ಪುಟ:ಶ್ರೀಮತಿ ಪರಿಣಯಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಂಕ೦. ೧ ವರಸಶ್ವೇಶ್ವರನಾಜ್ಞೆಯಿಂದವರವರ ಸ್ವಸ್ಕಾಧಿಕಾರಂಗಳಾಂ | ತಿರೆ ನೀಂ ಭಕ್ತಿ ವಿರಕ್ತಿನಿರ್ಣಯಕೆ ನಾಂ ಕಾಮಕ್ಕೆ ನಿರ್ವಾಹಕಂ || ನಾರದಂ-(ಸೋಪಹಾಸವಾಗಿ) ಮನ್ಮಥಾ ಸಾಕು ಸುಮ್ಮನಿರು ! ನಿನ್ನ ನಿರ್ವಾಹಶಕ್ತಿಯನ್ನು ನಾನು ಬಲ್ಲೆನು! ನಿನ್ನನ್ನು ನಂಬಿದವರಿಗೆ ನೀನೇ ಅಂತಶತ್ರುವಾಗಿ ಅವರಿಗೆ ಅನರವನ್ನು ತಂದಿಡುವೆಯೇ ಹೊರತು, ನಿನ್ನನ್ನು ನಂಬಿ ಶ್ರೇಯಸ್ಸನ್ನು ಪಡೆದವರೊಬ್ಬ ರೂ ಇಲ್ಲ ! ಮನ್ಮಥಂ-ನಾರದಮುಸೀಂದ್ರಾ ! ಈ ದೇವತೆಗಳು ಕೃತಜ್ಞತೆಯುಳ್ಳ ವರಾಗಿದ್ದರೆ, ಎಂದಿಗೂ ನನ್ನ ವಿಷಯದಲ್ಲಿ ಹಾಗೆಣಿಸಲಾರರು. ಹಿಂದೆ ಅಮೃತಮಧನಕಾಲದಲ್ಲಿ, ಮೋಹಿನೀರೂಪವನ್ನು ನೋಡಿ ದಾನವರು ಕಾಮಮೋಹಿತರಾಗದಿದ್ದ ಪಕ್ಷದಲ್ಲಿ, ಈ ದೇವ ತೆಗಳಿಗೆ ಅಮೃತವೆಲ್ಲಿ ಲಭಿಸುತಿತ್ತು ? ಇದಲ್ಲದೆ ಭಸ್ಮಾಸುರ ನೆಂಬ ಕ್ರೂರ ದಾನವನು,ಭಗವಂತನ ಮೋಹಿಸಿರೂಪಕ್ಕೆ ಮರು ಳಾಗದಿದ್ದ ಪಕ್ಷದಲ್ಲಿ, ರುದ್ರನು ಇದುವರೆಗೆ ಕ್ಷೇಮದಿಂದಿರುತಿದ್ದ ನೆ? ಇವೆಲ್ಲಕ್ಕೂ ನಾನಲ್ಲವೇ ಪ್ರೇರಕನು! ಹೀಗೆ ಅನೇಕಸಂದರ್ಭ ಗಳಲ್ಲಿ ನಾನು ಈ ದೇವತೆಗಳನ್ನು ಅಪಾಯದಿಂದ ತಪ್ಪಿಸಿರು ವಾಗ, ನನ್ನನ್ನು ಇಂದ್ರನಿಗೆ ಅಂತಶ್ಯತ್ರುವೆಂದು ಹೇಳುವೆಯ ಲ್ಲಾ ! ಇದು ಒಬ್ಬೊಬ್ಬರಿಗೆ ನಿಷ್ಕಾರಣದ್ವೇಷವನ್ನು ತಂದಿಡ ತಕ್ಕ ನಿನ್ನ ಕಲಹಪ್ರಿಯತ್ವವನ್ನು ತೋರಿಸುವುದೇ ಹೊರತು ಬೇರೆಯಲ್ಲ ! ಹೀಗೆ ನಾನು ಆಗಾಗ ನನ್ನ ಶಕ್ತಿಯನ್ನು ಪಯೋಗಿ ಸದಿದ್ದರೆ ದೇವತೆಗಳಿಗೆ ಕ್ಷೇಮವೆಲ್ಲಿಯದು? ನಾರದಂ-ಮನ್ಮಥಾ! ಆಹಾ! ನಿನ್ನ ಶಕ್ತಿಯನ್ನು ನಾನೇನೆಂದು ಹೇಳಲಿ ! ದುರ್ಬಲಹೃದಯರನ್ನು ಸ್ವಾಧೀನಪಡಿಸಿಕೊಳ್ಳುವುದರಲ್ಲಿ ನಿನ್ನ ಸಾಮ‌ವೇಹೊರತು ಜಿತೇಂದ್ರಿಯರಮುಂದೆ ನೀನು ತಲೆ ಯೆತ್ತುವುದೆಂದರೇನು ?