ಪುಟ:ಶ್ರೀಮತಿ ಪರಿಣಯಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨ ಶ್ರೀಮತೀಪರಿಣಯಂ ವಿಷ್ಣು -ಓ ಮಹರ್ಷಿಗಳೇ ! ಈಗಲೂ ನಿಮ್ಮ ಗೌರವಕ್ಕೂ, ತಪಶ್ಯಕಿ ಗೂ ಏನೂ ಕೊರತೆಯಿಲ್ಲ. ನನ್ನ ಮಾಯೆಯು ಎಂತವರಿಗಾದ ರೂ ದುರತಿಕ್ರಮವು, ನಿಮ್ಮ ಯತ್ನ ವೇನಿದೆ ? ಇನ್ನು ಮೇಲೆ ನೀವು ಮೊದಲಿನಂತೆಯೇ ಲೋಕಕ್ಕೆ ಜ್ಞಾನೋಪದೇಶಕರಾಗಿ ಸಂಚರಿಸಬಹುದು. ಈ ರಾಜನಲ್ಲಿ ನಿಮ್ಮ ಶಾಪವು ವಿಫಲವಾಯಿ ತೆಂದು ಹೇಳಿದಿರಲ್ಲವೆ ? ಒಂದುವೇಳೆ ನಾನಾದರೂ ನಿಮ್ಮ ಶಾಹವನ್ನು ಪ್ರತಿಗ್ರಹಿಸುವೆನೇ ಹೊರತು, ಭಕ್ತನಾದ ಈ ಅ೧ ಬರೀಷನ ಅಪಾಯವನ್ನು ಸಹಿಸಲಾರೆನು, ನಿಮ್ಮ ಗೌರವಕ್ಕೂ, ನಿಮ್ಮ ತಪಶ್ಯಕ್ತಿಗೂ ಇದರಿಂದ ಕುಂದಕವಿಲ್ಲವೆಂಬ ವಿಷಯದ ಸ್ತ್ರೀ ಲೋಕಕ್ಕೆ ನಂಬಿಕೆಯುಂಟಾಗುವಂತೆ ನಾನೇ ನಿಮ್ಮ ಶಾಪ ಕ್ಕೆ ಗುರಿಯಾಗುವೆನು. ನಾರದಂ-ನಮ್ಮ ಬುದ್ದಿಮೋಹಕ್ಕೂ ನಿನ್ನ ಮಾಯೆಯೇ ಕಾರಣವೆಂದು ಹೇಳಿದೆಯಲ್ಲವೆ ? ನೀನೇ ನಮಗೆ ಈ ಮೋಹವನ್ನು ಂಟು ಮಾಡಿ, ನಾವು ಕಾಮಿಸಿದ ಕನೈಯನ್ನ ಪಹರಿಸಿದುದರಿಂದ, ನೀನೂ ಈ ಶ್ರೀಮತಿಯೊಡನೆ ಮನುಷ್ಯನಾಗಿ ಹುಟ್ಟಿ, ಈ ನಿನ್ನ ಪತ್ನಿ ಯನ್ನು ಬೇರೊಬ್ಬರು ಅಪಹರಿಸಿಕೊಂಡುಹೋಗುವುದರಿಂದ ನೀನು ಕೆಲವು ಕಾಲದವರಿಗೆ ನಮ್ಮಂತೆ ವಿಯೋಗದುಃಖವನ್ನನುಭವಿಸ ಬೇಕು. ನೀನು ನಮ್ಮಲ್ಲಿ ವಾತ್ಸಲ್ಯವುಳ್ಳವನಾಗಿ, ಈ ಶಾಪವನ್ನು ಪ್ರತಿಗ್ರಹಿಸಿದರೆ, ಲೋಕಕ್ಕೆ ನಮ್ಮಲ್ಲಿ ಗೌರವಬುದ್ದಿಯು ತಪ್ಪ ಲಾರದು. ವಿಷ್ಣು ನಾರದಾ ! ಸಂತೋಷಪೂರಕವಾಗಿ ಪರಿಗ್ರಹಿಸುವೆನು. ನಾನು ಇದಕ್ಕೆ ಮೊದಲೇ ಲೋಕಕ್ಷೇಮಕ್ಕಾಗಿ ಮನುಷ್ಯರೂಪದಿಂದ ಅವತರಿಸಬೇಕೆಂದು ಸಂಕಲ್ಪಿಸಿದ್ದೆನು. ನಿನ್ನ ಶಾಪವು ಅದಕ್ಕೆ ಸಹಕಾರಿಯಾಗಲಿ! ಕೇಳು