ಪುಟ:ಶ್ರೀಮತಿ ಪರಿಣಯಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ಶ್ರೀಮತೀಪರಿಣ್ಯಂ (Jಂದು ಕಾಲಮೇಲೆ ಬಿಳುವುದಕ್ಕೆ ಹೋಗುವರು.) (ಅವರನ್ನು ಕೈಹಿಡಿದೆತ್ತಿ ಪೂಜ್ಯರೆ ! ಸರೈ ಕಪೂಜಿತರಾದ ನೀವು ನಿಮ್ಮ ಪಾದಸೇವಕನಾದ ನನಗೆ ನಮಸ್ಕರಿಸುವುದರಿಂದ ನನ್ನನ್ನು ದೋಷಕ್ಕೆ ಗುರಿಮಾಡಬೇಡಿರಿ! ರಾಜಂ -ಪೂಜ್ಯರೆ ! ಈ ಚಕ್ರಕ್ಕೆ ನಾನು ಅಧೀನನೇಹೊರತು ಇದು ನನ್ನ ಅಧೀನವಲ್ಲ. ಆ ಶ್ರೀಹರಿಯ ಸಂಕಲ್ಲಾನುಸಾರವಾಗಿ ಅದು ನಡೆಯುತ್ತಿರುವುದೇ ಹೊರತು, ಅದನ್ನು ತಡೆಯುವುದಕ್ಕಾಗಲಿ, ಬಿಡುವುದಕ್ಕಾಗಲಿ ನಾನು ಶಕ್ತನಲ್ಲ ! ಆದರೆ ನನ್ನ ಮನೆಗೆ ಅತಿಥಿಗಳಾಗಿ ಬಂದ, ನೀವು ಈ ಅಪಾಯಕ್ಕೆ ಗುರಿಯಾಗದಂತೆ, ನಾನೇ ನಿಮಗಾಗಿ ಆಭಗವಂತನನ್ನು ಪ್ರಾರ್ಥಿಸುವೆನು. (ಎಂದು ಕೈಮುಗಿದು ನಿಂತು ಪ್ರಾರ್ಥಿಸುವನು) ರಾಗ, ತಾಳ. ದೇವದೇವ | ದಯಾನಿಧೇ | ಸುಜನಪಾಲ | ಶ್ರೀನಿಧೇ! ಪಾವನಾತ್ಮ 1 ವೈಭವಾ | ಪಾಲಿಸೈ ಕೃ ! ಪಾರ್ಣವಾ || ಕನ್ನೆಯನ್ನು ! ನಾನಗಲಿ | ಖಿನ್ನ ಮಾನಸನಾಗಿರೆ | ಮಾನ್ಯರಾದ | ನಿವರಗ 1 ಕೋಪಕೀಡಾದೆನೇ || ದೀನಬಂಧೋ ! ದಯಾಸಿಂಧೋ | ದಾನವಾರಿ ! ಶ್ರೀಹರೀ | ಮಾನದಿಂದ | ಪಾಲಿಸೆನ್ನ | ದೀನನಾಗಿ/ಬೇಡುವೆ | (ತೆರೆಯು ಒಡೆಯುವುದು.ಶ್ರೀಮತಿಯೊಡನೆ ಭಗವಂತನು ಪ್ರತ್ಯಕ್ಷನಾಗಿ) ವಿಷ್ಣು --ಭಕೋತ್ತಮಾ ! ಅಂಬರೀಷಾ ! ನಿನ್ನ ಭಕ್ತಿಗೆ ಮೆಚ್ಚಿ ದೆನು. ನಿನ್ನ ಕುಮಾರಿಯ ವಿಷಯವಾಗಿ ನೀನು ಚಿಂತಿಸಬೇಕಾದುದಿಲ್ಲ ! ಇದೋ ! ನಿನ್ನ ಮಗಳು ಇಲ್ಲಿರುವಳು ನೋಡು ! ಇವಳು ಪೂರೈ ಜನ್ಮದಲ್ಲಿ ತಪಸ್ಸಿನಿಂದ ನನ್ನನ್ನು ಮೆಚ್ಚಿಸಿ, ನಾನೇ ತನಗೆ ಪತಿ ಯಾಗಬೇಕೆಂದು ವರವನ್ನು ಪಡೆದಿರುವಳು, ಅದರಂತೆ ನಾನೇ ಅವಳನ್ನು ವರಿಸಿರುವೆನು. ನೀನು ಚಿಂತಿಸಬೇಡ ! ರಾಜಂ -ಪುರುಷೋತ್ತಮಾ ! ಈಗ ನಾನು ನನ್ನ ಮಗಳವಿಷಯವಾಗಿ ಯೂ ಅಷ್ಟಾಗಿ ಚಿಂತಿಸುವವನಲ್ಲ. ನನ್ನ ಮನೆಗೆ ಅತಿಥಿಗಳಾಗಿ