ಪುಟ:ಶ್ರೀಮತಿ ಪರಿಣಯಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಶ್ರೀಮತೀಹರಿಕಯಂ ನಾರದಂ(ಸಂತೋಷದಿಂದ ಸ್ವಗತಂ) ಆಹಾ ! ನಾನು ಇವರ ಕಣ್ಮರೆ ಯಾಗಿರುವುದಕ್ಕೆ ದೈವಾಧೀನದಿಂದ ಇದೊಂದು ನೆಪವು ಏರ್ಪ ಟೆತು ! ನಾನು ಈ ಕಸ್ಯೆಯನ್ನು ನೋಡುತ್ತ, ಇಲ್ಲಿಯೇ ಇರುತ್ತಿದ್ದರೆ, ಕಾಮಪರವಶನಾದ ನನ್ನ ಮನೋಭಿಪ್ರಾಯವು ಹೇಗಾದರೂ ಹೊರಬಿದ್ದು, ನನ್ನ ಸ್ಥಿತಿಯು ಕೇವಲಹಾ ಸ್ಯಾಸ್ಪದವಾಗುವುದು, ಸ್ವಲ್ಪ ಹೊತ್ತಿನವರೆಗೆ ವಿವಿಕ್ತವಾಗಿದ್ದ ಹೊರತು ಈ ವ್ಯಾಮೋಹವನ್ನು ತಪ್ಪಿಸುವುದು ಸಾಧ್ಯವಲ್ಲ. (ಪ್ರಕಾಶಂ) ರಾಜೇಂದ್ರಾ ! ವ್ರತಸಮಾಪ್ತಿಯಲ್ಲಿ ಗೃಹದೇವತಾ ನಮಸ್ಕಾರವು ಅವಶ್ಯವಾಗಿ ನಡೆಸಬೇಕಾದ ಕಾರವೇ ! ಇನ್ನು ನೀವು ಹೊರಡಿರಿ ! ರಾಜಂ-ತಾವೂ ಬಂದು ನಮ್ಮ ಗೃಹದಲ್ಲಿ ಆತಿಥ್ಯವನ್ನು ಸ್ವೀಕರಿಸಿ ಹೋ ಗಬೇಕು. ನಾರದಂ-ನಾನು ದೂರಪ್ರಯಾಣದಿಂದ ಬಹಳವಾಗಿ ಬಳಲಿರುವೆನು. ಸ್ವಲ್ಪ ಹೊತ್ತು ಇಲ್ಲಿಯೇ ವಿಶ್ರಮಿಸಿಕೊಂಡಿದ್ದು, ನನ್ನ ಮಿತ್ರ ನಾದ ಪರೂತನು ಬಂದಮೇಲೆ ನಾವಿಬ್ಬರೂ ಸೇರಿಯೇ ನಿನ್ನಲ್ಲಿಗೆ ಬರುವೆವು. ರಾಜಂ-ತಮ್ಮ ಇಷ್ಟದಂತೆಯೇ ಆಗಲಿ : ತಮ್ಮನ್ನು ಕರೆದುಕೊಂಡುಹೊ ಗುವುದಕ್ಕಾಗಿ,ನಾನೇ ಮತ್ತೊಮ್ಮೆ ಇಲ್ಲಿಗೆ ಬರುವೆನು.ಆದುವರೆಗೆ ತಾವುಇಲ್ಲಿ ಸುಖವಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಬಹುದು! ಕುಮಾರೀ ! ಬಾ ! ಹೋಗುವೆವು. (ನಾರದನೊಬ್ಬನುಹೊರತು ಉಳಿದವರೆಲ್ಲರೂ ಹೋಗುವರು.) ನಾರದಂ-ಅತ್ತಿತ್ತ ತೆರೆಯಕಡೆಗೆ ನೋಡಿ ನಿಟ್ಟುಸಿರನ್ನು ಬಿಟ್ಟು) ಆಹಾ! ಈಗಲೀಗ ಸ್ವಲ್ಪವಾದರೂ ಮನಸ್ಸಿಗೆ ನೆಮ್ಮದಿಯಾಯಿತು ! ಆ ರಾಜಕುಮಾರಿಯನ್ನು ನೋಡಿದುದು ಮೊದಲು, ನನ್ನ ಮನಸ್ಸು ಒಂದು ನೆಲೆಯಲ್ಲಿಲ್ಲದೆ ಕಳವಳಿಸುತ್ತಿರುವುದು ಈ ಕಾಮವಿಕಾರ ದಿಂದ ನನ್ನನ್ನೇ ನಾನು ಮರೆತುಹೋಗಿರುವೆನು, ಜನಸಂಪರ್ಕವೇ