ಪುಟ:ಶ್ರೀಮತಿ ಪರಿಣಯಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಂಕ೦. ನೋಡಿ ನಾನು ಕಾಮಿಸಿದವನಲ್ಲ! ಅಥವಾ ನನಗೆ ಮೊದ ಲಿದ್ದ ಒಬ್ಬಳು ಪತ್ನಿ ಯನ್ನು ವಂಚಿಸಿ, ಬೇರೊಬ್ಬಳನ್ನು ಕಾ ವಿಸಿದವನಲ್ಲಿ! ಆ ರಾಜಕುಮಾರಿಯು ಅವಿವಾಹಿತಳಾದ ಕನೈ ! ನಾನೋ ಬ್ರಹ್ಮಚಾರಿ ! ಈ ವಿವಾಹದಲ್ಲಿ ತಪ್ಪೇನು? ಪರಸ್ತ್ರೀಕಾಮುಕರಾಗಿ ಪ್ರವರ್ತಿಸುವವರಿಗಿಂತಲೂ, ನನ್ನ ಸ್ಥಿತಿ ಯೇ ಮೇಲಲ್ಲವೆ ? ಮನುಷ್ಯನ ಮನಸ್ಸನ್ನು ಉನ್ಮಾರ್ಗದಲ್ಲಿ ಪ್ರವರ್ತಿಸದಂತೆ ತಡೆದಿಡುವುದಕ್ಕೆ ಗೃಹಸ್ಥಾಶ್ರಮವೇ ದುರ್ಗವೆಂ ದು ಹೇಳುವರು. ಆದರೆ ಇದುವರೆಗೆ ವಿರಕ್ಕನಾಗಿ, ತಾಪಸವೇಷ ದಿಂದಿದ್ದು, ಈಗ ಕಾಮುಕನಾಗಿ ಪ್ರವರ್ತಿಸುವುದು ದೋಷ ವಲ್ಲವೆ ? ಎಂದರೆ, ಇದರಂತೆ ಹಿಂದೆ ಎಷ್ಟೋ ನಿದರ್ಶನಗಳುಂಟು! ಮಹಾತಪಸ್ವಿಯಾದ ವಿಶ್ವಾಮಿತ್ರನು, `ಮೇನಕೆಯೆಂಬ ವೇಶ್ಯ ಯನ್ನು ಪರಿಗ್ರಹಿಸಲಿಲ್ಲವೆ ! ಕಾಮಕ್ರೀಡೆಯಲ್ಲಿದ್ದ ಮದಂ ಪತಿಗಳನ್ನು ನೋಡಿ ಸೌಭರಿಯು, ಕಾಮವಶನಾಗಿ ಕುಟುಂಬ ಧಕ್ಕೆ ಆಸೆಪಡಲಿಲ್ಲವೆ ? ತಪೋನಿರತನಾಗಿದ್ಯ ಚ್ಯವನನು, ಸು ಕಸ್ಯೆಯನ್ನು ಪರಿಗ್ರಹಿಸಲಿಲ್ಲವೆ ? ನಾನುಮಾತ್ರ ದೋಷಿಯಾಗು ವೆನೆ ? ಇದಲ್ಲದೆ ಇಂತಹ ಭೋಗಾನುಭವದಿಂದಲೂ ಎಷ್ಟೋ ಗುಣವುಂಟು! ಮನುಷ್ಯನಿಗೆ, ತನ್ನ ಪಾಪಪುಣ್ಯ ಕಮ್ಮಗಳೆಲ್ಲವನ್ನೂ ಅನುಭವಿಸಿ ಕಳೆದಹೊರತು ಮೋಕ್ಷವಿಲ್ಲವೆಂದು ಹೇಳುವರು.ಆದು ದರಿಂದಮೋಕ್ಷಾರಿಗಳು ಪಾಪಕ್ಕೆ ಹೆದರುವಂತೆ, ಪುಣ್ಯಕ್ಕೂ ಹೆದ ರಲೇಬೇಕು! ಇದುವರೆಗೆ ಇಹಲೋಕಸುಖವನ್ನೇ ಕಾಣದೆ, ಗ್ರಾ ಮೈಕರಾತ್ರನಾಗಿ ಸಂಚರಿಸಿ, ಪಡಬಾರದ ಕಷ್ಟಗಳನ್ನು ಪಟ್ಟು, ಅದರಿಂದ ನನ್ನ ಪಾಸಶೇಷವೆಲ್ಲವೂ ಕಳೆದುಹೋಯಿತು. ಈಗ ಕುಟುಂಬಭೋಗದಿಂದ ಪುಣ್ಯಶೇಷವೂ ಕಳೆದುಹೋಗಲಿ ! ಆ ಕಸ್ಯೆಯನ್ನು ಕೈಸೇರಿಸಿಕೊಳ್ಳಬೇಕಾದುದೇ ಈಗಿನ ಅವಶ್ಯಕ ರವು, ಅದಕ್ಕೇನುಪಾಯವನ್ನು ಮಾಡಲಿ ! ನಾನಾಗಿಯೇ ಬಾಯಿಬಿಟ್ಟು, ರಾಜನನ್ನು ಕೇಳಿಬಿಡಲೆ ? © ! ಛೇ ! ನಾಚಿಕೆ ಯಿಲ್ಲದೆ ಹೇಗೆ ಕೇಳಲಿ !