ಪುಟ:ಶ್ರೀಮತಿ ಪರಿಣಯಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾ೦ಕಂ. (Ap ವೃ! ಸೇವಿಸಿ ಮೀನಮೇಷವೃಷಭಾದಿಗಳಂ ಕ್ರಮದಿಂದ ಭಾನು ದು | ರ್ಭಾವದಿನೈದಿ ಕನ್ನೆಯೊಡಗೂಡಲೋಡಂ ಕಿಡೆ ತನ್ನ ತೇಜಮಿ ನ್ಯಾವುದುಪಾಯಮೆಂದು ತುಲೆಯಂ ಜನರಂಜನೆಗೇರಿ ತೇಜಮಂ 1 ಭೂವಲಯಕ್ಕೆ ಬೀರಿದನೆನಲ ವಿಧಿಯೋಗಮನಾರೊ ಮೀರುವರ1” » ಎಂತಹ ತೇಜಸ್ವಿಗಳಾದರೂ, ಕಾಲವಶದಿಂದ ಭಗವನ್ನಾ ಯೆ ಯಲ್ಲಿ ಕಟ್ಟುಬಿದ್ದು, ಬುದ್ದಿ ಮೋಹಕ್ಕೊಳಗಾಗಿ ತೇಜೋಹಾನಿ ಯನ್ನು ಹೊಂದಬೇಕಾಗುವುದೆಂದೂ ಇದರಿಂದ ಸ್ಪಷ್ಟವಾಗು ವುದು ! ಹೋಗಲಿ ! ಈ ವಿಚಾರಗಳಿಂದೇನು ? ನನ್ನ ಪ್ರಿಯ ಸುಹೃತ್ಕಾದ ನಾರದಮಹರ್ಷಿಯನ್ನು ಕಂಡು ಬಹಳ ಹೊತ್ತಾ ಯಿತು. ಅವನನ್ನು ನೋಡಿ ಬರುವೆನು. (ಮುಂದೆ ಹೋಗಿ) ಆಹಾ! ಇದೇನಿದು ! ಈ ಪುರವೀಥಿಗಳೆಲ್ಲವೂ ಜನಸಂಚಾರವಿಲ್ಲದೆ ನಿಶ್ಯಬ್ಬ ವಾಗಿರಲು ಕಾರಣವೇನು? (ಎಂದು ಯೋಚಿಸಿ) ಓಹೋ ! ತಿಳಿ' ಯಿತು! ಸುರನಾಥನಾದ ಮಹೇಂದ್ರನು, ಈಗಿನ ಶಾರದೋ ತೃವವನ್ನು ಅತಿವೈಭವದಿಂದ ನಡೆಸುವುದಾಗಿ ಕೇಳಿದ್ದೇನು. ಇಲ್ಲಿನ ಪುರವಾಸಿಗಳೆಲ್ಲರೂ ಆ ಮಹೋತ್ಸವವೈಭವವನ್ನು ನೋ ಡುವುದಕ್ಕಾಗಿ, ಇಂದ್ರಸಭೆಯಲ್ಲಿ ನೆರೆದಿರಬಹುದೆಂದು ತೋರುವು ದು, ನನ್ನ ಮಿತ್ರನಾದ ನಾರದನೂ ಈಗ ಅಲ್ಲಿಗೇ ಹೋಗಿರಬಹು ದು, ನಾನೂ ಅಲ್ಲಿಗೆ ಹೋಗಿ ನೋಡುವೆನು. (ಮುಂದೆ ಹೋಗಿ ತೆರೆಯಕಡೆಗೆ ನೋಡಿ) ಓಹೋ ! ಇದೇನು? ಯಾರೋ ಇಬ್ಬರು ಅಪ್ಪ ರಸೆಯರು ಇತ್ತಲಾಗಿಯೇ ಬರುತ್ತಿರುವರಲ್ಲಾ ! ಅಂತಹ ಮಹೋತ್ಸವಸಂಭ್ರಮಗಳನ್ನು ,ಬಿಟ್ಟು, ಇವರುಮಾತ್ರ ಇಲ್ಲಿ ಬರಲು ಕಾರಣವೇನಿರಬಹುದು? ಇರಲಿ ! ಅವರನ್ನೇ ವಿಚಾರಿ ಸಿ ತಿಳಿಯುವೆನು. (ಅಪ್ಪರಸ್ತ್ರೀಯರಿಬ್ಬರು ಪ್ರವೇಶಿಸುವರು. ೧ನೆಯವಳು-ಸಖಿ ! ಸರಸವಾಗಿ ನಡೆಯುತ್ತಿದ್ದ ಕಾಠ್ಯವು, ಎಷ್ಟು ವಿರಸ ವಾಗಿ ಪರಿಣಮಿಸಿತು ನೋಡು !