ಪುಟ:ಶ್ರೀಮತಿ ಪರಿಣಯಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಂಕಂ. ಪಕ್ವತಂ-ಅಮ್ಮಾ ! ನಾನು ವಸಂತೋದ್ಯಾನವನ್ನು ನೋಡಿ ಬರು ವಷ್ಟರಲ್ಲಿ, ನೀವು ಅಲ್ಲಿಂದ ಹೊರಟುಬಂದಹಾಗಿದೆ!ನಾರದನೆಲ್ಲಿ? ರಾಣಿ-ಪೂಜ್ಯರೆ! ವಸಿಷ್ಠಾಜ್ಯಾದುದರಿಂದ, ನಾವು ಮುಂದಾಗಿ ಹೊ ರಟುಬಂದೆವು. ಈಗ ನಾರದಮಹರ್ಷಿಯು ರಾಜಸಾನ್ನಿಧ್ಯದಲ್ಲಿ ರಬಹುದು. ಪತಂ-ಚಿಂತೆಯಿಲ್ಲ ! ಇರಲಿ ! ಈ ನಿನ್ನ ಸಖಿಯನ್ನು ಕಳುಹಿಸಿ, ನಾರ ದನೆಲ್ಲಿರುವನೆಂಬುದನ್ನು ತಿಳಿದುಬರುವಂತೆ ಹೇಳು ! ರಾಣಿ-ಸಖಿ : ಬೇಗನೆ ಹೋಗಿ ಬಾ ! ಸಖಿ-ಅಪ್ಪಣೆ, (ಎಂದು ಹೋಗುವಳು ) ಪಕ್ವತಂ- ಅತ್ತಿತ್ತ ತೆರೆಯಕಡೆಗೆ ನೋಡಿ. ದೇವಿ! ಈಗ ನಾನು ನಿನ್ನಲ್ಲಿಗೆ ಬಂದ ಉದ್ದೇಶವೇ ಬೇರೆ? ಆಕಾರನಿಲ್ಯಾಹವಾಗುವವರೆಗೆ ಆ ದನ್ನು ಬಹಳ ರಹಸ್ಯವಾಗಿಟ್ಟಿರಬೇಕು. ರಾಣಿ-ಪೂಜ್ಯರೆ ! ಆಜ್ಞೆಯಂತೆಯೇ ನಡೆಯುವೆನು. ಧಾರಾಳವಾಗಿ ತಿಳಿಸ ಬಹುದು. ಪರತಂ-ಬೇರೇನೂ ಇಲ್ಲ ! ಆ ಉದ್ಯಾನವನದಲ್ಲಿ, ನಾನು ನಿನ್ನ ಮಗಳಾದ ಶ್ರೀಮತಿಯನ್ನು ನೋಡಿದುದುಮೊದಲು, ನನಗೆ ಅವಳೊಡನೆ ಗೃಹಸ್ಥದಲ್ಲಿರಬೇಕೆಂಬ ಆಸೆಯು ಹುಟ್ಟಿರುವುದು ಅವಳ ನ್ನು ನನಗೆ ವಿವಾಹಮಾಡಿಕೊಡುವುದಾದರೆ, ನಿನಗೂ ವರಾನ್ವೇ ಷಣದ ಕಷ್ಟವು ತಪ್ಪುವುದು ನನ್ನ ಆಸೆಯೂ ತೀರುವುದು! ಈ ನ « ವೈದಿಕವೇಷವನ್ನು ನೋಡಿ ಸಂದೇಹಪಡಬೇಕಾದುದಿಲ್ಲ! ಅವ ಳಿಗೆ ಯಾವ ಸುಖದಲ್ಲಿಯೂ ಲೋಪವಿಲ್ಲದಂತೆ ನೋಡಿಕೊಳ್ಳುವ ಭಾರವು ನನಗಿರಲಿ ! ನನ್ನ ಯೋಗಬಲದಿಂದಲೇ ಅವಳಿಗೆ ಸಮಸ್ಯ ಸಾಮ್ರಾಜ್ಯಭೋಗಗಳನ್ನೂ ಕೈಗೂಡಿಸಬಲ್ಲೆನು. ರಾಣಿ- ಆಶ್ವರದಿಂದ ಸ್ವಗತಂ)ಏನಿದು ! ಇಂತಹ ಪರಮವಿರಕ್ತರಿಗೂ ಕುಟುಂಬಧಮ್ಮದಲ್ಲಿ ಆಸೆ ಹುಟ್ಟಿತೆ? ಒಂದುವೇಳೆ ಈ ಮಹರ್ಷಿಯು ನನ್ನ ಮನಸ್ಸನ್ನು ಪರೀಕ್ಷಿಸುವುದಕ್ಕಾಗಿ ಕೇಳಿರುವನೋ, ಇಲ್ಲವೇ