರಿಗಳೂ ಸಭಿಕರೂ ಸಮ್ಮತಿಸಿದರು, ಈ ಮಾತುಗಳನ್ನು ಕೇಳಿದಕೂಡಲೆ, ಚಂದ್ರಗುಪ್ತ ಮಹಾರಾನು, ಪ್ರಳಯ ಕಾಲದ ಕಾಲಭೈರವನಂತಾಗಿ, ರಾಜೇಂದ್ರನನ್ನು ನೋಡಿ, ರಾಜವರಾ! ನನ್ನ ನ್ನು ಕಾರಾಗೃಹದಲ್ಲಿಡಲು ಇಷ್ಟಪಡುವೆಯತ : ತ್ರಿಲೋಕದಲ್ಲಿರುವ ರೆಲ್ಲಾ ವಿಕವಾಗಿ ಬಂದರೂ ನನ್ನನ್ನು ಕಾರಾಗೃಹದಲ್ಲಿಡಲಾರರು, ನನ್ನ ಮಾಹಾತೊನ್ನು ತಿಳಿಯದೆ ನೀನು ಹೀಗೆ ಮಾತನಾಡಿದೆ, ಕ್ಷಣಮಾತ್ರದ ಲ್ಲಿ ನಿನ್ನ ನೂ ನಿನ್ನ ಸೈನ್ಯವನ್ನೂ ಈ ನಧಿಕರನೂ ನಿಗೂ.ಮಾಡಿ ನಿನ್ನ ಪುತಿಯಾದ ಪ್ರಮುನೇಡಿಯನ್ನೆ ಕೊಂದು ನಮ್ಮ ತಂದೆಯಬಳಿಗೆ ಸೇರು ವೆನು, ೬ ಸ೧ಕನೆ ತಲೆಗೆಳಗಾದ, ಸಮುದ್ರಗಳೆಲ್ಲಾ ಬತ್ತಿದರೂ, ಎಂ ದೆಂದಿಗೂ ನಮ್ಮ ತಂದೆಯು ನಿನಗೆ ಸಮಾಧಾನದ ತ್ರಿಕೆ ಯನ್ನು ಕಳುಹಿ ಸುವನೆಂದು ಕನಸ್ಸಿನಲ್ಲಿಯೂ ಯೋಚಿಸಬೇಡ, ಕ್ಷಣಮಾತ್ರದಲ್ಲಿಯೇ ನಿ ಮಗ - ಯೇನಾಗುವುದೋ ನೋಡೆಂದು ದಿಕ್ಕುಗಳು ನಡೆಸುವಂತೆ ಗರ್ಜಿ ನಿ, ಅಸ್ಪಶರಿಸೀ ಎ ಬ ಮಂತ್ರವನ್ನು ಜಪಿಸಿ, ಯಾರಿಗೂ ಕಾಣದಂತಾ ಗಿ, ಆ ರಾ ~ನ ಕಿರೀಟವನ , ಸಭಿಕರ ಕಿರೀಟಗಳನ್ನೂ ಕೆಳಗೆ ಕೆಡವಿ ಭ್ರಮರವೇಣಿಯು ಇದ್ದಲ್ಲಿಗೆ ಹೋಗಿ ನಡೆದ ವರ್ತಮಾನವನ್ನೆಲ್ಲಾ ವಿವರಿ ಸಿದನು, ಆ ಇಂಗುಮುಖಿಯಾದರೋ ಚಂದ ಗುಪ್ತನ ವೀರವಾಕ್ಕುಗಳಿಗೆ ಹೆದರಿ, ಶಾಂತವಚನಗಳಿಂದ ರಾಜಪುತ್ರನಿಗೆ ಸಮಾಧಾನವನ್ನು ಮಾಡಿ . ಅವನನ್ನು ಬಿಡಾರಕ್ಕೆ ಕಳುಹಿಸಿ, ತಾನು ತಂದೆಯವರಿಗೆ ಬರುತ್ತಿದ್ದಳು ಅತ್ಯ ಸಭಾ ಭವನದಲ್ಲಿಯಾದರೆ, ರಾಜನೂ ಸಭಿಕರೂ ಕಿರೀಟಗಳು ತಲೆಯಿಂದ ಕೆಳಕ್ಕೆ ಬಿದ್ದು ಹೋಗಿರುವುದಕ್ಕಾಗಿ ಬಹಳವಾಗಿ ದುಃಖಿಸಿದರು