ಪುಟ:ಶ್ರೀಮತಿ ಪರಿಣಯಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಂಕ೦. ೮೬ ನಾರದಂ-ಎಲೆಲ! ವೃಪಾಧಮಾ! ಈ ತಂತ್ರಗಳೆಲ್ಲವನ್ನೂ ನಾನು ಬಲ್ಲೆ ನು, ಸಾಕು ಸುಮ್ಮನಿರು! ರಾಜಂ -ಪೂಜ್ಯರೆ ! ನಿಷ್ಕಾರಣವಾಗಿ ನನ್ನನ್ನು ತಮ್ಮ ಆಗ್ರಹಕ್ಕೆ ಗುರಿ ಮಾಡಬಾರದು!ತಾವು ಹೀಗೆ ರೂಪಾಂತರದಿಂದ ಬಂದುದನ್ನೂ, ನನ್ನ ಕುಮಾರಿಯು ಅದೃಶ್ಯವಾದುದನ್ನೂ ನೋಡಿದರೆ, ತಾವೇ ನನ್ನನ್ನು ಅನೇಕವಿಧದಿಂದ ಪರೀಕ್ಷಿಸುವಹಾಗಿದೆ ! ಸತ್ವವಿಧದಲ್ಲಿ ಯೂ ತಮ್ಮ ಆಜ್ಞಾಧಾರಕನಾದ ನನ್ನಲ್ಲಿ ಪ್ರಸನ್ನ ರಾಗ ನನ್ನ ಕು ಮಾರಿಯನ್ನು ತೋರಿಸಿಕೊಡಬೇಕು.(ಎಂದು ನಮಸ್ಕರಿಸುವನು.) - ರಾಗ, ತಾಳ. ರಾಗ. ತಾಳ. ಎಲೆಲೇ / ದುರುಳಾ | ಸಾಕೀನಟನವು | ಬಲ್ಲೆ ನಿನ್ನಾಟವನು || ನಿಲ್ಲಿಸೀ ನುಡಿಗಳನು | ಸೊಲ್ಲ ಮುರಿಯುವೆ ನಾನು | ಬುಲ್ಲನೆ ನಮ್ಮನು ) ಲಲ್ಲೆಮಾತಿನಲಿ | ವಂಚಿಸೆಯಲ | ನೀನು!! ೧ 11 ಭೀ ಭೀ | ಮೂರ್ಖಾ | ಯಾರೆಂದರಿಯುವೆ | ನಾರದನಲ್ಲವೆ ನಾನು | ತೋರುವೆನೆನ್ನಯ ತಪದ 1 ಸಾರವನೆಲ್ಲವ ನಿನಗೆ | ಕೂರನೆ ನಿನ್ನ ಯ। ಮೀರಿದ ಗರ್ವಕೆ 1 ಫಲವನು ನೋಡೀಗ || ೨ | ಛೀ 1 ಟೀ | ಮೂರ್ಖಾ | ಪರ್ವತಂ-ಮಿತ್ರನೆ ! ಕಪಟೆಯಾದ ಇವನ ವಂಚನೆಗೆ ಈಗಲೇ ನಾವು ಫಲವನ್ನು ತೋರಿಸಬೇಕು. ರಾಜಂ -ಪೂಜ್ಯರೆ ! ತಮಗೆ ಅಷ್ಟು ಶ್ರಮವೇಕೆ ? ಮಹಾತ್ಮರಾದ ನಿಮ್ಮಂ ತವರ ವಿಷಯದಲ್ಲಿ ನಾನು ಅಪರಾಧಿಯಾಗಿದ್ದರೆ,ಆಕ್ಷಣವೇ ನನ್ನ ಕೈಯಲ್ಲಿರುವ ಈ ವಿಷ್ಣು ಚಕ್ರವೇ ನನ್ನ ತಲೆಯನ್ನು ಸಹಸ್ರ ಭಾಗವಾಗಿ ಭೇದಿಸುತಿತ್ತಲ್ಲವೆ ? ನಾನು ಮನಸ್ಸಾಕ್ಷಿಯಾಗಿ ನಿಮ್ಮಲ್ಲಿ ಅಪರಾಧಿಯಲ್ಲವೆಂಬುದು ನಿಜವಾಗಿದ್ದರೆ, ಈ ವಿಷ್ಣು ಚಕ್ರವೇ ತಮ್ಮ ಕೋಪಾಗ್ನಿ ಯಿಂದ ನನ್ನನ್ನು ರಕ್ಷಿಸಲಿ ! ಪೂ ಜ್ಯರೆ ! ಈಗಲೂ ಹೇಳುವೆನು. ನಿಜವಾಗಿ ನಾನು ಅಪರಾಧಿಯಲ್ಲ! ನಿಮ್ಮನ್ನು ವಂಚಿಸಬೇಕೆಂಬ ಉದ್ದೇಶದಿಂದ ನಾನು ಕಾಲಹರಣ ಮಾಡಿದವನಲ್ಲ! ನಾನು ನಿಮ್ಮ ಆಜ್ಞಾಧಾರಕನಾಗಿ, ನಿಷ್ಕಪಟ