ಪುಟ:ಶ್ರೀಮತಿ ಪರಿಣಯಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

<•+ ದ್ವಿ ತಿ ಯಾ೦ಕ ೦. ++ ಆಸ್ಥಾನ: ಅಮರಾವತಿಯ ಪುರವೀಥಿ. (ಪಕ್ವತಮುನಿಯು ಪ್ರವೇಶಿಸುವನು.) ಪಕ್ವತಂ-(ಆಕಾಶವನ್ನು ನೋಡಿ) ಅಹಾ ! ಕಾಲಮಹಿಮೆಯಿಂದ ಪೂ ರ್ಣಚಂದ್ರನು ಎಷ್ಟುಮನೋಹರನಾಗಿ ಪ್ರಕಾಶಿಸುತ್ತಿರುವನು! ನಿಷ್ಕಲ್ಮಷವಾದ ಮತ್ತು ಶಾಂತವಾದ ತನ್ನ ಕಾಂತಿಯಿಂದ ಈ ಗಿನ ಚಂದ್ರನು, ತಮೋಗುಣವನ್ನು ನಿಗ್ರಹಿಸಿ, ಕೇವಲ ಸತ್ವ ನಿಷ್ಠನಾದ ಯೋಗಿಯಂತೆ ತೋರುತ್ತಿರುವನು. `ಕಂ!! ಶರದಭ್ರಸರಿತ್ತಟದೊಳಕೆ | ಪರಿಶುದ್ಧಾಂಬರಪರೀತನಿಜಮೂರ್ತಿ ನಿಶಾ | ಕರಮುನಿ ಜಪನಿಷ್ಠನವೋಲ | ಮೆರೆವಂ ಕರವಿಧೃತತಾರಕಾಕ್ಷಾವಳಿಯಿಂ || ಇದಲ್ಲದೆ ಈಗಿನ ಶರತ್ಕಾಲವು,ಕಾಮಿಗಳ ಮನಸ್ಸಿಗೆ ಕಾಮೋದೀ ಪನವನ್ನುಂಟುಮಾಡುತ್ತಿದ್ದರೂ, ಲೋಕಕ್ಕೆ ಹಿಂದುವಿಧವಾ ದ ವಿವೇಕವನ್ನು ಬೋಧಿಸುವಂತಿರುವುದು: ಏಕೆಂದರೆ, ಇದು ವರೆಗೆ ಮೇಫುತವಾಗಿ ಕಾಂತಿಗುಂದಿದ್ದ ಸೂರಚಂದ್ರಾ ದಿಗ್ರಹಗಳು, ಈಗ ಆಪೂತ್ವವಾದ ಕಾಂತಿವಿಶೇಷದಿಂದ ಶೋಭಿ ಸುತ್ತಿರುವುದನ್ನು ನೋಡಿದರೆ, ಮನುಷ್ಯನು ಕಾಲವಶದಿಂದ ತಮೋಗುಣದಲ್ಲಿ ಬಿದ್ದು ತೇಜೋಹಾನಿಯನ್ನು ಹೊಂದಿದರೂ, ತಿರುಗಿ ಸನ್ಮಾರ್ಗಪ್ರವರ್ತನೆಯಿಂದ, ತನ್ನ ಸಹಜವಾದ ತೇಜ ಸ್ಸನ್ನು ಹೊರಪಡಿಸಬಹುದೆಂಬುದಕ್ಕೆ ಈ ಕಾಲಸ್ಥಿತಿಯೇ ನಿದ ರ್ಶನವಾಗಿರುವುದು, ಹೇಗೆಂದರೆ.