ಪುಟ:ಶ್ರೀಮತಿ ಪರಿಣಯಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶ್ರೀಮತೀಪರಿಣಯಂ ಸಭೆಯಲ್ಲಿ ಈ ಮನ್ಮಥನಿಗೆ ಅಗ್ರಪೂಜೆಯೆ ? ಕೇವಲಕಾಮಮ ದದಿಂದ ಉನ್ಮತ್ತರಾದ ಪ್ರಾಕೃತಜನರಂತೆ, ಸೀನು ನಿನ್ನ ಗೌರ ವವನ್ನೂ , ಪದವಿಯನ್ನೂ ಯೋಚಿಸದೆ, ಕಾಮುಕರನ್ನು ವಂ ಚಿಸತಕ್ಕ ಈ ಮನ್ಮಥನ ಆಟಕ್ಕೆ ಮರುಳಾಗಿ, ಅವನನ್ನು ಕರೆತಂ ದು ನಿನ್ನ ಅರ್ಧಾಸನದಲ್ಲಿ ಕುಳ್ಳಿರಿಸಿಕೊಳ್ಳುವೆಯಾ ? ಮಹೇಂ ದ್ರಾ ! ನೀನು ಈಗ ಕುಳಿತಿರತಕ್ಕೆ ಸ್ಥಾನವೆಂತದೆಂಬುದನ್ನು ಬ ಲೈಯಾ ? ಭೂಲೋಕದಲ್ಲಿ ಪರಮಧಾತ್ಮರೆನಿಸಿಕೊಂಡ ಸಗರಾದಿಚಕ್ರವರ್ತಿಗಳು, ಎಷ್ಟೋ ಕಷ್ಟಪಟ್ಟ ಈ ಪದವಿ ಯನ್ನು ಪಡೆಯಲಾರದೆ ವಿಫಲಪ್ರಯತ್ನ ರಾಗಿರುವರು. ಒಂದ ಲ್ಲ ! ಎರಡಲ್ಲ !! ಭೂರಿದಕ್ಷಿಣೆಗಳುಳ್ಳ ನೂರಶ್ವಮೇಧಯಾಗರ ಇನ್ನು ಸಂಪೂರ್ಣವಾಗಿ ಮುಗಿಸಿದವರಿಗಲ್ಲದೆ ಇದು ಲಭಿಸಲಾ ರದು ! ನಿನ್ನ ಅನೇಕ ಜನ್ಮಗಳ ಸುಕ್ಕತವಿಶೇಷದಿಂದ ನಿನಗೆ ಈ ಪದವಿಯ ಲಭಿಸಿರುವುದೆಂದು ತಿಳಿ : ಹೀಗಿರುವಾಗಲೂ ನೀನು ನಿನ್ನ ಯೋಗ್ಯತೆಯನ್ನು ತಿಳಿಯದೆ, ಈ ಮನ್ಮಥನಾಟಕ್ಕೆ ಮರುಳಾಗಿ, ಇವನಿಗೆ ಸಲ್ಲದ ಗೌರವವನ್ನು ತಂದಿಡುವೆಯಲ್ಲಾ! ಅದೂ ಹೋಗಲಿ ! ಇವನನ್ನು ನೀನು ಮಿತ್ರನೆಂದು ಕರೆದು ಆ ಲಿಂಗಿಸಿದೆಯಲ್ಲವೆ ? ಹಿಂದೆ ಈ ಮನ್ಮಥನ ದುರಣೆಯಿಂ ದಲೇ ನಿನಗೂ, ನಿನ್ನಂತೆ ಇಂದ್ರ ಪದವಿಯನ್ನೇರಿದ ನಹುಷನಿ ಗೂ ಸಂಭವಿಸಿದ ದುರವಸ್ಥೆಯನ್ನು ಆಗಲೇ ಮರೆತುಬಿಟ್ಟೆಯಾ ? ವೃ|| ನೆನೆ ! ನೀಂ ಗೌತಮಧರ ಪತ್ನಿ ಯೊಳಹಲ್ಯಾದೇವಿಯೊಳ್ ಮೋಹದಿಂ ! ಮುನಿಶಾಪಕ್ಕೆಡೆಯಾದುದಂ ನಹುಷನುಂ ನಿನ್ನಂತೆ ಪೌಲೋಮಿಯಂ || ಮನದೊಳ ಮೋಹಿಸಿ ಸರ್ಪರೂಪದಿನಧಃಪಾತಕ್ಕೆ ಪಕ್ಕಾದುದಂ ನೆನೆ ! ಸಂಕ್ರಂದನ! ನೀನನರ ವಿನಿತಕ್ಕಂ ಮೂಲನೀ ಮನ್ಮಥಂ || ಹೀಗೆ ನಿನಗೆ ಅ೦ತಶತ್ರುವಾಗಿ, ಮಹಾನರವನ್ನು ತಂದಿಟ್ಟ ಈ ಮನ್ಮಥನನ್ನು ಪರಮಾಪ್ತನೆಂದು ತಿಳಿದಿರುವೆಯಾ ? ದೇ ವೇಂದ್ರಾ! ಹೀಗೆ ಈ ಕಾಮನನ್ನೇ ಪರದೈವವೆಂದು ಭಾವಿ