ಪುಟ:ಶ್ರೀಮತಿ ಪರಿಣಯಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ve ತೃತೀಯಾಂಕ೦. ಕುಳ್ಳಿರಿಸಿ, ಅವನ ಕಂಠಕ್ಕೆ ಮಂದಾರಮಾಲಿಕೆಯನ್ನು ಹಾಕಿ, ಅಗ್ರಪೂಜೆಯನ್ನೂ ಮಾಡಿದನು. ರಾಜ೦-ಆಶ್ಚಯ್ಯದಿಂದ) ಏನು ? ದೇವೇಂದ್ರನು ಮನ್ಮಥನನ್ನು ತನ್ನ ಆ ರ್ಧಾಸನದಲ್ಲಿ ಕುಳ್ಳಿರಿಸಿದನೆ ? ಮಹಾತ್ಮರಾದ ನೀವೆಲ್ಲರೂ ನೆರೆ ದಿರುವಾಗ, ಅಗ್ರಪೂಜೆಯನ್ನು ಮಾಡಿದನೆ ? ವಿಷಯಸುಖದಲ್ಲಿ ಮುಳುಗಿ ಮೈ ಮರೆತಿರುವಾಗ, ವಿವೇಕಜ್ಞಾನವು ಕೆಡುವುದೆಂಬ ಮಾತು ನಿಜವೇ ! ಈ ಸಾಮ್ರಾಜ್ಯ ಪದವಿಯಲ್ಲಿ ನಾನಾಕ ಡೆಯಿಂದ ಇಂದ್ರಿಯಗಳನ್ನೆಳೆದು ಮನಸ್ಸನ್ನು ಕೆಡಿಸತಕ್ಕ ಭೋಗಸಾಮಗ್ರಿಗಳು ತುಂಬಿದರೂ, ತಮ್ಮಂತಹ ಮಹಾತ್ಮರ ಅನುಗ್ರಹದಿಂದಲೂ, ಭಗವತ್‌ಪೆಯಿಂದಲೂ, ನನ್ನ ಮನಸ್ಸು ಹೀಗೆ ಮೊಹಾಕುಲವಾಗದಿರಬೇಕೆಂಬುದೇ ನನ್ನ ಕೋರಿಕೆ ! ನಾರದಂ-ಲಜ್ಜೆಯಿಂದ ಸ್ವಗತಂ) ಆಯ್ಯೋ! ಈ ರಾಜನು ತನ್ನ ಮನಸ್ಸು ನಿಷ್ಕಲ್ಮಷವಾಗಿರುವುದಕ್ಕೆ, ನನ್ನ ಅನುಗ್ರಹವನ್ನು ಕಾರಣವಾಗಿ ಹೇಳುತ್ತಿರುವನು ಈಗ ನಾನೇ ಕಾಮಪರವಶನಾಗಿ ಕಳವಳಿಸು ತಿರುವೆನಲ್ಲಾ! ಪ್ರಕಾಶಂ) ರಾಜೇಂದ್ರಾ: ಅದರಮೇಲೆ ನನಗೆ ಅಲ್ಲಿ ನಿಲ್ಲುವುದಕ್ಕಿಷ್ಯವಿಲ್ಲದೆ, ಇಲ್ಲಿ ನಿನ್ನ ನ್ನು ನೋಡಿಹೋಗುವುದ ಈಾಗಿ ಬಂದೆನು ರಾಜಂ-ಇದು ನನ್ನ ಭಾಗ್ಯವಿಶೇಷವು ! (ಕಂಚುಕಿಯು ಪ್ರವೇಶಿಸುವನು.) ಕಂಚುಕಿ-.-ಮಹಾರಾಜನಿಗೆ ಜಯವಾಗಲಿ ! ವ್ರತಾನಂತರದಲ್ಲಿ ಶ್ರೀಮತೀ ಕುಮಾರಿಯನ್ನು, ಗೋಹದೇವತಾಸಾನ್ನಿಧ್ಯಕ್ಕೆ ಕರೆತರುವಂತೆ ಕುಲಗುರುಗಳಾದ ವಸಿಷ್ಠರ ಆಜ್ಞೆಯಾಗಿರುವುದು. ರಾಜಂ-(ಎದ್ದು ನಿಂತು) ಇದೋ ! ಈಗಲೇ ಬರುತ್ತಿರುವೆನೆಂದು ತಿಳಿಸು ಹೋಗು! ನಾರದನನ್ನು ನೋಡಿ) ಪೂಜ್ಯರೆ ! ಅನುಜ್ಞೆಯನ್ನು ಕೊಡಬೇಕು !