ಪುಟ:ಶ್ರೀಮತಿ ಪರಿಣಯಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ (ಕಂಚುಕಿಯು ಪ್ರವೇಶಿಸಿ) | ಕಂಚುಕಿ-ಮಹಾರಾಜನಿಗೆ ವಿಜಯವಾಗಲಿ ! ಶ್ರೀಮತೀಕುಮಾರಿಯು, ಉತ್ತಮಪತಿಪ್ರಾಪ್ತಿಗಾಗಿ, ನಮ್ಮ ಗೃಹೋದ್ಯಾನದಲ್ಲಿ ವರ ಲಕ್ಷ್ಮಿ ಪೂಜೆಯನ್ನು ನಡೆಸುತ್ತಿರುವಳು. ಆ ವ್ರತಸಮಾಪ್ತಿಕಾ ಲಕ್ಕೆ ಬ್ರಾಹ್ಮಣೋತ್ತಮರೊಡನೆ ಮಹಾರಾಜನೂ ಅಲ್ಲಿಗೆ ಬರ ಬೇಕೆಂದು ದೇವಿಯರು ಅಪೇಕ್ಷಿಸುತ್ತಿರುವರು. ರಾಜಂ (ಸಂತೋಷದಿಂದ) ಹಾಗಿದ್ದರೆ ನಾವು ಅವಶ್ಯವಾಗಿ ಅಲ್ಲಿಗೆ ಬರುವೆ ವೆಂದು ತಿಳಿಸು ಹೋಗು ! (ನಾರದಪರೈತರನ್ನು ನೋಡಿ) ಪೂ ಜ್ಯರೆ ! ತಾವೂ ಆ ಉತ್ಸವಕಾಲಕ್ಕೆ ಅಲ್ಲಿಗೆ ಬಂದು, ನನ್ನ ಮಗ ಳನ್ನು ಆಶೀರ್ವದಿಸಿ ಹೋಗಬೇಕು. ನಾರದಂ-ರಾಜೇಂದ್ರಾ ! ನಿನ್ನ ಇಷ್ಟದಂತೆಯೇ ಆಗಲಿ ! ರಾಜಂ-ಕಂಚುಕಿಯನ್ನು ಕುರಿತು ) ಜಯಂಧರಾ! ಮಹಾತ್ಮರಾದ ನಾರ ದಪರೈತರು ಬಂದಿರುವರೆಂಬ ಸಂಗತಿಯನ್ನು ದೇವಿಗೆ ಮುಂದಾಗಿ ತಿಳಿಸಿಬಂದು, ಸಕಾಲಕ್ಕೆ ಇವರನ್ನೂ ಅಲ್ಲಿಗೆ ಕರೆದುಕೊಂಡು ಹೋಗು ! ನಾನೂ ಶೀಘ್ರದಲ್ಲಿಯೇ ಬಂದು ಸೇರುವೆನು. ಕಂಚುಕಿ-ಆಪ್ಪಣೆ (ಹೋಗುವನು.) wwತೆರೆಯು ಬಿಳುವುದು, w ಇದು ದ್ವಿತೀಯಾಂಕವು.