ಪುಟ:ಶ್ರೀಮತಿ ಪರಿಣಯಂ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೩ ಶ್ರೀಮತೀಪರಿಣಯಂ ನಿನ್ನಂತೆ ದಿವ್ಯಮಂಗಳವಿಗ್ರಹ ವಿಶಿಷ್ಯನಾಗಿ, ನಿನ್ನಂತೆಯೇ ಸಕಲ. ಕಲ್ಯಾಣಗುಣಗಣಪರಿಪೂರ್ಣನಾಗಲಿ ! ನಿನ್ನ ಅಂಶದಿಂದಲೇ ಅವನು ನನಗೆ ಪತಿಯಾಗಲಿ ! ದೇವಾ ! ಈ ಪುಷ್ಪಮಾಲಿಕೆಯು ನಿನಗೇ ಅರ್ಪಿತವು ! (ಎಂದೆಸೆಯುವಳು.) (ಮಾಲೆಯು ಅದೃಶ್ಯವಾಗುವುದು. ದಿವ್ಯತೇಜಸ್ವಿಯಾದ ತರುಣ ನೊಬ್ಬನು ಅದೇ ಮಾಲಿಕೆಯನ್ನು ಕಂಠದಲ್ಲಿ ಧರಿಸಿ ವಿಮಾನದಿಂ ದಿಳಿದು ಬಂದು, ಶ್ರೀಮತಿಯ ಕೈಯನ್ನು ಹಿಡಿದುಕೊಂಡು) ಎಲೆ ಭದ್ರೆ ! ಇದೋ ! ನೀನು ಹಾಕಿದ ಪುಷ್ಪಮಾಲೆಯು ನನ್ನ ಕಂಠದಲ್ಲಿ ಬಿದ್ದಿತು ! ನೀನು ನನ್ನ ಪತ್ನಿ ! ಬಾ ಹೋಗುವೆವು! (ವಿಮಾನವನ್ನೇರಿಸಿ, ಕರೆದುಕೊಂಡು ಹೋಗುವನು.) ಪುಷ್ಟ ಷ್ಟಿಯಾಗುವುದು, (ಎಲ್ಲರೂ ಸ್ತಬ್ಧರಾಗಿ ನೋಡುತ್ತಿರುವರು.) ರಾಜಂ - (ದುಃಖಾಶ್ಚರದಿಂದ) ಆಹಾ ! ಏನೀವಿಪರೀತವು : ಕುಮಾರೀ ! ಕುಮಾರೀ ! ಎಲ್ಲಿ ಹೋದೆ ! (ನಾರದಪರೈತರಿಬ್ಬರೂ ಕೋ ಪದಿಂದ ರಾಜನನ್ನು ದುರದುರನೆ ನೋಡುತ್ತ ಹಲ್ಲು ಕಡಿಯು ತಿರುವರು.) ನಾರದಂ-ಎಲೆ ರಾಜಾಧಮಾ! ಈ ಇಂದ್ರಜಾಲದಿಂದ ನಮ್ಮನ್ನು ವಂಚಿಸುವುದಕ್ಕಾಗಿಯೇ ಇದುವರೆಗೆ ಕಾಲಹರಣಮಾಡಿದೆ ಯಲ್ಲವೆ ? ಪರ್ವತಂ-ಮಿತ್ರನೆ!ಇವನು ನಮ್ಮನ್ನು ಸ್ವಯಂವರಕ್ಕೆಂದು ಕರೆಸಿ, ನಾವು ಬಂದಮೇಲೆ, ಏನೇನೋ ಯೋಚಿಸುವನೆವದಿಂದ ಕಾಲ ಹರಣವನ್ನು ಮಾಡಿದಾಗಲೇ ನನಗೆ ಸಂದೇಹವು ಹುಟ್ಟಿತು, ತನ್ನ ಮಗಳನ್ನು ಬೇರೆ ಯಾರೋ ಅಪಹರಿಸಿದಂತೆ ದುಃಖವನ್ನೂ ನಟಿಸುವನು ನೋಡು ! ರಾಜಂ (ದೈನ್ಯದಿಂದ ಪೂಜ್ಯರೆ ! ಸತ್ಯವಾಗಿಯೂ ಈ ವಿಷಯದಲ್ಲಿ ನಾನು ಅಪರಾಧಿಯಲ್ಲ ! ನಾನು ಯಾವ ಸಂಗತಿಯನ್ನೂ ಕಾ ಹೆನು.