ಪುಟ:ಶ್ರೀಮತಿ ಪರಿಣಯಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಶ್ರೀಮತೀಪರಿಣಯ ಸರೋಜಸಂಭವ | ಪುರಾರಿಮುಖಸುರ | ಮರಾರ್ಚಿತಾಂಫಿಸ! ರೋರುಹಾ! ಖಲವಿದಾರ | ನಿಗಮೋದ್ಧಾರ 1 ಭಕ್ತ ಮಂದಾರ ! ವರಕರುಣಾಕರಾ ||೨|| ವಿನಾಶಿತಾಖಿಲ 1 ಫನಾಭಸಂಕಲ ! ಕೃಪಾಲವಾಲ ಸು ! ನಿರ್ಮಲಾ!! ಭವವಿನಾಶ | ಶುಭವಿಲಾಸ | ಜಯ ಪರೇಶ | ಪಂಕಜಲೋಚನಾ || ೩ || (ಸಭಾಸದರೆಲ್ಲರೂ ಇದಿರೆದ್ದು ನಿಲ್ಲುವರು.!ರಾಜನು ಆಸನದಿಂದ ಈ ಕೆಳಗಿಳಿದು ಬಂದು.) ರಾಜಂ-ಪೂಜ್ಯರಾದ ದೇವಮುನಿಗಳಿಗೆ ವಂದಿಸುವೆನು. ನಾರದ-ವಿಜಯೀಭವ ! ಪರ್ವತಂ-ಕಲ್ಯಾಣಮಸ್ತು ! ರಾಜಂ-(ಪೀಠವನ್ನು ತೋರಿಸಿ) ಪೂಜ್ಯರೆ! ಈ ಪೀಠಗಳನ್ನಲಂಕರಿಸಬೇಕು. (ಎಲ್ಲರೂ ಕುಳ್ಳಿರುವರು) ರಾಜಂ-ಮುನಿವರೆ ! ಮಹಾತ್ಮರಾದ ನಿಮ್ಮ ಪಾದಸ್ಪರ್ಶದಿಂದ ಈಗ ನನ್ನ ಗೃಹವು ಪಾವನವಾಯಿತು, ನಿಮ್ಮ ದರ್ಶನದಿಂದ ನಾನು ಕೃತರ್ಥನಾದೆನು, ಆದರೆ ಆಕಸ್ಮಿಕವಾದ ತಮ್ಮ ಆಗಮನಕ್ಕೆ ಕಾರಣವೇನೆಂದು ತಿಳಿಯಲು ನನ್ನ ಮನಸ್ಸು ಕುತೂಹಲಪಡುತ್ತಿ ರುವುದು ! ಮಹರ್ಷಿಗಳ ಗಲಿ, ಅವರವರ ವರ್ಣಾಶ್ರಮಥರಗಳಿಗಾಗಲಿ ವಿಫುತವೇನೂ ಇಲ್ಲವಷ್ಟೆ ? ಪರ್ವತಂ-ಕಂ|| "ನೃಪ ನೀಂ ಪಾಲಕನಾಗಿರೆ | ತಪಸ್ವಿಗಳ ತಪಕೆ ವಿಘ್ನು ಮೆತ್ತಣಿನಕ್ಕುಂ | ತಪನಂ ಪ್ರಜ್ವಲಿ ಸುತ್ತಿದೆ ವಿಪುಲಾಮಂಡಲದ ತಿಮಿರಮೆಂತುವಿಕುಂ ?” ನಾರದ-ರಾಜೇಂದ್ರಾ ! ನಿನ್ನ ತೇಜಃಪ್ರಭಾವದಿಂದಲೇ ತಪೋವಿಘ್ನು ಗಳೆ ಲ್ಲವೂ ನಾಶವಾಗುವುವು. ಭಗವಂತನ ಸುದರ್ಶನಚಕ್ರವು ನಿನ್ನ ಹಸ್ತಗತವಾಗಿರುವುದರಿಂದ, ಚಕ್ರಪಾಣಿಯಾದ ಆ ಶ್ರೀಮನ್ನಾ ರಾಯಣನ ಸಾಕ್ಷಾದರ್ಶನದಂತೆ ನಿನ್ನ ದರ್ಶನವೇ ನಮ್ಮ ತಪಸ್ಸಿ ಗೆ ಫಲರೂಪವಾಗಿರುವುದು.