ಪುಟ:ಶ್ರೀಮತಿ ಪರಿಣಯಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಂಕಂ. ಯಿಯ ಕೋರಿಕೆ! ಅದಕ್ಕೆ ಲೋಪವಿಲ್ಲದೆ ನೋಡಿಕೊಳ್ಳುವ ಭಾ ರವು ನನಗಿರಲಿ: ನನ್ನ ಯೋಗಬಲದಿಂದಲೇ ನಿನ್ನ ಮಗಳಿಗೆ ಸಮ ಸಸೌಭಾಗ್ಯಗಳನ್ನೂ ಕೈಗೂಡಿಸುವೆನು. ಬೇಕಾದರೆ ನಾನೇ ಹೋಗಿ ನಿನ್ನ ಪತ್ನಿಗೆ ಈ ವಿಷಯದಲ್ಲಿ ನಂಬಿಕೆಯನ್ನು ಹುಟ್ಟಿಸಿ ಬರುವೆನು ಇನ್ನೇನೂ ಸಂದೇಹವಿಲ್ಲವಷ್ಟೆ ? ರಾಜಂ-ಸಂದೇಹವೇನಿದೆ? ಇನ್ನು ತಾವು ದಯಮಾಡಿಸಿ, ಆತಿಥ್ಯವನ್ನು ಸ್ಪಿ ಕರಿಸಬಹುದಷ್ಟೆ? ನಾರದಂ-ರಾಜೇಂದಾ ! ಸೂರನು ಗಗನಮಧ್ಯವರ್ತಿಯಾಗಿರುವನು. ನಾನು ಪ್ರತವನ್ನೂ ಕರೆದುಕೊಂಡು,ನದಿಗೆ ಹೋಗಿ ಮಾಧ್ಯಾ ಕ್ರಿಕವನ್ನು ತೀರಿಸಿಕೊಂಡು ಬರುವೆನು ! ನೀನು ಹೊರಡು? (ರಾಜನೂ, ನಾರದನೂ ಬೇರೆಬೇರೆ ಕಡೆಗೆ ಹೊರಡುವರು.ನಾರ ದನು ಪುನಃ ಪ್ರವೇಶಿಸಿ) ನಾನು ಪರೈತನಿಗಾಗಿ ನಿರೀಕ್ಷಿಸುವು ದು ಸರಿಯಲ್ಲ! ಈಗ ನಾನು ಅವನೊಡನೆ ಸೇರಿದರೆ, ನನ್ನ ಮನೋ ಭಾವವು ಹೇಗಾದರೂ ಅವನಿಗೆ ತಿಳಿದುಹೋಗುವುದು, ಅವನು ನಿಜವಾಗಿಯೂ ನನಗೆ ಹಿತೈಷಿಯಾದುದರಿಂದ, ಈ ನನ್ನ ಬುದ್ಧಿ ಮೋಹವನ್ನು ತಪ್ಪಿಸುವುದಕ್ಕಾಗಿ ಯತ್ನಿ ಸುವನು. ನನ್ನ ಮುಂದೆ ಯೇ ನನ್ನನ್ನು ಹಾಸ್ಯ ಮಾಡುವುದಲ್ಲದೆ, ರಾಜನಿಗೂ ರಹಸ್ಯವಾ ಗಿ ಬೋಧಿಸಿ, ಈ ಕಾರಕ್ಕೆ ವಿಘಾತವನ್ನು ಂಟುಮಾಡಬಹುದು. ಕಾಠ್ಯಸಾಧನೆಯಾಗುವವರೆಗೆ ಅವನ ಕಣ್ಣಿಗೆ ಬೀಳದೆ, ಬೇರೆಲ್ಲಿ ಗಾದರೂ ಹೊರಟುಹೋಗುವುದೇ ಮೇಲು ! ಆದುದರಿಂದ ಅವ ನು ಇಲ್ಲಿಗೆ ಹಿಂತಿರುಗಿಬರುವಷ್ಟರಲ್ಲಿ, ಬೇರೆ ದಾರಿಯಿಂದ ಕಣ್ಮರೆ ಯಾಗಿ ಹೊರಟುಹೋಗುವೆನು (ಹೋಗುವನು.) (ಇತ್ತಲಿಂದ ಪಕ್ವತನು ಪ್ರವೇಶಿಸುವನು.) ಪಕ್ವತಂ-(ಉದ್ಯಾನವನ್ನು ಸುತ್ತಿ ನೋಡಿ) ಓಹೋ ! ಇದೇನು ? ಆಗಲೇ ಎಲ್ಲರೂ ಹೊರಟುಹೋಗಿರುವರು ! ನಾರದನೂ ಅವರ ಜತೆ ಯಲ್ಲಿಯೇ ಅರಮನೆಗೆ ಹೋಗಿರಬಹುದು! ಇರಲಿ ! ನಾನೂ