ಪುಟ:ಶ್ರೀಮತಿ ಪರಿಣಯಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ಶ್ರೀಮತೀಪರಿಣಯಂ ೨-ನೆಯವಳು-ಹೌದು ! ಮಾಡುವುದೇನು ? ನಮ್ಮ ಉತ್ಸಾಹವೆಲ್ಲವೂ ಭ ಗ್ರವಾಯಿತು! ನನ್ನ ನರ್ತನಕ್ಕೆ ಅವಕಾಶವೇ ಸಿಕ್ಕದೆಹೋಯಿತು. ೧ ನೆಯವಳು:- ಹೌದು! ನಾನೂ ನನ್ನ ಅಭಿನಯಚಾತುರವನ್ನು ತೋ ಸಬೇಕೆಂದು ಬಹಳ ಆಸೆಯಿಂದಿದ್ದೇನು, ಅದೂ ತಪ್ಪಿ ಹೋಯಿತು. ೩ನೆಯವಳು-ಮುಖ್ಯವಾಗಿ ನಮ್ಮ ದೇವೇಂದ್ರನದೇ ತಪ್ಪ' ಭೋಗಪ್ಪ ಧಾನವಾದ ಇಂತಹ ಉತ್ಸವಕಾಲಗಳಲ್ಲಿ, ಶ್ರಂಗಾರದ ಗಂಧವ ವೈ ಅರಿಯದ ವೈದಿಕರನ್ನು ತಂದು ಮುಂದೆ ಕುಳ್ಳಿರಿಸಿದರೆ ಅದು ಸರಿಯಾಗಿ ನಡೆಯುವುದೆ ? ೧-ನೆಯವಳು--ನಿಜ ! ವೈದಿಕರನ್ನು ಅಲ್ಲಿಗೆ ಸೇರಿಸಬಾರದಾಗಿತ್ತು! ಅದರಲ್ಲಿ ಯೂ ನಾರವನು ಬಂದಮೇಲೆ ಹೇಳಬೇಕಾದುದೇನು ? ಸ್ವತಂ(ಮುಂದೆಹೋಗಿಓ ಅಪ್ಪರಸಿಯರೆ? ಇದೇನು? ಇಂದ್ರಸಭೆಯಲ್ಲಿ ಮಹೋತ್ಸವವು ನಡೆಯುತ್ತಿರುವಾಗ, ನೀವುಮಾತ್ರ ಇಲ್ಲಿಬರಲು ಕಾರಣವೇನು? ಅಪ್ಪರಸಿಯರಿಬ್ಬರೂ ಪರತನನ್ನು ನೋಡಿ ಭಯ ಸಂಭ್ರಮಗಳಿಂದ ಹಿಂದೆ ನಿಲ್ಲುವು.) ೧ನೆಯವಳು-ಮರೆಯಲ್ಲಿ ಸಖಿ! ಆನಾರದನಿಗೆ ಪ್ರಿಯಮಿತ್ರನಾದ ಪಕ್ವತ ಮಹರ್ಷಿಯು ಬಂದನಲ್ಲಾ! ಇನ್ನೇನುಗತಿ ! »ನೆಯವಳುಅಯ್ಯೋ ! ನಾವು ಹೇಳಿದ ಮಾತುಗಳೇನಾದರೂ ಅವನ ಕಿವಿಗೆ ಬಿದ್ದಿರಬಹುದೆ ? ಪಕ್ವತಂ-ಓ ಸ್ತ್ರೀಯರೆ ! ಏಕೆ ಸುಮ್ಮನಿರುವಿರಿ ! ಏನಿದ್ದರೂ ನಿರ್ಭಯ ವಾಗಿ ತಿಳಿಸಿರಿ ! ನೀವು ಆ ಉತ್ಸವವನ್ನು ಬಿಟ್ಟು ಇಲ್ಲಿ ಬರುವು ದಕ್ಕೆ ಕಾರಣವೇನು ? ೧ನೆಯವಳು-(ಮರೆಯಲ್ಲಿ) ಸಖಿ ! ಇವನು ನಮ್ಮನ್ನು ಸುಮ್ಮನೆ ಬಿಡಲಾ ರನು! ಇದ್ದ ಸಂಗತಿಯನ್ನು ತಿಳಿಸಿಬಿಡು ! ಆದುದಾಗಲಿ! -ನೆಯವಳು-ಅಯ್ಯೋ ! ಸರಿ! ಸರಿ ! ನಾನೊಲ್ಲೆನಮ್ಮ ! ನೀನೇ ಹೇಳು !