ಪುಟ:ಶ್ರೀಮತಿ ಪರಿಣಯಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಶ್ರೀಮತೀಪರಿಣಯಂ ನಾರದಂ-ದೇವೆಂದ್ರಾ ! ಐಶ್ವರಮದಮತ್ತರಾದ ನಿಮ್ಮಂತವರಿಗೆ, ಹೇಗೆ ತಾನೇ ಯುಕ್ತಾಯುಕ್ತ ವಿಚಾರವು ತೋರುವುದು.? ಕಂ11 ಧನಮುಂ ಪ್ರಭುತ್ಯಮುಂ ಯಾ ವನಮೆಂಬೀ ಫೆರಸನ್ನಿ ಪಾತತ್ರಯದೊಳ1 ಮನುಜಂ ಸತ್ಯೇಂದ್ರಿಯಬಂ ಧನದಿಂ ಪ್ರಜ್ಞಾವಿಹೀನನಪ್ಪದೆ ಸಹಜಂ!! ಹಾಗಿಲ್ಲದೆ ನೀನು ಯುಕ್ತಾಯುಕ್ತ ವಿವೇಚನಪರನಾಗಿದ್ದ ಪಕ್ಷ ದಲ್ಲಿ, ಹಿಂದೆ ದೂರ್ವಾಸಮಹರ್ಷಿಯನ್ನು ಅನಾದರಿಸಿ, ರಾಜ್ಯ ಭ್ರಷ್ಟನಾಗುತಿದ್ದೆಯಾ? ಆ ಅನರ ಕ್ಯೂ ನಿನ್ನ ಐಶ್ವಯ್ಯಮದವೇ ಕಾರಣವೆಂದು ತಿಳಿ ! ದೇವೇಂದ್ರಾ ! ಹೋದುದು ಹೋಗಲಿ! ಈಗಲೂ ನಿನಗೊಂದು ತತ್ವವನ್ನು ಹೇಳುವೆನು! ಇನ್ನು ಮೇಲಾ ದರೂ ನೀನು ಅದನ್ನು ಚೆನ್ನಾಗಿ ನೆನಪಿನಲ್ಲಿಟ್ಟು, ವಿವೇಕಿ ಯಾಗಿರು!ನಿನ್ನ ಪದವಿಗಾಗಿ ನೀನು ಗರೂಪಡಬಾರದು!ಇದನ್ನೇ ಒಂದು ದೊಡ್ಡ ಪುರುಷಾಧ್ಯವೆಂದೆಣಿಸಬೇಡ ! ಪುರುಷಾರ ತತ್ವ ವನ್ನು ತಿಳಿದವರು, ಈ ನಿನ್ನ ಪದವಿಯನ್ನಾಗಲಿ, ಇದಕ್ಕಿಂತ ಲೂ ಮೇಲಾದ ಬ್ರಹ್ಮಪದವಿಯನ್ನಾಗಲಿ, ಕೇವಲ ತುಚ್ಛವೆಂ ದೇ ಭಾವಿಸುವರೇ ಹೊರತು, ಸ್ವಲ್ಪ ಮಾತ್ರವೂ ಗೌರವಿಸ ಲಾರರು. ದೇವೇಂದ್ರಾ ! ಇವೆಲ್ಲವೂ ಅಶಾಶ್ವತಗಳು! ಶಾಶ್ವತ ಸುಖಹೇತುವಾದ ಮೋಕ್ಷಮಾರ್ಗಕ್ಕೂ ಪ್ರತಿಬಂಧಕಗಳು! ಆದುದರಿಂದ ಈ ಅಲ್ಪಕಾಲಸುಖಕ್ಕಾಗಿ ನೀನು ಅಹಂಕಾರ ಪಟ್ಟು,ಸೈಛಾಚಾರಿಯಾಗಿ ನಡೆಯಬಾರದು, ಭೂಲೋಕದಲ್ಲಿ ಐಶ್ವಠ್ಯದಲ್ಲಿಯೂ, ಭೋಗಸಮೃದ್ಧಿಯಲ್ಲಿಯೂ ನಿನ್ನನ್ನು ಮೀ ರಿಸಿದವರೆಷ್ಟೋ ಮಂದಿಯುಂಟು ! ಈಗ ಭೂಲೋಕದಲ್ಲಿ ಏಕ ಚೈತ್ರಾಧಿಪತ್ಯದಿಂದ ರಾಜ್ಯವನ್ನಾಳುತ್ತಿರುವ ಅಂಬರೀಷರಾಜ ನ ಪ್ರಭಾವವನ್ನು ನೀನೂ ಕೇಳಿಬಲ್ಲೆಯನ್ನೈ ? ಸಾಕ್ಷಾದ್ವಿಷ್ಣು ಚಕ್ರವೇ ಅವನ ಹಸ್ತಗತವಾಗಿರುವುದು! ನಿನಗಿಂತಲೂ ಅವನು