ಪುಟ:ಶ್ರೀಮತಿ ಪರಿಣಯಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ಶ್ರೀಮತೀಪರಿಣಯಂ ರಾಜಂ-ಅದಕ್ಕೆ ತಡೆಯೇನು ? ಸಾಧುಗಳ ಸ್ವಭಾವವೇ ಇದು ! ಇತರರ ಸುಖದುಃಖಗಳಿಗೆ ಸಮಭಾಗಿಗಳಾಗುವುದೇ ಮಹಾತ್ಮರ ಲಕ್ಷಣ ವಲ್ಲವೆ ? ನಾರದಂ-ನಾವಿಬ್ಬರೂ ಸುಮ್ಮನೆ ನಮ್ಮ ನಮ್ಮ ಮನಸ್ಸಿನಲ್ಲಿ ಕೊರಗುವು ದರಿಂದ ಫಲವಿಲ್ಲ ! ಕಾಠ್ಯಸಾಧನೆಗೆ ತಕ್ಕ ಉಪಾಯವನ್ನು ನೋ ಡಬೇಕಲ್ಲವೆ ? ರಾಜಂ-ಹಾದು ! ನಿಜವೆ! ಆದರೆ ನಮ್ಮ ಯತ್ನವೇನಿದೆ ? ನಾರದಂ-ರಾಜಾ ! ಹಾಗಲ್ಲ ! ಇದುವರೆಗೆ ನಾನು ಏಕಾಕಿಯಾಗಿ ಇಲ್ಲಿ ಕುಳಿತು ಯೋಚಿಸಿದುದರಲ್ಲಿ, ನನ್ನ ಮನಸ್ಸಿಗೆ ಒಂದುಪಾಯವು ತೋರಿತು. ರಾಜಂ-(ಸಂತೋಷದಿಂದ) ಪೂಜ್ಯರೆ ! ಅದೇನೆಂಬುದನ್ನು ಅನುಗ್ರಹಿಸಿದ ರೆ ತಿರಸಾವಹಿಸಿ ನಡೆದುಕೊಳ್ಳುವೆನು. ನಾರದಂ-ನಿನ್ನ ಮಗಳಿಗೇನೋ ಇದುವರೆಗೂ ತಕ್ಕ ವರನು ಲಭಿಸಲಿಲ್ಲ! ರಾಜಂ-ಹಾದು!ಅದಕ್ಕಾಗಿಯೇ ನನ್ನ ಮನಸ್ಸು ಚಿಂತಿಸುತ್ತಿರುವುದು. ನಾರದಂ-ನಿನ್ನ ಕುಮಾರಿಯ ರೂಪಲಾವಣ್ಯಾದಿಗಳನ್ನು ನೋಡಿದರೆ, ಮುಂದೆಯಾದರೂ ನಿಮ್ಮ ಕ್ಷತ್ರಿಯಕುಲದಲ್ಲಿ ಅವಳಿಗೆ ತಕ್ಕವರ ನು ಸಿಕ್ಕುವುದೇನೋ ದುರ್ಲಭವು ! ಅವಳ ವಿವಾಹವಿಷಯ ದಲ್ಲಿ ನಿನಗುಂಟಾಗಿರುವ ವ್ಯಾಕುಲತೆಯನ್ನು ಹೇಗಾದರೂ ತಪ್ಪಿ ಸಬೇಕೆಂದು ನನಗೆ ತೋರಿತು. ಆದುದರಿಂದ ಈಗ ನಾನು,ನನ. ಸನ್ಯಾಸಧರವನ್ನಾದರೂ ಪರಿತ್ಯಜಿಸಿ, ನಾನೇ ನಿನ್ನ ಮಗಳನ್ನು ವಿವಾಹಮಾಡಿಕೊಂಡು, ನನ್ನ ತಪೋಬಲದಿಂದ ಅವಳನ್ನು ರಾ ಜಮಹಿಷಿಯರಿಗಿಂತಲೂ ಉತ್ತಮವಾದ ಸ್ಥಿತಿಯಲ್ಲಿರಿಸಬೇಕೆಂಬ ಹಠವು ನನ್ನ ಮನಸ್ಸಿಗೆ ಹುಟ್ಟಿರುವುದು, ಇದಕ್ಕೆ ನಿನ್ನ ಅಭಿಪ್ರಾ ಯವೇನು ಹೇಳು! ರಾಜಂ-(ನಗುತ್ತ) ಪೂಜ್ಯರೆ : ತಮಗೆ ನನ್ನಲ್ಲಿರತಕ್ಕ ಅಸಾಧಾರಣವಾ ತೃಲ್ಯವು, ತಾವು ಮನಸ್ಸಿನಿಂದಲೂ ಸ್ಮರಿಸಬಾರದ