ಪುಟ:ಶ್ರೀಮತಿ ಪರಿಣಯಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಂಕಂ, ಆಸ್ಥಾನ:-ಆರಮನೆಯ ಗೃಹೋದ್ಯಾನ (ನಿಯಮಸಿಷ್ಠಳಾದ ಶ್ರೀಮತಿಯು, ಮಂತ್ರಕಲಶದ ಮುಂದೆ ಧೂಪದೀಪಾದಿಪೂಜಾಸಾಮಗ್ರಿಗಳೊಡನೆ ನಿಂತಿರುವಳು. ರಾಜ ಪತ್ತಿ ಯು ಅವಳ ಪಕ್ಕದಲ್ಲಿರುವಳು, ಸುಮಂಗಲಿಯರೂ, ವೃದ್ಧ ತಾಪಸಿಯರೂ ನೆರೆದಿರುವರು.) ರಾಜಪತ್ನಿ -ಕುಮಾರೀ ! ಗಂಧಪುಷ್ಮಾದಿಗಳಿಂದ ಕಲಶವನ್ನು ಪೂಜಿಸಿ, - ಅಂಜಲಿಬಂದಪೂರಕವಾಗಿ ನಿನ್ನ ಇಷ್ಟಸಿದ್ಧಿಯನ್ನು ಪ್ರಾಸು! ಶ್ರೀಮತಿ-(ಪೂಜೆಯನ್ನು ಮುಗಿಸಿ ಕೈಮುಗಿದು ನಿಂತು ಪ್ರಾರ್ಥಿಸುವಳು.) ಶ್ರೀರಾಗ - ಆದಿ - ತಾಳ. ಪಾಲಿಸ್ | ಪಂಕಜನಾಭನ ರಾಣಿ ! ಪಾಲಿಸ್‌1ಗುಣಮಣಿ ಫಣಿವೇಣಿ! ಪಾಲಿಸೆನ್ನ ಪ | ಬ್ಯಾಲಯೆ ಸದಯೆ | ನೀಲವೇಣಿ ನವ | ಪಂಕಜಪಾಣಿ! ಬಾಲಚಂದ್ರನಿಭ | ಫಾಲೆ ಸುಶೀಲೆ | ಪಾಲಿಸೆನ್ನ ನಿಗ 1 ಮಾಗಮವಿನುತೆ | ೧ | ಇಂದೀವರಾಕ್ಷೀ ಶ್ರೀವರಲಕ್ಷ್ಮಿ ವಂದಾರುಜ | ನಾನಂದಕಟಾಕ್ಷಿ | ಕುಂದಕುಸುಮಕು | ಟ್ಯ ಲನಿಭರದನೆ { ಮಂದಹಾಸರುಚಿ | ಸುಂದರವದನೆ! ಮಂದರಾದ್ರಿಧರ | ಹೃದಯೋಲ್ಲಾ ಸಿನಿ / ವಂದಿಸಿ ನಿನ್ನನು(ಬೇಡುವೆ ಜನನಿ ಭಾಮಾಮಂ | ಡಲಮಣಿ ಮಂಜುಳ ವಾಣಿ | ಕಾಮಾರಿಕರಾರ್ಚಿತೆ ಕಲ್ಯಾಣಿ! ಸಾಮಜಗಾಮಿನಿ ( ಕಾಮಿತದಾಯಿನಿ | ಕಾಮಜನನಿ ಕಲಿ | ಕಲ್ಕ ಷನಾಶಿನಿ | ಕಾಮಿತಾರವಿತ್ತೆನ್ನನು ಕಾಯೆ | ಕೋಮಲಾಂಗಿ ಕರುಣಾಲಯೆ ತಾಯೆ!ed (ಶ್ರೀಮತಿಯು ಹೀಗೆ ಸ್ತೋತ್ರವನ್ನು ಮಾಡಿ ನಮಸ್ಕರಿಸುವಳು) (ಕಂಚುಕಿಯು ಪ್ರವೇಶಿಸುವನು.) ಕಂಚುಕಿದೇವಿ ! ಮಹಾರಾಜನು ಧಾಸನದಲ್ಲಿರುವನು! ದೇವರ್ಷಿಗಳಾ ದನಾರದಪರೈತರಿಬ್ಬರೂ,ರಾಜದರ್ಶನಾರವಾಗಿ ಬಂದಿರುವರು. ಅಲ್ಲಿನ ರಾಜಕಾರವು ಮುಗಿದಕೂಡಲೇ,ಮಹಾರಾಜನು ಬರುವ ನು, ಆಮಹರ್ಷಿಗಳನ್ನು ಮಾತ್ರ ಮಂದಾಗಿಯೇ ಇಲ್ಲಿಗೆ ಕಳುಹಿಸಿ ಕೊಡುವುದಕ್ಕಾಗಿ, ಇಲ್ಲಿನ ಸಮಯವನ್ನು ತಿಳಿದುಬರುವಂತೆ ಹೇಳಿಕಳುಹಿಸಿರುವನು.