ಪುಟ:ಶ್ರೀಮತಿ ಪರಿಣಯಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಶ್ರೀಮತೀಪರಿಣ್ಯಂ ಆ ಕನ್ಯಾಮಣಿಗೆ ವಿವಾಹಕಾಲವು ಅತಿಕ್ರಮಿಸುತ್ತ ಬಂದಿರು ವುದು, ದೇಶದೇಶಗಳನ್ನು ಹುಡುಕಿದರೂ ಅವಳ ರೂಪಗುಣಾದಿ ಗಳಿಗೆ ಅನುರೂಪನಾದ ವರನೊಬ್ಬನೂ ನಮ್ಮ ಕ್ಷತ್ರಿಯಕುಲ ದಲ್ಲಿ ಇದುವರೆಗೂ ಲಭಿಸಲಿಲ್ಲ! ಆಕೆಯ ವಿವಾಹವಿಷಯವಾದ ಚಿಂತೆಯು ನನ್ನನ್ನು ಬಹಳವಾಗಿ ಬಾಧಿಸುತ್ತಿರುವುದು, ಪ್ರತಿ ದಿನವೂ ದೇಶದೇಶಗಳಿಂದ ಅನೇಕರಾಜಕುಮಾರರ ಭಾವಚಿತ್ರ ಗಳನ್ನು ತರಿಸಿ ನೋಡುತ್ತಿರುವೆನು. ಇದುವರೆಗೆ ಯಾವುದೂ ನನ್ನ ಮನಸ್ಸಿಗೆ ಸಮರ್ಪಕವಾಗಲಿಲ್ಲ. (ಸುಂದರಕನೆಂಬ ರಾಯಭಾರಿಯು ಚಿತ್ರಪಟಗಳೊಡನೆ ಪ್ರವೇಶಿಸುವನು.) ಸುಂದರಕ-ಮಹಾರಾಜನಿಗೆ ವಿಜಯವಾಗಲಿ ! ರಾಜೇಂದ್ರಾ: ನಾನು ಸುತ್ತಿದ ದೇಶಗಳಲ್ಲಿ, ನನಗೆ ಉತ್ತಮವೆಂದು ತೋರಿದ ಈ ಭಾವಚಿತ್ರಗಳನ್ನು ತಂದಿರುವೆನು. ಇವುಗಳನ್ನು ಪರಾಮರ್ಶಿ ಸಬೇಕು. ರಾಗ ತಾಳ. ಲಾಲಿಸೈ ! ರಾಜವಂಶ | ಮಾಲಿ ಲೋಕಮಾನಿತ ಸೇಪ) ತೋಳಲಿ ದೇಶಂಗಳ | ತಂದೆನೀ ಚಿತ್ರಗಳ {) ಅ || ಮಗಧಭೂಮಿ | ಪಾಲನಿವ ! ನಗಣಿತಸ್‌ | ಭಾಗ್ಯದಿಂದ | ಜಗದಲ್ಲಿ ಸುವಿಖ್ಯಾತ | ಕೀರ್ತಿ ಸುಂದರಮೂರ್ತಿ || ೧ || ಇವನೆ ಕಾಂಭೋಜನು ರವಿಸಮಾನತೇಜನು ಭುವನವಿದಿತಪರಮವೈ । ಭವದಿ ರಾಜಿಸುವನು ||೨|| ಅಂಗಳಾ | ಕಾರನಿವ | ನಂಗಭೂಮಿಪತಿ ತನ್ನ | ತುಂಗವೀರದಿಂದ ವೈರಿ | ಭಂಗವನ್ನೆ ಗೈದವನು ||೩|| ರಾಜಂ - (ಭಾವಚಿತ್ರಗಳನ್ನು ನೋಡಿ ಬೇಸರದಿಂದ) ಸುಂದರಕಾ ! ನಿನ್ನ ಶ್ರಮವೂ ಸಫಲವಾಗುವಂತೆ ತೋರಲಿಲ್ಲ! ನೀನು ಹೇಳಿದಂತೆ ಈ ರಾಜಕುಮಾರರು ಅನೇಕ ವಿಷಯಗಳಲ್ಲಿ ಅನುರೂಪರಾಗಿದ್ದರೂ ಇವರ ಮುಖಲಕ್ಷಣಗಳಲ್ಲಿ ಲೋಪವು ಕಂಡು ಬರುವುದು, ಇನ್ನು