ಪುಟ:ಶ್ರೀಮತಿ ಪರಿಣಯಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಸರಿಣಯಂ ಕರುಣಾ | ಭರಣಾ | ಸುರಗಣಶರಣಾ। ವರಮುನಿಸನ್ನುತ | ದಿವ್ಯಚರಣಾ || ದೇವ|| || ೧ || ನವನೀlರದನೀ 1 ಲಶುಭಾವಯವಾ | ಭವ ಭಯ ಹರ ಪರ 1 ವಾಸುದೇವಾllದೇವ|| 11 ೨ | (ರಾಜನು ಆಸನದಲ್ಲಿ ಕುಳಿತಮೇಲೆ ಎಲ್ಲರೂ ಕುಳ್ಳಿರುವರು.) ರಾಜಂಎಲೈ ಮಂತ್ರಿ ಶ್ರೇಷ್ಠರೆ ! ಕ್ಷಾಮಡಾಮರಾದಿಬಾಧೆಗಳಿಲ್ಲದೆ ನಮ್ಮ ದೇಶವೆಲ್ಲವೂ ಸುಭಿಕ್ಷವಾಗಿರುವುದಷ್ಟೆ? ನಮ್ಮ ಪ್ರಜೆಗಳೆ ಲ್ಲರೂ ಕ್ಷೇಮದಿಂದಿರುವರಷ್ಟೆ? ಮಂತ್ರಿ-ರಾಜೇಂದ್ರಾ! ಧರ ಮೂರ್ತಿಯಾದ ನೀನು ರಕ್ಷಕನಾಗಿರುವಾಗ, ದೇಶಕ್ಷೇಮಕ್ಕೆ ಯಾವವಿಧದಲ್ಲಿ ಕೊರತೆಯುಂಟು ? ರಾಜಂ-ಓ ಸೇನಾಪತೀ ! ನಮ್ಮ ಸೇನಾಪರಿಕರಗಳೆಲ್ಲವೂ, ದೇಶದಲ್ಲಿ ಶತ್ರು ಚೌರಾದಿಬಾಧೆಗಳಿಗೆ ಅವಕಾಶಕೊಡದಂತೆ ಪ್ರಜೆಗಳ ಕ್ಷೇಮ ಚಿಂತೆಯಲ್ಲಿ ಎಚ್ಚರದಿಂದಿರುವುವಷ್ಟೆ ? ಸೇನಾಪತಿ-ರಾಜೇಂದ್ರಾ! ಅದಕ್ಕೆ ತಡೆಯೇನು ? ನಿನ್ನ ಉದ್ದೇಶದಂತೆ ನಮ್ಮ ಸೇನೆಗಳೆಲ್ಲವೂ ಪ್ರಜಾಕ್ಷೇಮದಲ್ಲಿಯೇ ನಿರತವಾಗಿರುವುವು. ಆಧವಾ ಮಹಾತ್ಮನಾದ ನೀನು ರಕ್ಷಕನಾಗಿರುವಾಗ ಈ ಸೈನ್ಯ ಗಳಿಂದೇನು ? ಕo! ನಿನ್ನಯ ತೇಜೋಬಲಮೇ || ತಾನ್ನೀಗಿಪದಿಳೆಗನಿಷ್ಟ್ರದೋಷಮನೆಲ್ಲಂ | ನಿನ್ನ ಮನಸ್ಸಂಕಲ್ಪ ಮೆ! ಮುನ್ನೆ ರಪುಗುಮಖಿಲಜನದಭೀಷ್ಕಾರಗಳಂ | ಆದುದರಿಂದ ನಮ್ಮಲ್ಲಿರುವ ಸೈನ್ಯದುರ್ಗಾದಿಗಳೆಲ್ಲವೂ, ನಿನಗೆ ನೆಪಮಾತ್ರದ 'ರಾಜಚಿಹ್ನಗಳಾಗಿರುವುವೇಹೊರತು, ಅವುಗಳಿಂ ದ ಸಾಧಿಸಬೇಕಾದ ಕಾವ್ಯಗಳೇನೂ ಇಲ್ಲ! ರಾಜಂ- ಎಲೈ ಮಂತ್ರಿಸೇನಾಪತಿಗಳಿರಾ ! ಪ್ರಜಾಕ್ಷೇಮಚಿಂತೆಯಲ್ಲಿ ನೀವೆಲ್ಲರೂ ನನಗೆ ಸಹಾಯಕರಾಗಿರುವಾಗ, ಯಾವವಿಧದಲ್ಲಿ