ಪುಟ:ಶ್ರೀಮತಿ ಪರಿಣಯಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಂಕಂ, ೪೧ ಬಂದ ಈ ಮಹರ್ಷಿಗಳು, ನನ್ನನ್ನು ಅಪರಾಧಿಯೆಂದು ತಿಳಿದು ಕುಪಿತರಾಗಿರುವರು. ನೀನು ಅವರ ಸಂದೇಹವನ್ನು ನೀಗಿಸಬೇ ಕಲ್ಲದೆ, ಈ ಚಕ್ರವು ಇವರಿಗೆ ಯಾವ ಅಪಾಯವನ್ನೂ ಉಂಟು ಮಾಡದಂತೆ ರಕ್ಷಿಸಬೇಕು ವಿಷ್ಣು-ರಾಜೇಂದ್ರಾ ಇದೋ ! ಆ ಚಕ್ರವನ್ನು ಪಸಂಹರಿಸಿಕೊಂಡೆನು. ಇವರಿಗೆ ನಿಜವಾಗಿಯೂ ಅಪಾಯವನ್ನುಂಟುಮಾಡಬೇಕೆಂಬು ದು ನನ್ನ ಉದ್ದೇಶವಲ್ಲ ! ಕಾಮಿಗಳು ಅನೇಕವಿಧದಲ್ಲಿ ಹಾಸ್ಯಾ ಸದರಾಗುವರೆಂಬುದನ್ನು ಲೋಕಕ್ಕೆ ತೋರಿಸುವುದಕ್ಕಾಗಿ ನಾನು ಈ ಸಂವಿಧಾನಗಳನ್ನು ನಡೆಸಬೇಕಾಯಿತು. ಎಲೆ ನಾರದಪರ್ವತರೆ ! ನಿಮ್ಮಲ್ಲಿ ರಾಜನು ಯಾವವಿಧದಲ್ಲಿಯೂ ಅಪರಾಧಿಯಲ್ಲ. ನೀವಿಬ್ಬರೂ ಕಾಮಮೋಹಿತರಾಗಿ, ಒಬ್ಬರನ್ನೊ ಬ್ಬರು ವಂಚಿಸಬೇಕೆಂಬ ಬುದ್ಧಿಯಿಂದ ನನ್ನಲ್ಲಿ ಪ್ರಾರ್ಥಿಸಿದಿರಿ ! ನೀವು ನೀವು ಕೇಳಿದಂತೆ ನಾನು ವರವನ್ನು 'ಕೋಟ್ಯನು ಈಗನಿಮ್ಮಿ ಬ್ರರ ಮುಖವೂ ವಾನರಭಲ್ಲೂಕಗಳಂತೆ ವಿರೂಪವಾಗಿರುವ ದು ನಿಜವು. ಅದರಿಂದಲೇ ರಾಜನು ನಿಮ್ಮನ್ನು ನೋಡಿ ಭ ಮಿಸಬೇಕಾಯಿತು. ನಾರದಂ- ಬೆಜ್ವರದಿಂದ ) ಏನ ನನ್ನ ಮುಖವೂ ವಿರೂಪವಾ ಗಿರುವುದೆ ? ಪರ್ವತ-ನಾನು ಕಪಿಯಹಾಗೆ ಕಾಣುವೆನೆ ? ವಿಷ್ಣು -ಹೌದು ! ಪರ್ವತಂ ದೇವಾ ! ಹಾಗಿದ್ದರೆ ನಾವು ಈ ಅವಮಾನವನ್ನನುಭವಿಸಿ ಬದು ಕಿರುವುದಕ್ಕಿಂತಲೂ, ನಿನ್ನ ಚಕ್ರಜ್ಞಾಲೆಯಿಂದ ಆಗಲೇ ದಗ್ಧ ರಾಗಿದ್ದರೆ ಉತ್ತಮವಾಗಿದ್ದಿತು. ಇನ್ನು ಮೇಲೆ ನಾವು ಭೂಮಿ ಯಲ್ಲಿ ನಾಚಿಕೆಯಿಲ್ಲದೆ ತಲೆಯೆತ್ತಿ ತಿರುಗುವುದು ಹೇಗೆ: ಲೋಕ ದಲ್ಲಿ ನಮ್ಮ ಸ್ಥಿತಿಯು ಕೇವಲ ಹಾಸ್ಯಾಸ್ಪದವಾಯಿತು. ನಮ್ಮ ಶಾಪವೂ ಈ ರಾಜನಲ್ಲಿ ವಿಫಲವಾಯಿತು. ಇನ್ನು ನಮ್ಮನ್ನು ಯಾರು ಗೌರವಿಸುವರು ?