ಪುಟ:ಶ್ರೀಮತಿ ಪರಿಣಯಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾ೦ಕಂ. ೨೭ ಹರಿಪೂಜೆಯೇ ವ್ರತಾವಳಿ | ಹರಿಸೇವೆಯೆ ಯಜ್ಞವೆಂದು ಭಾವಿಪದನಿಬರ್ || ಆದರೆ ಯಜ್ಞಯಾಗಾದಿಕರಗಳಿಗಿಂತಲೂ ಈ ಭಕ್ತಿಯೋಗ ವನ್ನು ಸುಲಭವಾಗಿ ಸಾಧಿಸಬಹುದಾದರೂ, ದೃಢಮನಸ್ಸಿಲ್ಲದ ವರಿಗೆ ಇದು ಸಿದ್ದಿಸಲಾರದು. ರಾಗ - ಆರಬಿ - ಆದಿತಾಳ. 4“ಸಾಮಾನ ವ ಶಿ. ] ಹರಿಸೇವೆ ! ಪಾಮರಮನುಜಗೆ | ಸಾ || ಸ || ನೇಮನಿಷ್ಟೆ ಬಿಡ| ದಂಧಲನುದಿನ 1 ಸಾಮಜವರದನ 1 ಪ್ರೇಮದಿ ಭಜಿಪುದುItell ಅಂತರಂಗಮಲವೆಲ್ಲವನಳಿದು 1 ಸಂತತಮನದಲಿ ಶ್ರೀ | ಕಾಂತನ ಚರಿತೆಯ | ಕೇಳುತ ನಲಿದು 1 ಸಂತಸವನು ತಳೆದು | ಸಂತರ ಸಂಗದಿ| ಸಂತತವಿದು ನಿ | ರಂತರ ಹರಿಯನು ಚಿಂತಿಸಬೇಕು||ಸಾ|| ಜ್ಞಾನಕರದಿಂ | ದ್ರಿಯಗಳ ನಿವ್ರಹಿಸಿ ಜ್ಞಾನವ ಸಂಗ್ರಹಿಸಿ ಹಾನಿವೃದ್ಧಿಗಳೆ | ವೆರಡನು ತಾ ಸಹಿಸಿ 1 ದೀನತ್ವ ವಹಿಸಿ | ಮಾನಾವಮಾನ ಸಮಾನಗಳೆಂದುನಿ!ದಾನದಿ ಹರಿಗುಣ ಧ್ಯಾನವಮಾಳ್ಳುದು!” ಈ ವಿಧಾನದಿಂದ ಹರಿಧ್ಯಾನಪರರಾಗಿದ್ದರೆಮಾತ್ರವೇ ಭಕ್ತಿ ಯು ಪರಿಪಕ್ವವಾಗುವುದು, ಮೊದಲು ಇವೆಲ್ಲಕ್ಕೂ ಸತ್ಸಹವಾ ಸವೇ ಮೂಲವು, ಅತಿಥಿಗಳಾಗಿ ಬಂದ ಹರಿಭಕ್ಟೋತ್ತಮರನ್ನು ಯಥೋಚಿತವಾಗಿ ಸತ್ಕರಿಸಿ, ಅವರ ಅನುಗ್ರಹಕ್ಕೆ ಪಾತ್ರರಾಗ ಬೇಕು, ದೇವರ್ಷಿಯಾದ ನಾರದನೂಕೂಡವಿಷ್ಣು ಭಕ್ತರ ಸ ಹವಾಸಬಲದಿಂದಲ್ಲವೇ ವೈಷ್ಟವಾಗ್ರಣಿಯೆನಿಸಿಕೊಂಡು ಲೋ ಕಪೂಜ್ಯನಾದನು! (ತೆರೆಯಲ್ಲಿ ಗಾನಧ್ವನಿ.) (ನಾರದಪರೈತರಿಬ್ಬರೂ ಹರಿಕೀರ್ತನೆಯೊಡನೆ ನರ್ತಿಸುತ್ತ ಬರುವರು.) ರಾಗೆ ತಾಳ, ನಾರಾಯಣಾ! ಭಕ್ತ ! ಪರಾಯಣಾ ! ಭಯನಿವಾರಣಾ 1 ಲೋಕಕಾರಣಾ || ಸುರವರೇಣ್ಯ ! ನತಶರಣ್ಯ : ಭುವನಮಾನ್ಯ ! ಭವಭಯತಾರಣಾ ||೧||