ಪುಟ:ಶ್ರೀಮತಿ ಪರಿಣಯಂ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮2 ಶ್ರೀಮತೀಪರಿಣಯಂ ಸುವುದು ಯುಕ್ತವೆ! ಅಯ್ಯೋಪಾಪ!ನಾನು ಮಾಡಿರುವ ತಂತ್ರ ವನ್ನು ಅವನೇನುಬಲ್ಲನು? ಇರಲಿ ! ಮುಖ್ಯವಾಗಿ ರಾಜನು ಪರ್ವ ತನ ವಿಷಯದಲ್ಲಿ ಸಂದೇಹಿಸುತ್ತಿರುವನು. ಅವನ ಸಂದೇಹವನ್ನು ನೀಗಿಸುವೆನು (ಪ್ರಕಾಶಂ) ರಾಜೇಂದ್ರಾ ! ಸಂದೇಹಿಸಬೇಡ ! ಇವನು ನನ್ನ ಮಿತ್ರನಾದ ಪರ್ವತನು! ನಾನು ನಾರದನೆಂಬು ದನ್ನು ನೀನೇ ಬಲ್ಲೆಯಷ್ಟೆ ? ಪರ್ವತಂ-(ಸ್ವಗತಂ) ಅಯ್ಯೋ! ಈ ನಾರದನು ತನ್ನ ವಿಷಯದಲ್ಲಿ ರಾಜ ನಿಗಿರುವ ಸಂದೇಹವನ್ನು ತಿಳಿಯದೆ ನನ್ನನ್ನು ಅವನಿಗೆ ತೋರಿ ಸುತ್ತಿರುವನು. ನನ್ನ ಮುಖವನ್ನು ನೋಡಿದರೆ ನಾನು ಪಕ್ವತ ನೆಂಬುದು ತಿಳಿಯುವುದಿಲ್ಲವೆ ? ಈತನವಿಷಯದಲ್ಲಿ ರಾಜನಿಗಿರುವ ಸಂದೇಹವನ್ನು ಪರಿಹರಿಸುವೆನು, (ಪ್ರಕಾಶಂ) ಮಹಾರಾಜನೆ ? ಸಂದೇಹಿಸಬೇಡ ! ನನ್ನನ್ನು ಬಲ್ಲೆಯಷ್ಟೆ ? ಇವನೇ ನಾರದನು. ನೆನ್ನೆ ಸೀನು ವಾಗ್ದಾನಮಾಡಿದುದಕ್ಕಾಗಿ ನಾವಿಬ್ಬರೂ ನಿನ್ನ ಮ ಗಳ ಸ್ವಯಂವರಕ್ಕಾಗಿ ಬಂದಿರುವೆವು. ರಾಜಂ - ಆಶ್ವ ರದಿಂದ)ಏನು ? ಇವರೇ ನಾರದಪರ್ವತರೆ! ಹಾಗೆ ತೋರ ಲಿಲ್ಲ ! ಆ ಬ್ರಹ್ಮತೇಜಸ್ಸೆಫ್ ! ಈ ಘೋರರೂಪವೆಲ್ಲಿ ! ಆದರೆ ಕಂಠಸ್ವರವುಮಾತ್ರ ಮೊದಲಿನಂತೆಯೇ ಇರುವುದು ! ಅನಾರದ ಪರೈತರೇ ಈ ವೇಷದಿಂದ ನನ್ನನ್ನು ಪರೀಕ್ಷಿಸುವುದಕ್ಕಾಗಿ ಬಂ ದಿರಬಹುದೆ ! ಇದ್ದರೂ ಇರಬಹುದು. ಮಹರ್ಷಿಗಳ ಪ್ರಭಾವ ವನ್ನು ಹೀಗೆಂದು ಹೇಳುವುದಕ್ಕಿಲ್ಲ ! ಈಗೇನು ಮಾಡಲಿ. ನಾರದಂ-ರಾಜೇಂದ್ರಾ! ಏಕೆ ಸುಮ್ಮನೆ ನಿಂತಿರುವೆ ? ಪರ್ವತಂ-ರಾಜಾ ! ನಿನ್ನ ಸಂದೇಹಕಾರಣವೇನು ? ಅದನ್ನಾದರೂ ಹೇ ಳಬಾರದೆ ? ರಾಜಂ-(ಸ್ವಗತ) ಆಹಾ ! !ಇವನಾದರೋ ಆತುರಪಡಿಸುತ್ತಿರುವರು. ಇವರಿಗೆ ನನ್ನ ಸಂದೇಹಕಾರಣವನ್ನು ಹೇಗೆ ತಿಳಿಸಲಿ ! ಲೋಕ ದಲ್ಲಿ ಅವರವರಲ್ಲಿರುವ ನಿಜವಾದ ದೋಷವನ್ನೆ ಹೇಳಿದರೆ,