ಪುಟ:ಶ್ರೀಮತಿ ಪರಿಣಯಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಂಕ೦. ಇದಲ್ಲದೆ ಈ ನಾಟಕವನ್ನು ರಚಿಸಿದ ಕವಿಯನ್ನು ಅನಾಮಧೇಯ ನೆಂದು ತಿಳಿಯಬೇಡ! ಸಂಸ್ಕೃತಕರ್ಣಾಟಕಗಳೆಂಬ ಉಭಯ ಭಾಷೆಗಳಲ್ಲಿಯೂ ಈತನ ಕವಿತಾಲಾಲಿತ್ಯವು ಸಕಲಜನಾಭಿನಂ ವ್ಯವೆಂಬುದನ್ನು ಈನಾಟಕ ಸಂವಿಧಾನದಿಂದಲೇ ತಿಳಿಯಬಹುದು. ಆದುದರಿಂದ ಈ ನಾಟಕವು ಸತ್ವವಿಧದಿಂದಲೂ ಈ ಸಭಾಸದ ರ ಮನಸ್ಸನ್ನು ಸಂತೋಷಗೊಳಿಸುವುದರಲ್ಲಿ ಸಂದೇಹವಿಲ್ಲ. ಮಿತ್ರನೆ! ಇನ್ನು ಈ ನಮ್ಮ ಸಲ್ಲಾಪವು ಸಾಕು ! ಹೊತ್ತು ಮೀರುವುದು, ನಾಟಕಾರಂಭಕ್ಕೆ ಮೊದಲು ಋತುವರ್ಣನವ ನ್ನು ಮಾಡಿ, ಗಾನರಸದಿಂದ ಸಭಿಕರ ಮನಸ್ಸನ್ನು ಸಂತೋಷ ಗೊಳಿಸುವುದು, ನಮ್ಮ ನಾಟಕಗಳಲ್ಲಿ ಪೂರಾಚಾರವಾದುದ ರಿಂದ, ಈಗಲೇ ನೀನು ಹೋಗಿ, ನನ್ನ ಗೃಹಿಣಿಯನ್ನು ಇಲ್ಲಿಗೆ ಕಳುಹಿಸು! ಅವಳು ತನ್ನ ಮಧುರಗಾನದಿಂದ ಈಸಭಾಸದರ ಮನಸ್ಸನ್ನು ಸಂತೋಷಗೊಳಿಸಲಿ ! ವಿದ-(ಕೋಪದಿಂದ ದುರದುರನೆ ನೋಡುತ್ತ) ಭರತಾಚಾಲ್ಯಾ ! ಇದಕ್ಕಾಗಿಯೇ ನನ್ನನ್ನು ಕರೆಸಿದೆಯೇನು? ಈ ಮಹಾಸಭೆಯ ಮುಂದೆ ನನ್ನ ಗೌರವವನ್ನು ಕಳೆಯುವುದಕ್ಕಾಗಿಯೇ ಇದು ವರೆಗೆ ನೀನು ನನ್ನನ್ನು ತಡೆದು ನಿಲ್ಲಿಸಿಕೊಂಡಂತಿದೆ ! ಸೂತ್ರ-ಆ‌ನೆ! ಅದೇನು ಹಾಗೆ ಹೇಳುವ? ಈಗ ನಿನ್ನ ಗೌರವಕ್ಕೆ ಬಂದ ಹಾನಿಯೇನು ? ವಿದೂ-(ಮೀಸೆಯನ್ನು ಮುರಿಯುತ್ತ ಇದೋ ! ಮುರಿಮೀಸೆಯನ್ನು ಹೊತ್ತ ಗಂಡಸು- ನಾನು-ನಿನ್ನ ಮುಂದೆ ಬೊಂಬೆಯಹಾಗೆ ನಿಂ ತಿರುವಾಗ, ಇಲ್ಲಿ ಹೇಡುವುದಕ್ಕಾಗಿ ನಿನ್ನ ಹೆಂಡತಿಯನ್ನು ಕರೆ ಯಬೇಕೆ ? ಹೆಂಗಸರಿಗಿಂತಲೂ ನಾನು ಕಡಿಮೆಯೆ ? ಸೂತ್ರ-(ಮಂದಹಾಸದೊಡನೆ) ಆಧ್ಯಾ ! ಹಾಗೆಣಿಸಬೇಡ ! ನೀನು ಮೊ ದಲೇ ನನ್ನೊಡನೆ ಸಂಗೀತಜ್ಞಾನವಿಲ್ಲದವನೆಂದು ಹೇಳಲಿಲ್ಲವೆ?