ಪುಟ:ಶ್ರೀಮತಿ ಪರಿಣಯಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಂಕಂ, ೮? ಫಡಫಡ ರಿಪುಗಳನೀಗ 1 ಕಡಿಕಡಿ ದೊಟ್ಟುತೆ ಬೇಗ | ಘುಡಿಘುಡಿಸುತ ಧರೆ } ಗಡಗಡ ನಡುಗ ವೊ! ಲೋಡನೋಡ : ನಡಿಯಿಡು ! ತಲಿ ಬೇಗದಿ || ನಿದೊ! ಪೋಗುವೆ || (ಆರ್ಭಟಿಸುತ್ಯರಾಜನಮೇಲೆ ಬಿಳುವುದಕ್ಕೆ ಬರುವಳು, ಚಕ್ರಾ ಯುಧವು ಮಾಯೆಯನ್ನು ಬೆನ್ನಟ್ಟುವುದು, ಮಾಯೆಯು ಚಕ್ರ ಜ್ವಾಲೆಗೆ ಹೆದರಿ ಹಿಂತಿರುಗಿ ಓಡಿಬಂದು) ಮಹರ್ಷಿ ! ರಕ್ಷಿಸು! ಯಾವುದೋ ಅದ್ಭುತತೇಜಸ್ಸು ನನ್ನನ್ನು ದಹಿಸುತ್ತ ಬೆನ್ನಟ್ಟಿ ಬರುವುದು. (ನಾರದನನ್ನು ಮರೆಹುಗುವಳು.) ನಾರದ೦-(ಮುಂದೆ ನೋಡಿ)ಓಹೋ ! ಇದು ವಿಷ್ಣು ಚಕ್ರದ ತೇಜಸ್ಸು! ಇದು ನಮ್ಮ ನೈ ದಹಿಸುತ್ತಿರುವುದಲ್ಲಾ! ಇನ್ನೇನು ಗತಿ! ಪರ್ವ ತಾ ! ಈಗ ಮಾಡುವುದೇನು ! ಪರ್ವತಂ ಮಾಡುವುದೇನು ? ನಾವು ನಿರ್ಭಯವಾದ ವಿರಕ್ತಿಮಾರ್ಗ ದಿಂದ ದಾರಿತಪ್ಪಿ ಕಾಮಮಾರ್ಗದಲ್ಲಿ ಸಿಕ್ಕಿದಮೇಲೆ, ಅದರಿo ದುಂಟಾಗುವ ಅನರ್ಥಗಳಿಗೆಲ್ಲಾ ಗುರಿಯಾಗಲೇ ಬೇಕು, ಸ್ವಯಂ ಕೃತಾಪರಾಧಕ್ಕೆ ತಕ್ಕಫಲವು ತೋರುತ್ತಿರುವುದು, ಆಶಾಭಂಗ ವೊಂದು ! ಅವಮಾನವೊಂದು ! ಕೊನೆಗೆ ಪ್ರಾಣಾಂತಕರವಾದ ಈ ಅನರ್ಥವೂ ಬಂದೊದಗಿತು. ನಾರದಂ-ರಾಜನು ನಿಜವಾಗಿ ಅಪರಾಧಿಯಾಗಿದ್ದ ಪಕ್ಷದಲ್ಲಿ, ಈ ವಿಷ್ಣು ಚಕ್ರವು ಅವನಿಗೆ ಸಹಾಯವಾಗಿ ನಮ್ಮನ್ನು ಬಾಧಿಸುತ್ತಿರಲಿಲ್ಲ. ಬೇರೆಯಾರೋ ಮಾಯಾವಿಗಳಿಂದ ಈ ಕಾರವು ನಡೆದಿರಬೇಕು. ಪರ್ವತಂ-ಹಾಗಿದ್ದರೆ ಈಗ ನಾವು ಈ ರಾಜನಲ್ಲಿಯೇ ಶರಣಾಗತರಾಗು ವುದು ಮೇಲೆಂದು ತೋರುವುದು. ನಾರದಂ-ನಿಜ! ಹಾಗೆಯೇ ಮಾಡುವೆವು. (ನಾರದಪರೈತರ, ಮಾಯೆಯೂ ಕೈಮುಗಿದು ನಿಲ್ಲುವರು.) ನಾರದಂ-ರಾಜೇಂದ್ರಾ ! ನಾವು ತಿಳಿಯದೆ ಮಾಡಿದ ತಪ್ಪನ್ನು ಮನ್ನಿಸಿ ನಮ್ಮನ್ನು ಈ ಚಕ್ರತಾಪದಿಂದ ರಕ್ಷಿಸಬೇಕು.