ಪುಟ:ಶ್ರೀಮತಿ ಪರಿಣಯಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಶ್ರೀಮತೀಪರಿಣ್ಯಂ ಕೇತಾರಗೌಳ-ರೂಪಕತಾಳ. ಅಂತರಂಗದ | ಚಿಂತೆಯೆನ್ನ ನು || ಸಂತತ ಬಾಧಿಪ್ರ !! ದಂತ || ಎಂತು ನೋಡಿದೆ! ಡೆನ್ನ ಮನವು | ಶಾಂತಿಯ ! ನೊಂದದೆ | ಸಂತ ಪಿಪುದು! ಇಂದುವದನೆ ಯೆನ್ನ ನಂದನೆ | ಕುಂದಕುಸುಮ | ಸುಂದರರದನೆ | ಸುಂದರಾಂಗನ ಕೈಯ ಪಿಡಿದು { ಚ೦ದದಿ ನಡೆವುದ ನೆಂದು ನಾನೇನೋ!! ಅಂಗನಾಜನವೆಲ್ಲ ಕೂಡಿ ) ತುಂಗವಿಭವದಿಂದ ಪಾಡಿ| ಮಂಗಳಾಂಗಿಗೆ ಪರಿಣಯೋಚಿತ 1 ಮಂಗ 1 ಇಂಗಳ | ನೆಂದು ಮಾನ್ಸರೆ! ಸಖಿ-ದೇವಿ! ಸುಮ್ಮನೆ ಚಿಂತಿಸಿ ಫಲವೇನು? ಹೆಣ್ಣು ಮಕ್ಕಳನ್ನು ಪಡೆದ ವರಿಗೆ ಹೇಗಿದ್ದರೂ ಈ ಚಿಂತೆಯು ತಪ್ಪಿದುದಲ್ಲ ! ಲೋಕಯಾ ತ್ರೆಯೇ ಹೀಗೆ? ಕಾಲವು ಅನುಕೂಲಿಸಿಬಂದರೆ, ನಮ್ಮ ಪ್ರಯತ್ನ ವಿಲ್ಲದಂತೆಯೇ ಕಾರವು ನಡೆದುಹೋಗುವುದು ! ಅದುವರೆಗೆ ಮನಸ್ಸಮಾಧಾನದಿಂದ ನಿರೀಕ್ಷಿಸಬೇಕಾದುದೊಂದೇ ನಮ್ಮ ಕಾರವು. ರಾಣಿ-ಸಖಿ : ಇನ್ನು ಕಾಲನಿರೀಕ್ಷಣೆಯಿಂದತಾನೇ ಫಲವೇನು ? ಎಲ್ಲಾ ದೇಶದ ರಾಜಕುಮಾರರ ಭಾವಚಿತ್ರಗಳನ್ನೂ ತರಿಸಿನೋಡಿದು ವಾಯಿತಲ್ಲವೆ? ನಮ್ಮ ರಾಜಕುಲದಲ್ಲಿ ಇದುವರೆಗೆ ಸಿಕ್ಕದ ವರನು ಮುಂದೆಲ್ಲಿ ಸಿಕ್ಕುವನು ? ಸಖಿ-ದೈವಫುಟನೆಯನ್ನು ಯಾರು ಬಲ್ಲರು ? ರಾಜಕುಲದವನಿಲ್ಲದಿದ್ದರೆ ಅದಕ್ಕಿಂತಲೂ ಉತ್ತಮಕುಲದವನೇ ನಿನ್ನ ಮಗಳಿಗೆ ಪ್ರತಿಯಾಗಿ ಏರ್ಷ್ಪಡಬಹುದು ? ಅಥವಾ ಯಾವನಾದರೂ ದಿವ್ಯಪುರುಷ ನೊಬ್ಬನು ಬಂದು, ನಿನ್ನ ಮಗಳನ್ನು ವರಿಸಿದರೂ ವರಿಸಬಹುದು ಇನ್ನು ನೀವು ಅದರ ಚಿಂತೆಯನ್ನು ಬಿಟ್ಟುಬಿಡು! (ಪಕ್ವತಮುನಿಯು ಪ್ರವೇಶಿಸುವನು.) ರಾಣಿ (ಸಂಭ್ರಮದಿಂದೆದ್ದು ಪೂಜ್ಯರೆ ! ವಂದಿಸುವೆನು. ಪಕ್ವತಂ-ದೇವಿ ! ನಿನಗೆ ಶುಭವಾಗಲಿ! ರಾಣಿ-ಈ ಪೀಠವನ್ನಲಂಕರಿಸಬೇಕು !