ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wnw+/wwwYYYY ಶ್ರೀ ಕೃಷ್ಣ ಬೋಧಾಮೃತಸಾರವು ೬೧ ರಿಸುತ್ತಾ, ಕಾಮವಿಕಾರದಿಂದ ಭಾಂತನಾಗಿದ್ದನು. ಸ್ವಲ್ಪಹೊತ್ತಾದ ಬಳಿಕ ಅಯ್ಯೋ ದೇವರೆ ! ಆ ಸುಂದರಾಂಗಿಯು ನನಿಗೆ ಲಭಿಸುವುದುಂಟೇ? ಏನುಮಾಡಲೆಂದು ನಾನಾಪ್ರಕಾರವಾಗಿ ಚಿಂತಿಸುತ್ತಾ, ವಿನೂತೋರದೆ, ಕಟ್ಟಕಡೆಗೆ ಒಳ್ಳೆದು, ಈಜನ್ಮದಲ್ಲಿಯಂತೂ ನನಿಗೆ ಆ ತ್ರಿಲೋಕಸುಂದ ರೀಮಣಿಯು ಲಭಿಸದಿದ್ದರೆ ಮುಂದಿನ ಜನ್ಮದಲ್ಲಿಯಾದರೂ ಲಭಿಸುವಂತೆ ನಾನು ತಪಸ್ಸನ್ನು ಮಾಡುವುದು ಉತ್ತಮವೆಂದು ತನ್ನ ಮನಸ್ಸನ್ನು ದ್ರ ಢಮಾಡಿಕೊಂಡು, ವೈರಾಗ್ವಾತಿಶಯದಿಂದ ರಾಜ್ಯ ಕೋಶಗಳ ಮಮತೆಯ ನ್ನು ತೊರೆದುಬಿಟ್ಟನು. ಬೆಳಗಾದಕಡಲೆ ತಂದೆಯಬಳಿಗೆ ಹೋಗಿ, ನ ಮಸಾರವಂ ಮಾಡಿ, ತಂದೆಯೇ ! ನಾನು ಭೂಸಂಚಾರಾರ್ಥವಾಗಿ ಹೋ ರಟು, ನನಿಗೆ ಬೇಕಾದ ಕನ್ಯಕಾ ಮಣಿಯನ್ನು ವಿನಾಗಮಾಡಿಕೊಂಡು ಬ ರುವೆನೆಂದು ಅನುಚ್ಛೆಯಂ ಪಡೆದು, ಧನವನ್ನಾಭರಣಂಗಳನ್ನು ತೆಗೆದು ಕೊಂಡು, ಅಶ್ವಾರೂಢನಾಗಿ, ದಕ್ಷಿಣದಿಕ್ಕಿಗೆ ಪ್ರಯಾಣಮಾಡುತ್ತಾ, ದ ದ್ವವಾದ ಕಾಡುಗಳನ್ನು ಹೊಕ್ಕು, ಅಲ್ಲಲ್ಲಿ ದೊರೆಯುವ ಮಾಧುಗ್ಯ ಫಲ ಗಳನ್ನು ಭಕ್ಷಿಸಿ, ತಿಳಿನೀರನ್ನು ಕುಡಿದು, ಮರದ ನೆರಳಲ್ಲಿ ಬಸಲಿನದಗೆ ಯ ತಾಪವನ್ನು ಹೋಗಲಾಡಿಸಿಕೊ೦ಡು, ಮುಂದಮುಂದಕ್ಕೆ ಪ್ರಯಾಣ ಮಾಡುತ್ತಾ ಇರುವಲ್ಲಿ ಭುಜಂಡಮಹರ್ಷಿಯ ಆಶ್ರಮವು ಸಿಕ್ಕಿತು. ವಿಟಿ ತವಾಹನನು ಆ ಆಶ ಮವನ್ನು ಹೊಕ್ಕಾ, ಅಲ್ಲಿದ್ದ ಭುಜಂಡಮಹರ್ಷಿಗೆ ಸಾಷ್ಟಾಂಗದಂಡಪ್ರಣಾಮವನ್ನು ಮಾಡಿದನು, ಋಷಿವರ್ಯನಾದರೂ ಆ ರಾಜಪತ ನನ್ನು ಸಂತೈಸಿ, ರಾಜನಂದನಾ : ನೀನು ಯಾರು ? ನಿನ್ನ ದೇಶವು ಯಾವುದು ? ರಾಜ್ಯಕೋಶಗಳನ್ನೆಲ್ಲಾ ಬಿಟ್ಟು ಈ ಘೋಲಾರ ಣ ಕ್ಕೆ ಬರಲು ಕಾರಣವೇನೆಂದು ಕೇಳಲು, ಮಹಾನುಭಾವನೆ ! ನಾನು ವಾಂಚಾ ದೇಶದ.ರಾಜಪುತ್ರನ, ನನಿಗಿಂತಲೂ ದೊಡ್ಡವರು ಮೂವರು ಮಕ್ಕಳು ನಮ್ಮ ತಂದೆಗೆ ಇರುವರು, ಅವರು ರಾಜ್ಯಸಭಾಭಿಷೇಕಕ್ಕೆ ಅರ್ಹರಾಗಿರುವುದರಿಂದ ನಾನು ವೈರಾಗ್ಯಬುದ್ಧಿಯುಳ್ಳವನಾಗಿ ತಪಳ್ಳಿ ನಾ ಮಾಡಬೇಕೆಂದು, ದಕ್ಷಿಣದಿಕ್ಕಿಗೆ ಪ್ರಯಾಣಮಾಡುತ್ತಾ ಬರುತ್ತಿರು ವಲ್ಲಿ, ಮಹಾನುಭಾವರಾದ ತಮ್ಮ ಆಶ್ರಮವೂ ತಮ್ಮ ದರ್ಶನವೂ ನನಗೆ ಲಭಿಸಿದವು, ಇಂದಿಗೆ ನಾನು ಧನ್ಯನಾದೆನು. ವೈರಾಗ್ಯವನ್ನು ಹೊಂದಿ ರುವ ನನಗೆ, ಪುಣ್ಯಪ್ರದವ್ರ ಮುಕ್ಕಿದಾಯಕವೂ ಆಗಿರುವ ತಾರಕಮಹಾ ಮಂತ್ರವನ್ನು ಬೋಧಿಸಿ, ನನ್ನ ನ್ನು ಕೃತಾರ್ಥನನ್ನಾಗಿ ಮಾಡಬೇಕೆಂ ದು ಬೇಡಿಕೊಂಡನು. ಭುಜಂಡಮುನಿಯು ರಾಜಪುತ್ರನಾದ ವಿಚಿತ್ರವಾ ಹನನ ಈ ಮಾತುಗಳನ್ನು ಕೇಳಿ, ರಾಜಪುತಾ ! ನೀನು ತಪಸ್ಸು ಮಾಡು ವುದು ಬಹಳ ಸುಲಭವೆಂದು ಇಲ್ಲಿಗೆ ಬಂದಿರುವೆಯಾ ? ಕಾಡಿನಲ್ಲಿ ವಾಸ