ಪುಟ:ಶ್ರೀಮತಿ ಪರಿಣಯಂ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಕಂ. ರ್೭ ಡಿದಕೂಡಲೆ, ಆ ರಾಜಕನ್ಯಯು ನಿನ್ನನ್ನು ವರಿಸುವುದರಲ್ಲಿ ಸಂ ದೇಹವಿಲ್ಲ! ಇದು ಅಸೂಯೆಯ ಮಾತೆಂದು ತಿಳಿಯಬೇಡ ! ನಿಜ ವಾಗಿ ಹೇಳುವೆನು. ನಾರದಂ- ( ನಗುತ್ತ ಸ್ವಗತಂ ), ಮನುಷ್ಯರು ಮನಸ್ಸಿನಲ್ಲಿದ್ದುದನ್ನೇ ಬಾಯಿಂದಾದುವರೆಂಬುದು ನಿಜ ! ಇವನು ಅಸೂಯೆಯಿಂ ದಲೇ ಈ ಮಾತನ್ನಾಡುವಹಾಗಿದೆ, ಇರಲಿ! (ಪ್ರಕಾಶಂ ) ನನ್ನಲ್ಲಿರುವ ಮಿತ್ರಸ್ನೇಹದಿಂದ ನಿನಗೆ ಹಾಗೆ ತೋರುವು ದೇನೋ ಸಹಜವಾಗಿದ್ದರೂ, ನಿನ್ನ ಮುದೆ ನಾನಲ್ಲ ! ಈಗ ನಿನ್ನ ಮುಖವು ಎಂತವವರ ದೃಷ್ಟಿಯನ್ನಾದರೂ ಆಕರ್ಷಿ ಸುವಂತಿರುವುದು. (ತೆರೆಯಲ್ಲಿ ರಾಜಾಧಿರಾಜ ! ಪರಾಕ್‌ ಎಚ್ಚರಿಕೆ ! ನಾರದಂ-ಓಹೋ ! ರಾಜನು ಬರುತ್ತಿರುವಹಾಗಿದೆ. (ಇಬ್ಬರೂ ಠೀವಿಯಿಂದ ಪೀಠದಮೇಲೆ ಕುಳ್ಳಿರುವರು.) (ರಾಜನು ಪುಷ್ಪಮಾಲಿಕೆಯನ್ನು ಹಿಡಿದು ಶ್ರೀಮತಿಯನ್ನು ಕರೆತರುವನು.) ರಾಜಂ-(ಮಗಳನ್ನು ಕೈಹಿಡಿದು ನಿಲ್ಲಿಸಿಕೊಂಡು) ಕುಮಾರೀ ! ನಾವು ಕ್ಷತ್ರಿಯಕುಲದವರಾಗಿದ್ದರೂ, ನೀನು ಬ್ರಾಹ್ಮಣಪತ್ನಿ ಯೆನಿಸಿ ಕೊಂಡು, ಉತ್ತಮವಾದ ಬ್ರಾಹ್ಮಣಕುಲವನ್ನು ಸೇರತಕ್ಕ ಭಾ ಗ್ಯಕ್ಕೆ ಪಾತ್ರಳಾಗಿರುವೆ! ಮಹಾಜ್ಞಾನನಿಧಿಗಳೆನಿಸಿಕೊಂಡ ನಾ ರದಪರೈತರೆಂಬ ಮಹರ್ಷಿಗಳಿಬ್ಬರೂ ನಿನ್ನ ರೂಪಕ್ಕೆ ಮೋಹಿತ ರಾಗಿ,ನಿನ್ನನ್ನು ವರಿಸಬೇಕೆಂದಪೇಕ್ಷಿಸಿರುವರು. ಇಬ್ಬರೂ ಮಹಾ ತರಾದುದರಿಂದ,ಅವರಲ್ಲಿ ಯಾರನ್ನೂ ತಿರಸ್ಕರಿಸಲಾರದೆ, ನಾ ನು ಅವರಿಬ್ಬರಿಗಾಗಿಯೇ ಈ ಸ್ವಯಂವರವನ್ನೇರ್ಪಡಿಸಿರುವೆನು. ಆದುದರಿಂದ :-