ಪುಟ:ಶ್ರೀಮತಿ ಪರಿಣಯಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ ವಿದೂ-ಭರತಾಚಾಯ್ಯಾ ! ತಿಳಿದುತಿಳಿದೂ ನನ್ನನ್ನು ಹೀಗೆ ಪ್ರಶ್ನೆ ಮಾಡಿ ಹಂಗಿಸುವೆಯಲ್ಲಾ ಈಗಲೇ ನಿನ್ನ ಶಿಷ್ಯನು ಬಂದು, ದೇವದಂ ಪತಿಗಳೆಲ್ಲರೂ ಅಲ್ಲಿಗೆ ಬಂದು ಸೇರುವುದಾಗಿ ಹೇಳಿರುವನು, ನೀ ನೂ ನಿನಗೆ ಮೊದಲೇ ನಿನ್ನ ಪತ್ನಿಯನ್ನು ಅಲ್ಲಿಗೆ ಕರೆದುಕೊಂಡು ಹೋಗುವಂತೆ ಹೇಳಿ ಕಳುಹಿಸಿರುವೆ ! ಹೀಗೆ ನೀವೆಲ್ಲರೂ ಅಲ್ಲಿ ನಿಮ್ಮ ನಿಮ್ಮ ಪತ್ನಿ ಯರೊಡಗೂಡಿ, ಆ ಮಹೋತ್ಸವಾನಂದ ವನ್ನನುಭವಿಸುವಾಗ, ನಿಮ್ಮ ನಡುವೆ ನಾನೊಬ್ಬನುಮಾತ್ರ, ಅನಾಥ ಬ್ರಹ್ಮಚಾರಿಯಾಗಿ ನಿಂತು, ನಿಮ್ಮ ನಿಮ್ಮ ಸಂಭ್ರಮ ಗಳನ್ನು ನೋಡುತ್ತ, ಪರದೇಶಿಯಂತೆ ಕಣ್ಣು ಕಣ್ಣು ಬಿಡುತ್ತಿ ರಬೇಕಲ್ಲವೆ? ಈಗಲೂ ನೀನು ಎಲ್ಲಿಯಾದರೂ ಒಂದು ಹೆಣ್ಣನ್ನು ತಂದು ನನಗೆ ಮದುವೆಮಾಡಿದಪಕ್ಷದಲ್ಲಿ, ನಾನೂ ಸಂತೋ ಷದಿಂದ ಅಲ್ಲಿಗೆ ಬಂದು ನಿಮ್ಮೊಡನೆ ಕುಣಿದಾಡುವೆನು. ಸೂತ್ರ-(ನಗುತ್ತ) ಓ ವೃದ್ದ ಬ್ರಾಹ್ಮಣಾ ! ಈ ವಯಸ್ಸಿನಲ್ಲಿಯೂ ನಿನಗೆ ಹೆಣ್ಣಿನಾಸೆಯೆ ? ನಿಮ್ಮಂತಹ ವೈದ್ಯರು ಈ ವಯಸ್ಸಿನಲ್ಲಿ ಮ ದುವೆಮಾಡಿಕೊಂಡು, ಯಾವ ಸುಖವನ್ನು ಪಡೆಯಬಲ್ಲರು? ವೃದ್ಧ ವಿವಾಹವಿಷಯವಾದ ಚಾಟೂಕ್ತಿಯನ್ನು ಕೇಳಿಲ್ಲವೆ ? ಕಂ || ಕರದೊಳ್ ಪಿಡಿದೊಲವಿಂದೆ ಪುರ | ಸ್ಮರಿಸುತೆ ಸುಸ್ಸೇಹದಿಂದೆ ಪೆರ್ಚಿಸಿದೊಡಮೇಂ | ಕರದೀಪಿಕೆಯಂತಿರೆ | ದರ ನಾರಿ ಪರಪ್ರಯೋಜನಾರ್ಧಮೆ ! ಸಲ್ಕುಂ || ಆದುದರಿಂದ ಆಬಾಲ್ಯಬ್ರಹ್ಮಚಾರಿಯಾಗಿದ್ದ ನಿನಗೆ, ಈಗ ಮದುವೆಯ ಚಿಂತೆಯೆ? ಬಾ! ಹೋಗುವೆವು. (ಎಂದು ಕೈಹಿಡಿದು ಕರೆದುಕೊಂಡು ಹೋಗುವನು.) ಇದು ಪ್ರಸ್ತಾವನೆ.