ಪುಟ:ಶ್ರೀಮತಿ ಪರಿಣಯಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಂಕಂ. ೧೪ ಕಾಮಪಾಶದಲ್ಲಿ ಸಿಕ್ಕಿ ಬಿಳಬೇಕಾದ ಸಂಭವವು ಬಂದರೂ ಬರ ಬಹುದು. ಹರಿಹರಬ್ರಹ್ಮಾದಿಗಳೂ ಅದನ್ನು ತಪ್ಪಿಸಿಕೊಳ್ಳ ಲಾರರೆಂದು ತಿಳಿ ! ನಾರಂ- ಆತಂತಕೋಪಾವೇಶದಿಂದ ) ಮನ್ಯಥಾ ! ಏನು ಹೇಳಿದೆ ! ನನ್ನ ನ್ಯೂ ನೀನು ಕಾಮಪಾಶದಲ್ಲಿ ಕಟ್ಟಡುವೆಯಾ ? ರಾಗ - ಹಿಂದುಸ್ಥಾನಿಕಾಪಿ - ರೂಪಕತಾಳೆ. ಏನನಾಡಿದೇ ! ಭೀ | ಥೀ | ಮೀನಕೇತನ || ಪ || ಮಾನವಿಲ್ಲದನ್ನ ಮುಂದೆ | ಮಾನಸಕ್ಕೆ ಬಂದ ತೆರದೊಳೇನ ನಾಡಿದೇ 11 ಅ || ಪರಮಶಿವನ ಫಾಲನೇತ್ರ 1 ದರಿಯೊಳು ನೀಂ ಶಲಭದಂತೆ ! ಲುರಿದು ಬೆಂದುದ ಮರೆತೆಯೇನು / ಮೆರೆಯದಿರು ವೃಧಾಭಿಮಾನವ || ೧ !1 ಪದುಮನಾಭನ ಪಾದವೆನ್ನ | ಹೃದಯಲ್ಲಿ ನೆಲಸಿರಲು | ಮದನ! ನಿನ್ನ ಬರಿಯಬಾಯ | ಬೆದರಿಕೆಗಂಜುವೆನೆ ನಾನೆ || - ಮಧಾ ! ಇನ್ನು ನಿನ್ನೊಡನೆ ಉತ್ತರಪ್ರತ್ಯುತ್ತರಗಳಿಂದೇ ನು ? ಇಂದ್ರನಕಡೆಗೆ ತಿರುಗಿ: ದೇವೇಂದಾ ! ನೀನು ಈ ಮನ್ಮ ಥನ ಅಹಂಭಾವದ ಮಾತುಗಳನ್ನು ಕೇಳಿಯೂ, ಬಾಯೆತ್ತದೆ ಸು ಮ್ಮನಿರುವುದನ್ನು ನೋಡಿದರೆ, ಜಗದ್ವಂಚಕನಾದ ಈತನ ಆಟ ಕ್ಕೆ ಮರುಳಾಗಿ, ಸೀನೂ ಅವನ ಅಭಿಪ್ರಾಯವನ್ನೇ ಅನುಮೋದಿ ಸುವಂತಿದೆ ? ಅಗಲಿ ! ಅವನ ಸಹವಾಸದಿಂದುಂಟಾಗಬಹುದಾ ದ ಫಲವನ್ನನುಭವಿಸು ! ನಾವು ಹೋಗಿಬರುವೆವು. ಇನ್ನು ಮೇಲೆ ಇಲ್ಲಿ ನಿಲ್ಲುವುದು ನಮಗೆ ಯೋಗ್ಯವಲ್ಲ ! ಹೊರಡುವನು.). ಇಂದ್ರ- ಭಯದಿಂದೆದ್ದು ಬಂದು ನಾರದನಮುಂದೆ ಬದ್ಯಾಂಜಲಿಯಾ ಗಿ) ಮುನೀಂದ್ರಾ ! ನನ್ನಲ್ಲಿ ಯಾವ ಅಪರಾಧವಿದ್ದರೂ ಕ್ಷಮಿಸ ಬೇಕು ! ನನ್ನನ್ನು ಇಷ್ಟೊಂದಾಗ್ರಹಕ್ಕೆ ಗುರಿಮಾಡಬಾರ ದು! ಈ ಉತ್ಸವಕಾಲದಲ್ಲಿ ಉತ್ಸಾಹದಿಂದ ನಡೆಸಿದ ಈ ಕಾರ್ ವು, ನಿನ್ನ ಮನಸ್ಸಿಗೆ ಇಷ್ಟು ಅಸಮಾಧಾನವನ್ನುಂಟುಮಾಡು ವುದೆಂದು ನನಗೆ ತೋರಲಿಲ್ಲ! ಮನ್ನಿ ಸಬೇಕು.