ಪುಟ:ಶ್ರೀಮತಿ ಪರಿಣಯಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܘ ಶ್ರೀಮತೀಪರಿಣ್ಯಂ ಮನ್ಮಥಂ-(ನಾರದನನ್ನು ನೋಡಿ ಹಾಸ್ಯ ಪೂರೈಕವಾಗಿ) ಓ ನಾರದಮು ನೀಂದ್ರಾ ! ನಿಷ್ಕಾರಣವಾದ ಈ ನಿನ್ನ ಆಗ್ರಹವು, ಈ ಸಭೆಯ ಕ್ಲಿ ನನಗೆ ನಡೆದ ಸನ್ಮಾನವಿಷಯದಲ್ಲಿ ನಿನಗುಂಟಾದ ಅಸಹನ ವನ್ನು ಹೊರಪಡಿಸುವುದೇ ಹೊರತು ಬೇರೆಯಲ್ಲ ! ದೇವೇಂದ್ರ ನು ಈಗ ನನ್ನನ್ನು ಗೌರವಿಸಿದಮಾತ್ರಕ್ಕೆ ನಿನ್ನ ಗೌರವಕ್ಕೆ ಬಂದಹಾನಿಯೇನು ? ಯುಕ್ತಾಯುಕ್ತ ವಿವೇಚನ ಪರನಾದ ಈ ದೇವೇಂದ್ರನು, ಕಾಲೋಚಿತವಾಗಿಯೇ ನಡೆಸಿರುವನು, ಇಂ ತಹ ಸಭೆಗಳಲ್ಲಿ ನಡೆಯಬೇಕಾದ ಅಗ್ರಪೂಜೆಗೆ ನಾನೇ ಬಾಧ್ಯನು! ಇಲ್ಲಿ ನಡೆಯುತ್ತಿರುವ ಶಾರದೋತ್ಸವವು ಕೇವಲ ಭೋಗಪ್ಪ ಧಾನವಾದುದು! ರೂಪವತಿಯರಾದ ಈ ಅಪ್ಪರಸ್ತ್ರೀಯರು ! ಆನಂದಕರಗಳಾದ ಅವರ ಗಾನ ನರ್ತನಗಳು ! ಈ ಸುಗಂಧ 'ಸಾಮಗ್ರಿಗಳು : ಈ ಹಂಸತೂಲಿಕಾತಲ್ಪಗಳು! ಹೀಗೆಯೇ ಇಂದ್ರಿಯತೃಪ್ತಿಗಾಗಿ ಏರ್ಪಟ್ಟಿರುವ ಭೋಗಸಾಮಗ್ರಿಗ ಬೆಲ್ಲವೂ ನನ್ನ ಸೇನಾಪರಿಕರಗಳಲ್ಲವೆ ? ಇವಕ್ಕೆಲ್ಲಾ ನಾನೇ ನಿರಾಹಕನಾದುದರಿಂದ, ಇಲ್ಲಿ ನಡೆಯಬೇಕಾದ ಸನ್ಮಾ. ನವು 'ನನಗಲ್ಲದೆ ನಿನ್ನಂತಹ ಯೋಗಿಗಳಿಗಲ್ಲ ! ನನ್ನ ಗೌರವ ಸ್ಥಾನವೇ ಬೇರೆ ! ನಿಮ್ಮ ಗೌರವಸ್ಥಾನವೇ ಬೇರೆ ! ವೈದಿಕಗೊ ಹಿಗಳಲ್ಲಿಯೂ, ಯಜ್ಞಶಾಲೆಗಳಲ್ಲಿಯೂ, ಋಷ್ಯಾಶ್ರಮಗಳ ಕ್ಲಿಯೂ, ದೇವಾಲಯಗಳಲ್ಲಿಯೂ ನಿಮಗೆ ನಡೆಯಬೇಕಾದ ಗೌರವಗಳೆಲ್ಲವೂ ನಡೆಯುತ್ತಲೇ ಇರುವವು. ಅಂತಹ ಸ್ಥಳಗಳಲ್ಲಿ ನನ್ನನ್ನು ಕೇಳುವವರಾರು? ಸರೈಶ್ವರನಾದ ಆ ಪರಮಪುರುಷನ ಆಜ್ಞಾನುಸಾರವಾಗಿ ಒಬ್ಬೊಬ್ಬರು ಒಂದೊಂದು ಕಾರಕ್ಕೆ ನಿತ್ವಾಹಕರಾಗಿರುವರು. ವೃ| ಧರೆಯಂ ಪುಟ್ಟಿಸಿದಾತನೊರ್ವ್ವನವನಾಂತಿಪ್ಪಾಣತನೊರ್ವ್ವ೦ ಕರಂ | ಪೊರೆವಾತಂ ಪೆರರ್ನೆನಂತದನೆ ತಾಂಕೊಲ್ನಾತನೊರ್ವ್ವ೦ ಪರಾ!