ಪುಟ:ಶ್ರೀಮತಿ ಪರಿಣಯಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಂಕ೦. ... ಪರ್ವತ-ಈ ನಿನ್ನ ಅದ್ಭುತಕೀರ್ತಿಯನ್ನು ಕೇಳಿಯೇ ನಾವೂ ನಿನ್ನ ದರ್ಶನ ದಿಂದ ಧನ್ಯರಾಗಬೇಕೆಂದು ಇಲ್ಲಿಗೆ ಬಂದವರೇಹೊರತು, ಬೇರೆ ಯಾವ ಕಾರೊದ್ದೇಶದಿಂದಲೂ ಬಂದವರಲ್ಲ. ರಾಜೇಂದ್ರಾ ! ನಿನಗೂ, ನಿನ್ನ ರಾಜ್ಯಾಂಗಗಳಿಗೂ, ನಿನ್ನ ಪ್ರಜೆಗಳಿಗೂ ಕುಶಲ ವಷ್ಟೆ ? ರಾಜಂ-ಪೂಜ್ಯರೆ ! ನಿಮ್ಮಂತಹ ಮಹಾತ್ಮರ ಪೂರ್ಣಾನುಗ್ರಹಕ್ಕೆ ಪಾ ತ್ರನಾಗಿರುವಾಗ, ನನ್ನ ಕ್ಷೇಮಕ್ಕೆ ಯಾವಭಾಗದಲ್ಲಿ ಕೊರತೆಯುಂ ಟ್ಯುಹಾಗಿದ್ದರೂ, ಭಗವನ್ನಾಯೆಯ ಪ್ರಭಾವವನ್ನೂ, ಪ್ರಕೃತಿ ಬದ್ದವಾದ ಈ ಪ್ರಪಂಚದ ಸ್ಥಿತಿಗತಿಗಳನ್ನೂ ಕರತಲಾಮಲಕ ದಂತೆ ಸಾಕ್ಷಾತ್ಕರಿಸಬಲ್ಲ ನಿಮಗೆ, ಈಗ ನಾನು ಹೊಸದಾಗಿ ತಿಳಿಸ ಬೇಕಾದುದೇನು ? ಲೋಕದಲ್ಲಿ ಸಂಸಾರಿಯಾದ ಮನುಷ್ಯನು, ಎಷ್ಟೆಭಾಗ್ಯಶಾಲಿಯಾಗಿರಲಿ! ಎಷ್ಟೇ ಬಲಪರಾಕ್ರಮವುಳ್ಳವ ನಾಗಿರಲಿ ! ಪತ್ರಕಳತ್ರಾಜಮೋಹಪಾಶದಲ್ಲಿ ಸಿಕ್ಕಿರುವವರೆಗೆ, ಅವನಿಗೆ ಕ್ಷೇಮವೆಂಬ ಮಾತೇ ಸುಳ್ಳು! ಅವನ ಮನಸ್ಸು ಅನವ ರತವೂ ಯಾವುದಾದರೂ ಒಂದು ಚಿಂತೆಯಿಂದ ಕುದಿಯುತ್ತ ಲೇ ಇರುವುದು. ನಾರದಂ-ಆಹಾ! ಏನಿದು ! ಭಗವದ್ಗುಣಾಮೃತಪಾನದಿಂದ ನಿತ್ಯಸಂ ತೋಷಿಯಾದ ನಿನಗೂ ಕುಟುಂಬಚಿಂತೆಯೆ ? ನಿನ್ನ ಚಿಂತೆಗೆ ಕಾ ರಣವೇನು ? ರಾಜಂ- ಪೂಜ್ಯರೆ ! ಕಂ 11 ಕ್ಷಿತಿಯೊಳಗೆಣಿಸ೮೯ 'ಕನ್ಯಾ ! ಪಿತೃತ್ವಮೇ ದುಃಖಹೇತು” ವೆಂಬೀನುಡಿ ನಿ! ಶ್ಚಿತವೆಂಬುದಕ್ಕೆ ನನ್ನೀ | ಸ್ಥಿತಿಯೆ ನಿದರ್ಶನವೆನಿತ್ಮದೀಗಳ ನಿಜದಿಂ || ಪೂಜ್ಯರೆ ! ನನಗೆ ಶ್ರೀಮತಿಯೆಂಬ ಕನೈಯೊಬ್ಬಳಿರುವಳು. ನನ್ನ ಪುಣ್ಯಫಲವೇ ಮೂರ್ತೀಭವಿಸಿದಂತೆ, ಸಕಲಗುಣಸಂಪನ್ನೆ ಯಾದ