ಪುಟ:ಶ್ರೀಮತಿ ಪರಿಣಯಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ತೃತೀಯಾಂಕ೦. ಇಲ್ಲದೆ ವಿವಿಕ್ತವಾದ ಸ್ಥಳದಲ್ಲಿದ್ದಾದರೂ, ಕಾಮಾಕುಲವಾದ ಈ ನನ್ನ ಮನಸ್ಸನ್ನು ಸರಿಯಾದ ಮಾರ್ಗಕ್ಕೆ ತಿರುಗಿಸುವ ಯ ತ್ರವನ್ನು ಮಾಡುವೆನು. (ಆಸನದಮೇಲೆ ಕುಳಿತು, ಸ್ವಲ್ಪಹೊತ್ತಿ ನವರೆಗೆ ಚಿಂತಿಸಿ) ಆಹಾ ! ಹೀಗೇಕೆ ನನ್ನ ಬುದ್ಧಿಯು ವಿಪರೀತ ವಾಗಿ ಪ್ರವರ್ತಿಸಿತು ! ದೇವಸಭೆಯಲ್ಲಿ ರೂಪಲಾವಣ್ಯಗಳಿಂದ ಲೋಕಪ್ರಖ್ಯಾತರಾದ ರಂಭೆ, ಊಧ್ವತಿ, ತಿಲೋತ್ತಮೆ, ಮೊ ದಲಾದ ಅಪ್ಪರಸಿಯರಮುಂದೆ ನಿಂತು, ಅನೇಕಾವರ್ತಿ ಅವರ ಗಾನನರ್ತನಗಳನ್ನು ನೋಡುತ್ತಿದ್ದಾಗಲೂ ಸ್ವಲ್ಪ ಮಾತ್ರವೂ ಕದಲದ ನನ್ನ ಮನಸ್ಸು, ಈ ನೀವ್ಯಕ್ತಿಯನ್ನು ಒಂದಾವರ್ತಿ ನೋಡಿದಮಾತ್ರಕ್ಕೆ, ಹಿಂದೆ ಯಾವಾಗಲೂ ಕಂಡುಕಾಣದ ಕಾಮವಿಕಾರದಿಂದ ಕುದಿಯುತ್ತಿರುವುದಲ್ಲಾ ! ಆ ಕನೈಯು ಸಾ ಮಾನ್ಯಸಿಯಾಗಿದ್ದರೆ, ಎಂದಿಗೂ ಹೀಗಾಗಲಾರದು ! ಲೋ ಕದಲ್ಲಿ ನನಗಿಂತಲೂ ವಿರಕ್ತರಿಲ್ಲವೆಂದು ತಿಳಿದಿದ್ದ ನನ್ನ ಗತ್ವವನ್ನು ಮುರಿಯಬೇಕೆಂದೆಣಿಸಿ, ನನ್ನನ್ನು ಮೋಹಪಾಶದಲ್ಲಿ ಕಟ್ಟಿಡುವು ದಕ್ಕಾಗಿ ಭಗವನ್ಮಾಯೆಯೇ ಈ ಆಕಾರದಿಂದ ನನ್ನ ಕಣ್ಣಿಗೆ ಕಾ ಣಿಸಿರಬಹುದೆ? ಹೌದು ! ಹಾಗೆಯೇ ಇರಬೇಕು ! ಸಂದೇಹವಿಲ್ಲ! ನಾನು ತ್ರಿಲೋಕಸಂಚಾರಿಯಾಗಿ, ಸರಾತಿಶಯವಾದ ರೂಪ ಸೌಂದರೆಗಳನ್ನು ನೋಡಿದ್ದರೂ, ಮೊಹಾಕುಲವಾಗದ ನನ್ನ ಮನಸ್ಸು, ಈಗ ಅಕಸ್ಮಾತ್ತಾಗಿ ಇಸ್ಥಿತಿಯನ್ನು ಹೊಂದಬೇಕಾ ದರೆ, ಇದು ಭಗವನ್ನಾ ಯೆಯೆಂಬುದರಲ್ಲಿ ಸಂದೇಹವೇನಿದೆ ? ಈಗ ನಾನು ಯಾವವಿಧದಲ್ಲಿ ನನ್ನ ಮನಸ್ಸನ್ನು ಶಾಂತಿಯಿಂದಿ ಸಲಿ! (ಚಿಂತಿಸುತ್ತ ಯಾವ ವಿಧದಿಂದಲೂ ಸಾಧ್ಯವಲ್ಲ ? ಆಹಾ! ಸಮಸ್ತಲೋಕಕ್ಕ ವಿಷಯವೈರಾಗ್ಯವನ್ನು ಪದೇಶಿಸ ತಕ್ಕೆ ನಾನೇ'ಹೀಗೆ ಕಾಮಪಾಶದಲ್ಲಿ ಕಟ್ಟುಬಿದ್ದ ಮೇಲೆ, ಈ ನನ್ನ ವೇಷಗಳೆಲ್ಲವೂ ಕೇವಲ ಕಪಟವೆನಿಸುವುದಿಲ್ಲವೆ?