ಪುಟ:ಶ್ರೀಮತಿ ಪರಿಣಯಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ಶ್ರೀಮತೀಪರಿಣಯಂ ದವನಿಗಂತೂ ಹೆಣ್ಣಿನಾಸೆಯಿಲ್ಲ. ಅವನ ಆಶೋತ್ತರವೇನೋ ಅಪರಿಮಿತವಾಗಿರುವುದು : ಬರೀಮಾತುಗಳಿಂದಾದರೂ ಅವನ ಮನಸ್ಸಿಗೆ ಆಪ್ಯಾಯನವನ್ನು ಂಟುಮಾಡುವೆನು, ಹೇಗೂ ಕಾರ್ ವು ನಮ್ಮ ಕೈವಶವಾಗಿರುವಾಗ, ಬಾಯಿಮಾತುಗಳಿಂದಾದರೂ ಅವನು ಸಂತೋಷಪಡಲಿ ! (ಮುಂದೆ ಹೋಗಿ) ಮಿತ್ರನೆ ! ಇದೇ ನು ಇಷ್ಟು ವಿಳಂಬವಾಯಿತು ? ನಾನು ನಿನ್ನನ್ನೇ ನಿರೀಕ್ಷಿಸುತ್ತಿ ದೈನು, (ನಾರದನು ಪ್ರವೇಶಿಸುವನು. ನಾರದ ಪರೈತರಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿ ಮರೆಯಾಗಿ ನಗುವರು.) ನಾರದಂ-ಮಿತ್ರನೆ ! ನಿನಗೆ ಮೊದಲೇ ನಾನು ಇಲ್ಲಿ ಬಂದು ಹೋದೆನು. ಈ ಸ್ವಯಂವರಮಂಟಪದ ಸೊಬಗನ್ನು ನೋಡುವುದಕ್ಕಾಗಿ ಹೋಗಿ ಅಲ್ಲಲ್ಲಿ ಸುತ್ತಿ ಬಂದೆನು. ಪರತಂ-ಅದು ಹೋಗಲಿ ! ಈಗ ಅಂಬರೀಷರಾಜನು ಏನೇನೋ ಉಪಾಯ ದಿಂದ ತನ್ನ ಮಗಳ ಸ್ವಯಂವರವೆಂಬ ವ್ಯಾಜವನ್ನು ಕಲ್ಪಿಸಿ, ಆಜನ್ಮ ಸ್ನೇಹಿತರಾದ ನಮ್ಮಿಬ್ಬರನ್ನೇ ಸ್ಪರ್ಧೆಗೆ ನಿಲ್ಲಿಸಿದನು ನೋಡು ! ನಾರದಂ-ಇದು ನಮ್ಮಿಬ್ಬರ ಅದೃಷ್ಟ ಪರೀಕ್ಷೆಯೇ ಹೊರತು ಇದರಲ್ಲಿ ಸ್ಪರ್ಧೆಯೇನಿರುವುದು, ಈಗ ನಮ್ಮಿಬ್ಬರಲ್ಲಿ ಯಾರ ಅದೃಷ್ಟವು ಮೇಲೆಂಬುದು ಇನ್ನು ಸ್ವಲ್ಪ ಕಾಲದೊಳಗಾಗಿ ತಿಳಿದುಹೋಗು ವುದುಪಕ್ವತಂ(ಸ್ವಗತ) ಇನ್ನೂ ಇವನಿಗೆ ಆ ಆಸೆಯು ತಪ್ಪಿದಹಾಗಿಲ್ಲ ! ಪಾಪ ! ತನ್ನ ಮುಖವು ತನಗೆ ಕಾಣುವಹಾಗಿದ್ದರೆ, ಇವನು ಹೀಗೆ ಆಶೋತ್ತರವನ್ನಿಟ್ಟುಕೊಳ್ಳುತ್ತಿದ್ದನೆ ? ( ಪ್ರಕಾ ಶಂ) ನಾರದಾ ! ನನಗಿಂತಲೂ ನೀನು ಅದೃಷ್ಟಶಾಲಿಯೆಂ ಬುದು, ಈಗ ನಿನ್ನ ಮುಖಲಕ್ಷಣದಿಂದಲೇ ವ್ಯಕ್ತವಾಗುವುದು. ಲೋಕಮೋಹಕವಾದ ಈ ನಿನ್ನ ಮುಖಸೌಂದಠ್ಯವನ್ನು ನೋ